

ಉಡುಪಿ: ಮಂಡ್ಯ ಜಿಲ್ಲೆಯ ಕೆ ಆರ್ ಎಸ್ ಡ್ಯಾಂನಲ್ಲಿ ಬಿರುಕು ಬಂದಿರುವುದು ನಿಜ. ಇದನ್ನು ರಕ್ಷಿಸುವ ಜವಾಬ್ದಾರಿ ಸರ್ಕಾರದ್ದಾಗಿದೆ. ನೀರಾವರಿ ಇಲಾಖೆ ಈ ಕಾರ್ಯವನ್ನು ಕೈಗೆತ್ತಿಕೊಳ್ಳಲಿದೆ ಎಂದು ಅರಣ್ಯ ಸಚಿವ ಆರವಿಂದ ಲಿಂಬಾವಳಿ ಹೇಳಿದರು.
ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡ್ಯಾಂ ವಿಚಾರದಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಸಂಸದೆ ಸುಮಲತಾ ಪರಸ್ಪರ ಆರೋಪಗಳನ್ನು ಮಾಡುವ ಮೂಲಕ ರಾಜಕೀಯವನ್ನು ಕೀಳುಮಟ್ಟಕ್ಕೆ ಇಳಿಸುತ್ತಿದ್ದಾರೆ ಎಂದು ಅಸಮಧಾನ ವ್ಯಕ್ತಪಡಿಸಿದರು.
ಸೈನಿಕರ ನಿಂದನೆ ಸರಿಯಲ್ಲ
ಪಾಕಿಸ್ಥಾನದ ಸೈನಿಕರು ಭಾರತೀಯ ಸೈನಿಕರನ್ನು ಕೊಂದು ಬಿಡಿ ಎಂಬ ಟ್ವೀನ್ ಖಂಡಿಸುವ ಬದಲು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಂಗ್ರೆಸ್ ಕಾರ್ಯಕರ್ತರ ಪರವಾಗಿ ನಿಂತಿರುವುದು ಸರಿಯಲ್ಲ. ಇಂಥ ವಿಷಯಗಳಲ್ಲಿ ಭಾರತೀಯರಿಗೆ ಸಹಜವಾಗಿ ಸ್ವಾಭಿಮಾನ ಕೆರಳುತ್ತದೆ. ಹಲ್ಲೆ ಪ್ರಕರಣದಲ್ಲಿ ಯಾವುದೇ ರಾಜಕೀಯ ಉದ್ದೇಶವಿಲ್ಲ ಎಂದು ತಿಳಿಸಿದರು. ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ ನಾಯಕ್, ಶಾಸಕ ಸುನೀಲ ಕುಮಾರ್ ಉಪಸ್ಥಿತರಿದ್ದರು.