ವಿದ್ಯೆ ಜತೆಗೆ ವಿನಯ ಮೈಗೂಡಿಸಿಕೊಳ್ಳಿ

10sor3 madubangarappa
ಸೊರಬದ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ಸರ್ಕಾರಿ ಪದವಿ ಕಾಲೇಜಿನ ವಿವಿಧ ಚಟುವಟಿಕೆಗಳ ಸಮಾರೋಪ ಕಾರ್ಯಕ್ರಮವನ್ನು ಸಚಿವ ಮಧು ಬಂಗಾರಪ್ಪ ಉದ್ಘಾಟಿಸಿದರು. ಡಾ. ವಿಶ್ವನಾಥ, ಡಾ. ಉಮೇಶ್ ಕುಂಸಿ, ಪ್ರಕಾಶ್ ಇತರರಿದ್ದರು.
Published on

ಸೊರಬ: ಶಿಕ್ಷಣಕ್ಕೆ ಸರ್ಕಾರ ಮೊದಲ ಆದ್ಯತೆ ನೀಡಿದ್ದು ವಿದ್ಯಾರ್ಥಿಗಳು ವಿದ್ಯೆ ಜತೆಗೆ ವಿನಯವನ್ನು ಮೈಗೂಡಿಸಿಕೊಂಡು ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.
ಪಟ್ಟಣದ ರಂಗಮಂದಿರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸರ್ಕಾರಿ ಪದವಿ ಕಾಲೇಜಿನ ಸಾಂಸ್ಕೃತಿಕ, ಕ್ರೀಡೆ, ಯುವ ರೆಡ್‌ಕ್ರಾಸ್ ಘಟಕಗಳ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಸಹೋದರಿ ಹಾಗೂ ಅಭಿಮಾನಿಗಳ ಸಹಕಾರದಲ್ಲಿ ಸ್ವಂತ ಹಣ ಬಳಸಿ ತಂದೆ ಬಂಗಾರಪ್ಪ ಅವರ ಸಮಾಧಿ ಸ್ಥಳವಾದ ಬಂಗಾರಧಾಮ ನಿರ್ಮಾಣ ಮಾಡಲಾಗಿದೆ. ವಿದ್ಯಾರ್ಥಿಗಳು ಬಂಗಾರಧಾಮದಲ್ಲಿ ೆಟೋ ಕ್ಲಿಕ್ಕಿಸಿಕೊಳ್ಳುತ್ತಿರುವುದನ್ನು ನೋಡಿ ಸಂತೋಷಗೊಂಡಿದ್ದೇನೆ ಎಂದರು.
ಪದವಿ ಕಾಲೇಜಿಗೆ ವಿಜ್ಞಾನ ಪ್ರಯೋಗಾಲಯ, ಸುಸಜ್ಜಿತ ಸಭಾಂಗಣ, ಮೈದಾನ ಸೇರಿದಂತೆ ಹೆಚ್ಚಿನ ಅಭಿವೃದ್ಧಿಗೆ ಬೇಕಾಗಿರುವ ಅನುದಾನವನ್ನು ಕೂಡಲೇ ಉನ್ನತ ಶಿಕ್ಷಣ ಸಚಿವರ ಜತೆಗೆ ಚರ್ಚಿಸಿ ತರಲಾಗುವುದು ಎಂದರು.
ಸಾಗರ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ. ಉಮೇಶ್ ಕುಂಸಿ ಸಮಾರೋಪ ಭಾಷಣ ಮಾಡಿ, ಬದ್ಧತೆಯುಳ್ಳ ಅಧ್ಯಾಪಕರಿಗೆ ವಿದ್ಯಾರ್ಥಿಗಳೇ ನಿಜವಾದ ಆಸ್ತಿ. ವಿದ್ಯಾರ್ಥಿಗಳನ್ನು ಸಮಾಜದ ಮುಖ್ಯ ವಾಹಿನಿಗೆ ತರುವಲ್ಲಿ ಅಧ್ಯಾಪಕರು ಸಲರಾದಾಗ ಮಾತ್ರ ಆತನ ಅಧ್ಯಾಪನ ವೃತ್ತಿ ಪರಿಪೂರ್ಣವಾಗಬಲ್ಲದು.
