

ಬೆಂಗಳೂರು: ಹಿರಿಯ ಸಾಮಾಜಿಕ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ವಿಚಾರದಲ್ಲಿ ಪರ-ವಿರೋಧದ ಚರ್ಚೆ ಭುಗಿಲೆದ್ದಿದ್ದು, ಸಾಹಿತಿ ದೇವನೂರು ಮಹಾದೇವ ಅವರು ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಅವರಿಗೆ ಸೋಮವಾರ ಪತ್ರವೊಂದನ್ನು ಬರೆದಿದ್ದರು. ಅದರ ಪ್ರತಿಯನ್ನು ಅವರು ಮಾಧ್ಯಮಗಳಿಗೂ ಬಿಡುಗಡೆ ಮಾಡಿದ್ದರು.
ಮಹಾದೇವ ಅವರ ಸುದೀರ್ಘ ಪತ್ರಕ್ಕೆ ಇದೀಗ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಚುಟುಕಾಗಿ ಪ್ರತಿಕ್ರಿಯಿಸಿದ್ದಾರೆ. ಅದು ಹೀಗಿದೆ ಓದಿ-
ನನ್ನ ಮಾತುಗಳ ಮೇಲೆ ನಿಯಂತ್ರಣವಿರಬೇಕು ಎಂದು ಸಮಾಜ ಹೇಗೆ ಬಯಸುತ್ತದೆಯೋ, ಅದೇ ರೀತಿಯ ನಿಯಂತ್ರಣ ಸಾವರ್ಕರ್ ಮತ್ತು ಪ್ರಧಾನಿ ಮೋದಿಯವರ ವಿರುದ್ಧ ಅಭಿಪ್ರಾಯ ವ್ಯಕ್ತಪಡಿಸುವಾಗಲೂ ಇರಬೇಕಲ್ಲವೇ.
- ಸುರೇಶ್ ಕುಮಾರ್, ಶಿಕ್ಷಣ ಸಚಿವ (ದೇವನೂರು, ದೊರೆಸ್ವಾಮಿ ಉದ್ದೇಶಿಸಿ)