ಸಂಗೀತಾ ವಿರುದ್ಧ ಗಂಭೀರ ಆರೋಪ ಮಾಡಿದ ಮೈಕಲ್​; ಈ ಮಾತನ್ನು ನೀವು ಒಪ್ಪುತ್ತೀರಾ

Sangeetha Michael
Published on

ಬೆಂಗಳೂರು: ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್​ ಬಾಸ್​ ಸೀಸನ್​ 10 ಈ ಬಾರಿ ಹಲವು ವಿಶೇಷತೆಗಳಿಂದ ಕೂಡಿದ್ದು, ಒಂದಿಲ್ಲೊಂದು ವಿಚಾರಕ್ಕೆ ಹೆಚ್ಚು ಸದ್ದು ಮಾಡುತ್ತಿದೆ. ಫಿನಾಲೆಗೆ ಇನ್ನೇನು ಕೆಲವೇ ವಾರಗಳು ಬಾಕಿಯಿದ್ದು, ಟಾಪ್​ 5 ಸ್ಫರ್ಧಿಗಳಲ್ಲಿ ಒಬ್ಬರಾಗಲಿದ್ದಾರೆ ಎಂದುಕೊಂಡಿದ್ದ ಮೈಕಲ್​ ಮನೆಯಿಂದ ಫಿನಾಲೆಯ ಹೊಸ್ತಿಲಲ್ಲಿ ಎಲಿಮಿನೇಟ್​ ಆಗಿದ್ದಾರೆ.

ಮನೆಯಿಂದ ಹೊರಬಂದ ಬಳಿಕ ಬಿಗ್​ಬಾಸ್​ ಸ್ಫರ್ಧಿ ಮೈಕಲ್ ‘ವಿಜಯವಾಣಿ’ ಜೊತೆ​ ಹಲವು ವಿಚಾರಗಳನ್ನು ಹಂಚಿಕೊಂಡಿದ್ದು, ಮಾತನಾಡುವ ವೇಳೆ ಸ್ಫರ್ಧಿ ಸಂಗೀತಾ ಶೃಂಗೇರಿ ಅವರ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ.

Sangeetha Michael pratap

ಮನೆಯ ಸ್ಫರ್ಧಿಗಳ ಪೈಕಿ ಸಂಗೀತಾ ಅವಖಾಶವಾದಿಯಾಗಿದ್ದು, ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುತ್ತಾರೆ. ಇಲ್ಲಾ ಅಂದರೆ ಅವಕಾಶಗಳನ್ನು ಸೃಷ್ಟಿಸುತ್ತಾರೆ. ರಿಯಾಲಿಟಿ ಶೋಗಳಲ್ಲಿ ಇದು ಸಾಮಾನ್ಯವಾಗಿದ್ದು, ಇದನ್ನು ಅವರು ಚೆನ್ನಾಗಿ ಉಪಯೋಗಪಡಿಸಿಕೊಳ್ಳುತ್ತಿದ್ದಾರೆ. ಮೂರನೇ ವಾರದ ಹಳ್ಳಿ ಟಾಸ್ಕ್​ ವೇಳೆ ವಿನಯ್​ ಹಾಗೂ ಕಾರ್ತಿಕ್​ ನಡುವಿನ ಜಗಳದಲ್ಲಿ ಸಂಗೀತಾ ಅವರ ಪಾತ್ರ ಇರಲಿಲ್ಲ ಆದರೂ ಕೂಡ ಅವರು ಮಧ್ಯಪ್ರವೇಶಿಸಿ ಒಳ್ಳೆ ಅವಕಾಶವನ್ನು ಸೃಷ್ಟಿ ಮಾಡಿಕೊಂಡರು.

ಇತ್ತೀಚಿಗೆ ಪ್ರತಾಪ್​ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿ ಮನೆಗೆ ಬಂದ ಬಳಿಕ ಸಂಗೀತಾ ಅವರು ಅವನು ಊಟ ಬಿಟ್ಟು ಆಸ್ಪತ್ರೆ ಸೇರಲು ನಾವೇ ಕಾರಣ ಎಂಬಂತೆ ಬಿಂಬಿಸಿದರು ಇದು ನನಗೆ ಇಷ್ಟವಾಗಲಿಲ್ಲ ಎಂದು ಹೇಳುವ ಮೂಲಕ ಮೈಕಲ್​ ಪ್ರತಿಸ್ಫರ್ಧಿ ವಿರುದ್ದ ಆರೋಪಿಸಿ ಅಸಮಾಧಾನ ಹೊರಹಾಕಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net