ಯಾವುದೇ ಶಿಷ್ಯನೊಬ್ಬ ಮಹೋನ್ನತ ಸಾಧನೆ ಮಾಡಿದಾಗ ಮೊದಲು ಸಂತೋಷಪಡುವುದು ಗುರು. ದ್ರೋಣರು ಅರಸು ಮಕ್ಕಳ ಒತ್ತಡಕ್ಕೆ ಮಣಿದು ಏಕಲವ್ಯನ ಹೆಬ್ಬರಳನ್ನು ಗುರು ಕಾಣಿಕೆಯಾಗಿ ಪಡೆದರೂ ಮನಸ್ಸಿನಲ್ಲಿ ಅತೀವ ಸಂಕಟಪಟ್ಟಿದ್ದರು. ಶಿಷ್ಯಂದಿರು ಎತ್ತರದ ಸ್ಥಾನದಲ್ಲಿರುವುದು ಗುರುವಿಗೆ ಎಂದಿಗೂ ಹೆಮ್ಮೆಯ ಸಂಗತಿ. ತಂದೆ ತಾಯಿಗಳು ಪಡುವ ಕಷ್ಟಗಳು ವಿದ್ಯಾರ್ಥಿಗಳಿಗೆ ಸದಾ ನೆನಪಿನಲ್ಲಿದ್ದರೆ ಉತ್ತಮ ಬದುಕು ನಿಮ್ಮದಾಗುತ್ತದೆ ಎಂದರು.
ಪ್ರಾಚಾರ್ಯ ಡಾ. ವಿಶ್ವನಾಥ ಅಧ್ಯಕ್ಷತೆವಹಿಸಿ ಮಾತನಾಡಿದರು. ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಪ್ರಕಾಶ್, ಸದಸ್ಯರಾದ ಮಂಜುನಾಥ ಮಾಸ್ತರ್, ಹೂವಪ್ಪ, ಪ್ರವೀಣಕುಮಾರ್, ಹರೀಶ್, ಬಸವರಾಜ ಜಡ್ಡಿಹಳ್ಳಿ, ಜ್ಯೋತಿ, ಶ್ರೀಕಾಂತ್, ರಾಜಶೇಖರ ಗೌಡ ತ್ಯಾವಗೋಡು, ಮಹಮದ್ ಸಾಜೀದ್, ಲಕ್ಷ್ಮಣಪ್ಪ, ಉಪನ್ಯಾಸಕರಾದ ಡಾ. ನೇತ್ರಾವತಿ, ಜೋಷಿ, ಆಶಾ, ವರ್ಷಾ, ಟಿ.ರಾಘವೇಂದ್ರ, ರವಿ ಕಲ್ಲಂಬಿ, ಯೋಗೇಶ್, ಮಹೇಶ್ವರಿ, ಮಧುರಾ ಯಾದವ್ ಇತರರಿದ್ದರು. ವಿವಿಧ ಚಟುವಟಿಕೆಗಳಲ್ಲಿ ಸ್ಪರ್ಧಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸಹಾಯಕ ಪ್ರಾಧ್ಯಾಪಕ ಶೋಯೆಬ್ ಪ್ರಾಸ್ತಾವಿಕ ಮಾತನಾಡಿದರು. ಉಪನ್ಯಾಸಕರಾದ ಪೂರ್ಣಿಮಾ ಭಾವೆ ಪ್ರಾರ್ಥಿಸಿದರು. ಶಂಕರ್ ನಾಯಕ್ ಸ್ವಾಗತಿಸಿದರು. ದಿಲೀಪ್ ವಂದಿಸಿದರು. ಪವಿತ್ರಾ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net