

ವಿಜಯವಾಣಿ ಸುದ್ದಿಜಾಲ ಧಾರವಾಡ
ತಾಲೂಕಿನ ವೆಂಕಟಾಪುರ ಗ್ರಾಮದ ಸಿದ್ಧರ ಕಾಲನಿಯಲ್ಲಿ ಇತ್ತೀಚೆಗೆ ಮನೆಯ ಗೋಡೆ ಕುಸಿದು ಮೃತಪಟ್ಟಿದ್ದ ಯಲ್ಲಪ್ಪ ಹಿಪ್ಪಿಯವರ ಮನೆಗೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಸೋಮವಾರ ಭೇಟಿ ನೀಡಿ ಸಂಬ೦ಧಿಕರಿಗೆ ಸಾಂತ್ವನ ಹೇಳಿದರು.
ಈ ವೇಳೆ ಸಚಿವ ಲಾಡ್ ಮಾತನಾಡಿ, ಪಕ್ಕದ ಮನೆಯ ಗೋಡೆ ಕುಸಿದು ಯಲ್ಲಪ್ಪ ಹಿಪ್ಪಿಯವರ ಮೃತಪಟ್ಟು, ಅವರ ಪತ್ನಿ ಹನಮವ್ವ ಹಾಗೂ ಪುತ್ರಿ ಯಲ್ಲವ್ವ ಗಾಯಗೊಂಡಿದ್ದಾರೆ. ಇಬ್ಬರಿಗೂ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮೃತನ ಕುಟುಂಬಕ್ಕೆ ಸ್ಥಳೀಯ ಶಾಸಕರ ಸಮ್ಮತಿಯೊಂದಿಗೆ ರಾಷ್ಟ್ರೀಯ ವಿಪತ್ತು ಪರಿಹಾರ ನಿಽಯಿಂದ 4 ಲಕ್ಷ ರೂಪಾಯಿ ಹಾಗೂ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ 1 ಲಕ್ಷ ರೂಪಾಯಿ ಪರಿಹಾರವನ್ನು ಈಗಾಗಲೇ ವಿತರಿಸಲಾಗಿದೆ ಎಂದರು.
ಸಿದ್ಧರ ಉ ಪಗ್ರಾಮ: ಸುಮಾರು 30 ವರ್ಷಗಳ ಹಿಂದೆ ಪುಣೆ- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಸಮೀಪದ ವೆಂಕಟಾಪುರದಲ್ಲಿ ಇಂದಿರಾ ಆವಾಸ್ ಯೋಜನೆಯಡಿ ನವಗ್ರಾಮ ನಿರ್ಮಿಸಿ ಮನೆಗಳನ್ನು ಕಟ್ಟಿಸಿ ಕೊಡಲಾಗಿದೆ. ನಂತರ ವಲಸೆ ಬಂದವರು ಹಾಗೂ ಗ್ರಾಮದ ಮನೆರಹಿತ ಕುಟುಂಬಗಳು ಸರ್ಕಾರಿ ಜಾಗದಲ್ಲಿ ಗುಡಿಸಲು ಹಾಕಿಕೊಂಡು ಬದುಕುತ್ತಿದ್ದಾರೆ. ಅವರಿಗೆ ಹಕ್ಕುಪತ್ರ ನೀಡಲು ಅನುವಾಗುವಂತೆ ಸಿದ್ಧರ ಉಪ ಗ್ರಾಮ ಎಂದು ಘೋಷಿಸಲು ಸಚಿವ ಜಿಲ್ಲಾಡಳಿತಕ್ಕೆ ನಿರ್ದೇಶಿಸಿದರು.
ಜಿಲ್ಲಾಽಕಾರಿ ದಿವ್ಯ ಪ್ರಭು ಮಾತನಾಡಿ, ಸ್ಥಳೀಯ ಶಾಸಕ ವಿನಯ ಕುಲಕರ್ಣಿ ಅವರ ಸೂಚನೆಯಂತೆ ಸಿದ್ಧರ ಉಪ ಗ್ರಾಮ ಘೋಷಣೆಗೆ ಈಗಾಗಲೇ ಕ್ರಮ ವಹಿಸಲಾಗಿದೆ. ಸಂಬAಽಸಿದ ಕಡತ ತಹಸೀಲ್ದಾರ್ ಹಂತದಲ್ಲಿದ್ದು, ಕಂದಾಯ ಇಲಾಖೆಗೆ ಸಲ್ಲಿಸಿ ಸಿದ್ಧರ ಉಪ ಗ್ರಾಮ ಮಾಡಲಾಗುವುದು. ಇದರ ವ್ಯಾಪ್ತಿಯ 32 ಕುಟುಂಬಗಳಿಗೆ ಹಕ್ಕುಪತ್ರ, ಮನೆ ನಿರ್ಮಾಣಕ್ಕೆ ಅಗತ್ಯ ಕ್ರಮ ವಹಿಸಲಾಗುವುದು ಎಂದರು.
ಜಿಲ್ಲಾ ಪೊಲೀಸ್ ಅಽÃಕ್ಷಕ ಡಾ. ಗೋಪಾಲ ಬ್ಯಾಕೋಡ, ಉಪ ವಿಭಾಗಾಕಾರಿ ಶಾಲಂ ಹುಸೇನ್, ತಹಸೀಲ್ದಾರ್ ಡಾ. ಡಿ.ಎಚ್. ಹೂಗಾರ, ಗುಳೇದಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷ ರಮೇಶ ಹೊಸಮನಿ, ಉಪಾಧ್ಯಕ್ಷ ಚಂದ್ರಶೇಖರ ಡೊಕ್ಕನ್ನವರ, ಪಿಡಿಒ ಲೀಲಾವತಿ ಓಲೆಕಾರ, ಗ್ರಾಮ ಆಡಳಿತಾಕಾರಿ ಅರವಿಂದ ಚವ್ಹಾಣ ಹಾಗೂ ಗ್ರಾಮದ ಮುಖಂಡರಿದ್ದರು.