

ರಾಮನಗರ: ಸಿರಿಧಾನ್ಯಗಳು ಉತ್ಕ ೃಷ್ಟ ಪೋಷಕಾಂಶ ಹೊಂದಿದ್ದು ಹಲವಾರು ರೋಗಗಳನ್ನು ಶಮನಗೊಳಿಸುವ ಶಕ್ತಿ ಹೊಂದಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಸಿ.ಎನ್.ಅಶ್ವತ್ಥನಾರಾಯಣ ತಿಳಿಸಿದರು.
ರಾಮನಗರದ ಮಂಜುನಾಥ ಸಭಾಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕೃಷಿ ಇಲಾಖೆ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ಜಿಲ್ಲಾಮಟ್ಟದ ಸಿರಿಧಾನ್ಯಗಳ ಕಾರ್ಯಾಗಾರ 2023 ಉದ್ಘಾಟಿಸಿ ವಾತನಾಡಿದರು.
ಸಾಮೆ, ನವಣೆ, ಊದಲು, ಕೊರ‌್ಲೆ, ಬರಗು ಆರೋಗ್ಯಕ್ಕೆ ಪೂರಕವಾದ ಆಹಾರಗಳಾಗಿವೆ. ಇಂತಹ ಆಹಾರ ಧಾನ್ಯಗಳನ್ನು ವಿಶ್ವಕ್ಕೆ ಪರಿಚಯಿಸುವ ದೃಷ್ಟಿಯಿಂದ ಪ್ರಧಾನ ಮಂತ್ರಿಗಳು ಸಿರಿಧಾನ್ಯಗಳ ವರ್ಷ ಎಂದು ವಿಶ್ವದಾದ್ಯಂತ ಪ್ರಚುರಪಡಿಸುವ ಕೆಲಸ ವಾಡುತ್ತಿದ್ದಾರೆ. 2023ನ್ನು ಸಿರಿಧಾನ್ಯ ವರ್ಷವನ್ನಾಗಿ ಆಚರಿಸಲಾಗುತ್ತಿದೆ. ಭಾರತದ ಯೋಗ ಹೇಗೆ ಪ್ರಸಿದ್ಧಿ ಪಡೆದಿದೆಯೋ ಅದೇ ರೀತಿ ಸಿರಿಧಾನ್ಯಗಳನ್ನು ವಿಶ್ವಕ್ಕೆ ಪರಿಚಯಿಸುವ ಕ್ರಮಕ್ಕೆ ಪ್ರಧಾನ ಮಂತ್ರಿಗಳು ಮುಂದಡಿ ಇಟ್ಟಿದ್ದಾರೆ. ರೈತರೂ ಸಹ ರಾಸಾಯನಿಕ ಗೊಬ್ಬರ, ಕ್ರೀಮಿನಾಶಕ ಬಳಸದೆ ಸಿರಿಧಾನ್ಯಗಳನ್ನು ಬೆಳೆಯಬೇಕು. ಇದರಿಂದ ರೈತರಿಗೆ ಜಾಗತಿಕ ವಾರುಕಟ್ಟೆ ದೊರಕುವುದಲ್ಲದೆ, ನ್ಯಾಯಯುತ ಬೆಲೆ ಸಿಗುತ್ತದೆ. ಸಿರಿಧಾನ್ಯ ಬೆಳೆಯುವುದರ ಜತೆಗೆ ರೈತರು ಅದರ ಬಳಕೆ ವಾಡಬೇಕು ಎಂದು ಕಿವಿವಾತು ಹೇಳಿದರು.
