ದತ್ತು ಮಕ್ಕಳ ಜೊತೆಗೆ ದೀಪಾವಳಿ ಆಚರಣೆ ಮಾಡಿದ ಸಚಿವ ಸುಧಾಕರ್...

Sudhakar
Published on

ಚಿಕ್ಕಬಳ್ಳಾಪುರ: ಕರೊನಾ ಸಮಯದಲ್ಲಿ ಹೆತ್ತವರನ್ನು ಕಳೆದುಕೊಂಡ ಅನಾಥರಾಗಿದ್ದ 9 ಮಕ್ಕಳನ್ನು ಆರೋಗ್ಯ ಸಚಿವ ಕ.ಸುಧಾಕರ್ ದತ್ತು ತೆಗೆದುಕೊಂಡಿದ್ದರು. ಇದೀಗ ಅವರ ಜೊತೆಗೆ ದೀಪಾವಳಿ ಹಬ್ಬವನ್ನು ಸಂಭ್ರಮಯುತವಾಗಿ ಆಚರಿಸಿದ್ದಾರೆ.

ಸುಧಾಕರ್ 9 ಮಕ್ಕಳನ್ನು ದತ್ತು ತೆಗೆದುಕೊಂಡು ಅವರ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡಿದ್ದರು. ಇದೀಗ ದೀಪಾವಳಿ ನಿಮಿತ್ತ ಅವರನ್ನು ಭೇಟಿಯಾಗಿ ಹಬ್ಬದ ಊಟ ಸವಿದಿದ್ದಾರೆ. ದತ್ತು ಮಕ್ಕಳಿಗೆ 1 ಲಕ್ಷ ರೂ. ಹಣ ಸಹಾಯ ಮಾಡಿದ್ದಾರೆ. ಮಕ್ಕಳ ಶಿಕ್ಷಣದ ಜವಾಬ್ದಾರಿಯನ್ನು ಸಾಯಿಕೃಷ್ಣ ಚಾರಿಟಬಲ್ ಟ್ರಸ್ಟ್ ನೋಡಿಕೊಳ್ಳುತ್ತಿದೆ ಎಂದು ಹೇಳಿದರು.

ಈ ವೇಳೆ ಮಕ್ಕಳೆಲ್ಲರೂ ಭವಿಷ್ಯದಲ್ಲಿ ಯಶಸ್ವಿ ಜೀವನ ನಡೆಸುವಂತಾಗಬೇಕು. ಮತ್ತೊಬ್ಬರ ಬಾಳಿಗೆ ಬೆಳಕಾಗುವ ಪುಣ್ಯ ಕಾರ್ಯ ಮಾಡಲು ನನಗೆ ಪ್ರೇರೇಪಣೆ ನೀಡಿದ ಭಗವಂತನಿಗೆ ವಂದನೆಗಳು ಎಂದು ಸಚಿವ ಸುಧಾಕರ್ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net