ಶಾಸಕ ಯತ್ನಾಳ್ ಗೆ ಸಚಿವ ಶಿವಾನಂದ ಪಾಟೀಲ ರಾಜೀನಾಮೆ ಸೆಡ್ಡು‌|Disappointed with humilation

IMG-20250502-WA0022
Published on

ಬೆಂಗಳೂರು: ಶಾಸಕ ಸ್ಥಾನಕ್ಕೆ ದಿಢೀರ್ ಷರತ್ತುಬದ್ಧ ರಾಜೀನಾಮೆ ನೀಡಿದ ಸಕ್ಕರೆ ಸಚಿವ ಶಿವಾನಂದ ಪಾಟೀಲ, ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಗೆ ರಾಜೀನಾಮೆಯ ಪಂಥಾಹ್ವಾನ ನೀಡಿದ್ದಾರೆ.

ವಿಧಾನಸೌಧದಲ್ಲಿ ಸ್ಪೀಕರ್ ಯು.ಟಿ.ಖಾದರ್ ಅವರನ್ನು ಶುಕ್ರವಾರ ಭೇಟಿ ಮಾಡಿ ರಾಜೀನಾಮೆ ಪತ್ರ ಸಲ್ಲಿಸಿದ ಶಿವಾನಂದ ಪಾಟೀಲ, ಶಾಸಕ ಸ್ಥಾನಕ್ಕೆ ಯತ್ನಾಳ್ ನೀಡುವ ರಾಜೀನಾಮೆಯನ್ನು ಅಂಗೀಕರಿಸಿದ ನನ್ನ ರಾಜೀನಾಮೆ ಅಂಗೀಕರಿಸಲು ಕೋರಿದ್ದಾರೆ.

ನಂತರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ವಿಜಯಪುರದಲ್ಲಿ ಮುಸ್ಲಿಮರು ಏರ್ಪಡಿಸಿದ್ದ ಪ್ರತಿಭಟನಾ ಸಮಾವೇಶದಲ್ಲಿ ಭಾಗಿಯಾಗಿದ್ದೆ. ಇದೇ ಕಾರಣಕ್ಕೆ ಶಾಸಕ ಯತ್ನಾಳ್ ನನ್ನ ವಿರುದ್ಧ ವೈಯಕ್ತಿಕವಾಗಿ ನಿಂದಿಸುವ ಜತೆಗೆ ತೇಜೋವಧೆ ಮಾಡುವಂತಹ ಹೇಳಿಕೆ ನೀಡಿದ್ದಾರೆ. ಪದೇ ಪದೆ ಇಂತಹ ಹೇಳಿಕೆಗಳಿಂದ ನೊಂದಿದ್ದೇನೆ ಎಂಬ ಬೇಸರ ಹೊರ ಹಾಕಿದರು.

ಸವಾಲು ಸ್ವೀಕಾರ

ಅಪ್ಪನಿಗೆ ಹುಟ್ಟಿದ್ದರೆ ಶುಕ್ರವಾರದೊಳಗೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಸವಾಲು ಹಾಕಿದ್ದರು. ಅದನ್ನು ಸ್ವೀಕರಿಸಿ ಸ್ಪೀಕರ್ ಗೆ ರಾಜೀನಾಮೆಪತ್ರ ಸಲ್ಲಿಸಿದ್ದೇನೆ. ಯತ್ನಾಳ್ ಕೂಡ ರಾಜೀನಾಮೆ ಸಲ್ಲಿಸಿ, ಹಿರೇಬಾಗೆವಾಡಿ ಅಥವಾ ವಿಜಯಪುರ ಯಾವುದೇ ಕ್ಷೇತ್ರದಲ್ಲಿ ಸ್ಪರ್ಧಿಸಲು ಸಿದ್ಧ ಎಂದು ಶಿವಾನಂದ ಪಾಟೀಲ್ ಪ್ರತಿ ಸವಾಲು ಹಾಕಿದರು‌.

ಕ್ಷೇತ್ರದ ಆಯ್ಕೆ ಅವರ ಇಚ್ಛೆಗೆ ಬಿಟ್ಟಂತೆ ರಾಜೀನಾಮೆಗೂ ಗಡುವು ನೀಡುವುದಿಲ್ಲ. ಅವರ ವಿವೇಚನೆಯಂತೆ ಬೇಕಿದ್ದ ದಿನ ರಾಜೀನಾಮೆ ನೀಡಲಿ. ಯತ್ನಾಳ್ ರ ಸವಾಲು ಸ್ವೀಕರಿಸಿದ್ದೇನೆ ಎನ್ನುವುದಕ್ಮೆ ಈ ನಿರ್ಧಾರ ಕೈಗೊಂಡಿರುವೆ ಎಂದು ಹೇಳಿದರು.

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ವಿಷಯವನ್ನು ಮುಖ್ಯಮಂತ್ರಿ ಗಮನಕ್ಕೆ ತಂದಿಲ್ಲ. ಇದು ನನ್ನ ವೈಯಕ್ತಿಕ ನಿರ್ಧಾರ. ಶಾಸಕ ಸ್ಥಾನಕ್ಕೆ ರಾಜೀನಾಮೆ ಅಂಗೀಕಾರವಾದರೆ ಸಚಿವ ಸ್ಯಾನ ಹೋಗುತ್ತದೆ, ಇದು ಸಹಜ. ವೈಯಕ್ತಿಕ ಘನತೆ-ಗೌರವಕ್ಮಿಂತ ಅಧಿಕಾರ ಮುಖ್ಯವಲ್ಲ ಎಂದು ಶಿವಾನಂದ ಪಾಟೀಲ ಸ್ಪಷ್ಟಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net