40 ಕೆಜಿ ತೂಕದ ಬಾಳೆಗೊನೆ: ಕೃಷಿ, ತೋಟಗಾರಿಕೆ ರೇಷ್ಮೆ, ಮೀನುಗಾರಿಕೆ, ಪಶುಪಾಲನೆ, ಸಾವಾಜಿಕ ಅರಣ್ಯ ಮುಂತಾದ ಇಲಾಖೆ ಹಾಗೂ ವಿವಿಧ ರೈತ ಉತ್ಪಾದಕ ಕಂಪನಿಗಳು ಇಲಾಖೆಗಳಲ್ಲಿ ಸಿಗುವ ಸೌಲಭ್ಯಗಳ ಬಗ್ಗೆ ರೈತರಿಗೆ ಮಾಹಿತಿ ನೀಡಿದವು. ತೋಟಗಾರಿಕೆ ಇಲಾಖೆ ಮಳಿಗೆಯಲ್ಲಿ ಜಿಲ್ಲೆಯ ಮರವೇಗೌಡನದೊಡ್ಡಿ ಗ್ರಾಮದ ರೈತ ಮುನಿರಾಜು ಅವರು ಬೆಳೆದ 40 ಕೆ.ಜಿ. ತೂಕದ ಪಚ್ಚಬಾಳೆ ಗೊನೆಯನ್ನು ಪ್ರದರ್ಶನಕ್ಕಿಡಲಾಗಿತ್ತು. ಸ್ವಸಹಾಯ ಸಂಗಳು ಸಿರಿಧಾನ್ಯ ಮಳಿಗೆಗಳನ್ನು ತೆರೆದಿದ್ದವು.
ರೇಷ್ಮೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಗೌತಮ್‌ಗೌಡ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಿವವಾದು, ಜಿಪಂ ಸಿಇಒ ದಿಗ್ವಿಜಯ್ ಬೋಡ್ಕೆ, ಉಪ ಕಾರ್ಯದರ್ಶಿ ರಮೇಶ್, ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆ.ಎಂ.ಸೋಮಸುಂದರ್, ಉಪ ಕೃಷಿ ನಿರ್ದೇಶಕ ಡಿ.ಉಮೇಶ್, ವಿವಿಧ ತಾಲೂಕುಗಳ ಸಹಾಯಕ ಕೃಷಿ ನಿರ್ದೇಶಕರಾದ ಪೂರ್ಣಿವಾ, ನರಸಿಂಹಯ್ಯ, ರವಿ, ಶಶಿಕಲಾ ಮುಂತಾದವರಿದ್ದರು.
ಅಧಿಕಾರಿಗಳು ಅರಿವು ಮೂಡಿಸಬೇಕು: ವಾಗಡಿ ಶಾಸಕ ಎ.ಮಂಜುನಾಥ್ ವಾತನಾಡಿ, ಜಿಲ್ಲೆಯಲ್ಲಿ ಸಿರಿಧಾನ್ಯಗಳನ್ನು ಬೆಳೆಯಲು ಬೇಕಾದ ಉತ್ತಮ ವಾತಾವರಣ ಹಾಗೂ ಕೃಷಿಭೂಮಿ ಇದೆ. ಈ ಬಗ್ಗೆ ಕೃಷಿ ಇಲಾಖೆ ಅಧಿಕಾರಿಗಳು ರೈತರಲ್ಲಿ ಅರಿವು ಮೂಡಿಸಬೇಕು. ಸಿರಿಧಾನ್ಯ ಬೆಳೆಯಲು ಇರುವ ಅಡೆತಡೆಗಳನ್ನು ನಿವಾರಿಸಬೇಕು. ಸಿರಿ ಧಾನ್ಯಗಳ ಸಂಸ್ಕರಣಾ ಯಂತ್ರಗಳ ಸ್ಥಾಪನೆ ಹಾಗೂ ಉತ್ತಮ ಬೆಲೆ ನೀಡುವ ಕಂಪನಿಗಳನ್ನು ರೈತರಿಗೆ ಪರಿಚಯಿಸಿ ಕೊಡಬೇಕು. ಉತ್ತಮ ಮಾರುಕಟ್ಟೆ, ಯೋಗ್ಯ ಬೆಲೆ ದೊರೆತರೆ ಹೆಚ್ಚಿನ ರೈತರು ಸಿರಿಧಾನ್ಯಗಳನ್ನು ಬೆಳೆಯಲು ಮುಂದಾಗುತ್ತಾರೆ ಎಂದರು.
