

ಬೆಂಗಳೂರು: ಐದು ದಶಕಗಳಿಂದ ಜನತೆಗೆ ಟೋಪಿ ಹಾಕುತ್ತಾ ಬಂದಿರುವ ಕಾಂಗ್ರೆಸ್ ದೊಡ್ಡ ಬೆಲೆ ತೆರಬೇಕಾಗುತ್ತದೆ ಎಂದು ಕಾಂಗ್ರೆಸ್ ವಿರುದ್ಧ ಸಚಿವ ಆರ್.ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
ರಾಮ ಅಂದ್ರೆ ಮಾರುದ್ದ ದೂರ ಹೋಗುತ್ತಾರೆ, ಹಾಗಾಗಿ ಕಾಂಗ್ರೆಸ್ಗೆ ರಾಮ ಆಗಿಬರುವುದಿಲ್ಲ, ಯಾವುದೋ ಧರ್ಮದ ಓಲೈಕೆ ಮಾಡುವುದಕ್ಕೆ ಹೊರಟಿದ್ದಾರೆ. ಇದಕ್ಕೆ ಮುಂದಿನ ದಿನಗಳಲ್ಲಿ ತಕ್ಕ ಉತ್ತರ ಸಿಗಲಿದೆ ಎಂದು ಅವರು ಹೇಳಿದ್ದಾರೆ.
ರಾಮ ಎಲ್ಲಾ ಧರ್ಮಕ್ಕೂ ಸೇರಿರುವ ಪುರುಷೋತ್ತಮ, ನಾವೆಲ್ಲರೂ ಒಂದೇ ಎಂಬ ಭಾವನೆ ಇರಬೇಕು. ಕರಗಕ್ಕೂ ನಾವು ನಮ್ಮ ಸಂಪ್ರದಾಯ ಪಾಲನೆ ಮಾಡಿದ್ದೇವೆ, ಇಲ್ಲೂ ಕೂಡ ಎಲ್ಲಾ ಧರ್ಮದವರನ್ನು ವ್ಯಾಪಾರ ಮಾಡಲು ಅವಕಾಶ ಕೊಟ್ಟಿದ್ದೇವೆ. ಯಾರೂ ಕೂಡ ಅಶಾಂತಿಗೆ ಅವಕಾಶ ಕೊಡಬಾರದು ಎಂದಿದ್ದಾರೆ.ಧಾರವಾಡ ಗಲಾಟೆ ಕುರಿತು ರಾಮನ ಕುರಿತ ಕಾಂಗ್ರೆಸ್ ಹೇಳಿಕೆಗೆ ಈ ರೀತಿ ಪ್ರತಿಕ್ರಿಯಿಸಿದ್ದಾರೆ.