ಕಾನೂನಿಂದ ಬೇರ್ಪಟ್ಟ ಇವರು ನೆಟ್​ಫ್ಲಿಕ್ಸ್​ನಿಂದ ಒಂದಾಗಿದ್ದಾರೆ! ಫೋಟೋ ಜತೆಗೆ ಸಚಿವರ ಶೀರ್ಷಿಕೆಯೂ ವೈರಲ್…

Viral Photo
Published on

ನಾಗಾಲ್ಯಾಂಡ್: ಕೈಗೆ ಬೇಡಿ ತೊಡಿಸಿಕೊಂಡ ಕೈದಿಯೊಬ್ಬ, ಪಕ್ಕದಲ್ಲಿ ಕುಳಿತಿದ್ದ ಪೊಲೀಸ್ ಕಾನ್​​ಸ್ಟೇಬಲ್​ ಒಬ್ಬರ ಮೊಬೈಲ್ ವೀಕ್ಷಣೆ ಮಾಡುತ್ತಿರುವ ಫೋಟೋವೊಂದು ಕೆಲ ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದೀಗ ಈ ಫೋಟೋವನ್ನು ನಾಗಾಲ್ಯಾಂಡ್​ನ ಬಿಜೆಪಿ ಸಚಿವ ತೆಮ್ಜೆನ್ ಇಮ್ನಾ ಅಲಾಂಗ್ ಟ್ವಿಟರ್​ನಲ್ಲಿ ಹಂಚಿಕೊಂಡಿದ್ದು, ತಮಾಷೆಯಾಗಿ ಕ್ಯಾಪ್ಶನ್ ಕೂಡ ನೀಡಿದ್ದಾರೆ.

''ಇಬ್ಬರನ್ನು ಕಾನೂನಿನ ಮೂಲಕ ವಿಂಗಡಿಸಲಾಗಿದೆ - ನೆಟ್​ಫ್ಲಿಕ್ಸ್ ಮೂಲಕ ಒಂದುಗೂಡಿಸಲಾಗಿದೆ"(Divided by law, united by Netflix...) ಎಂದು ಟ್ವಿಟರ್​​ನಲ್ಲಿ ಸಚಿವ ತೆಮ್ಜೆನ್ ಇಮ್ನಾ ಅಲಾಂಗ್ ಬರೆದುಕೊಂಡಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಸಾಕಷ್ಟು ಕಮೆಂಟ್​ಗಳು ಬಂದಿದ್ದವು. ಇದೀಗ ಸಚಿವ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಳ್ಳುತ್ತಿದ್ದಂತೆ ಅನೇಕರು ತಮಾಷೆಯಾಗಿ ಕಮೆಂಟ್ ಮಾಡುತ್ತಿದ್ದಾರೆ.

ಫೋಟೋ ವೈರಲ್...

ಪೊಂಜಿತ್ ದೋವಾರಾ ಎಂಬ ಪೊಲೀಸ್ ಅಧಿಕಾರಿಯೊಬ್ಬರು ಸಚಿವರ ಟ್ವೀಟ್​ಗೆ ಪ್ರತಿಕ್ರಿಯಿಸಿ, ಕಾನೂನಿನಿಂದ ಬೇರ್ಪಟ್ಟ ಇವರು, ಐಪಿಎಲ್​ನಿಂದ ಒಂದುಗೂಡಿದ್ದಾರೆ ಎಂದು ಕಮೆಂಟ್ ಮಾಡಿದ್ದಾರೆ. ಸದ್ಯ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಾಗಿ ಹರಿದಾಡುತ್ತಿದೆ. ಈ ಫೋಟೋವನ್ನು ಅನೇಕ ಟ್ರೋಲ್​ ಪೇಜ್​ಗಳು ಬಳಸಿಕೊಳ್ಳುತ್ತಿವೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net