ನಾಳೆಯಿಂದ 3 ದಿನ ಸಿರಿಧಾನ್ಯ ಮೇಳ: ಈ ಹಿಂದೆ ಸಿರಿಧಾನ್ಯಗಳನ್ನು ಬಳಕೆ ವಾಡುತ್ತಿದ್ದೆವು. 30 ವರ್ಷ ಸಿರಿಧಾನ್ಯಗಳ ಬಳಕೆ ನಿಲ್ಲಿಸಿ ಹಲವಾರು ರೋಗ ರುಜಿನಗಳಿಗೆ ಬಲಿಯಾಗಿ ಮತ್ತೆ ಸಿರಿಧಾನ್ಯಗಳ ಕಡೆ ಮುಖ ಮಾಡಿದ್ದೇವೆ. ಸಿರಿಧಾನ್ಯಗಳ ಬಳಕೆ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕೆಂಬ ದೃಷ್ಟಿಯಿಂದ ಬೆಂಗಳೂರಿನ ಅರಮನೆ ಮೈದಾನದಲ್ಲಿ ಜ.20ರಿಂದ 22ರವರೆಗೆ ಅಂತಾರಾಷ್ಟ್ರೀಯ ಮಟ್ಟದ ಸಿರಿಧಾನ್ಯಗಳ ಮೇಳ ನಡೆಯಲಿದೆ. ರೈತರು ಮೇಳದಲ್ಲಿ ಭಾಗವಹಿಸಿ ಇನ್ನೂ ಹೆಚ್ಚಿನ ವಾಹಿತಿ ಪಡೆದುಕೊಳ್ಳಿ ಎಂದು ಡಾ. ಸಿ.ಎನ್. ಅಶ್ವತ್ಥನಾರಾಯಣ ಕರೆ ನೀಡಿದರು.
ರಾಮನಗರದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಸಿರಿಧಾನ್ಯಗಳ ಕಾರ್ಯಾಗಾರವನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಉದ್ಘಾಟಿಸಿದರು. ಜಿಪಂ ಸಿಇಒ ದಿಗ್ವಿಜಯ್ ಬೋಡ್ಕೆ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆ.ಎಂ.ಸೋಮಸುಂದರ್, ರೇಷ್ಮೆ ನಿಗಮದ ಅಧ್ಯಕ್ಷ ಗೌತಮ್‌ಗೌಡ ಮತ್ತಿತರರು ಇದ್ದರು.
ಸನ್ಮಾನ: ಸಿರಿಧಾನ್ಯ ಕಾರ್ಯಾಗಾರದಲ್ಲಿ ಜಿಲ್ಲೆಯ ವಿವಿಧ ಭಾಗಗಳ ರೈತರು ಪಾಲ್ಗೊಂಡಿದ್ದರು. ರಾಗಿ ಬೆಳೆಯಲ್ಲಿ ಉತ್ತಮ ಇಳುವರಿ ಪಡೆಯುವ ಮೂಲಕ ರಾಜ್ಯ ಮತ್ತು ಜಿಲ್ಲಾ ಪ್ರಶಸ್ತಿ ಪಡೆದಿರುವ ರೈತರನ್ನು ಸನ್ಮಾನಿಸಲಾಯಿತು.
ಬಿಪಿ, ಶುಗರ್ ನಿವಾರಣೆ: ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಷಾ ಸಹ ಸಿರಿ ಧಾನ್ಯಗಳನ್ನು ಬಳಕೆ ವಾಡುತ್ತಿದ್ದಾರೆ. ಅಮಿತ್‌ಷಾ ಅವರು ಸಿರಿ ಧಾನ್ಯಗಳ ಬಳಕೆಯಿಂದ ರಕ್ತದೊತ್ತಡ, ಸಕ್ಕರೆ ಕಾಯಿಲೆ ನಿವಾರಣೆಯಾಗುತ್ತದೆ ಎಂಬ ಸತ್ಯ ಕಂಡುಕೊಂಡಿದ್ದಾರೆ. ಜನರಿಗೆ ಉತ್ತಮ ಆಹಾರಗಳನ್ನು ನೀಡಬೇಕು. ಈ ನಿಟ್ಟಿನಲ್ಲಿ ಸಿರಿಧಾನ್ಯ ಬಳಕೆ ವಾಡುವಂತೆ ಜನರಿಗೆ ಅರಿವು ಮೂಡಿಸಬೇಕು ಎಂದಿದ್ದಾರೆ ಎಂದು ಸಚಿವ ಅಶ್ವತ್ಥನಾರಾಯಣ ತಿಳಿಸಿದರು.