

ಪರೀಾರ್ಥ ಸಂಚಾರದ ವೇಳೆ ಮಾರ್ಗ ಕ್ರಮಿಸುವ ಅವಧಿಯನ್ನು ಲೆಕ್ಕ ಹಾಕಲಾಗಿದೆ. ಅದರಂತೆ 6.4 ಕಿ.ಮೀ. ಉದ್ದದ ಮಾರ್ಗವನ್ನು ಮೆಟ್ರೋ ರೈಲಿನ ಮೂಲಕ 10 ನಿಮಿಷದಲ್ಲಿ ತೆರಳಬಹುದು ಎಂದು ಅಂದಾಜಿಸಲಾಗಿದೆ. ಅಲ್ಲದೆ, ಯಲಚೇನಹಳ್ಳಿಯಿಂದ ಅಂಜನಾಪುರ ಟೌನ್ಶಿಪ್ ನಿಲ್ದಾಣದವರೆಗೆ ಪ್ರಯಾಣಿಸಲು 20 ರೂ. ಟಿಕೆಟ್ ದರ ನಿಗದಿ ಮಾಡುವ ಕುರಿತು ಚಚಿರ್ಸಲಾಗಿದೆ.
10 ನಿಮಿಷದ ಪ್ರಯಾಣ:
ಮಾರ್ಗದಲ್ಲಿ 5 ನಿಲ್ದಾಣಗಳಿದ್ದು, ಯಲಚೇನಹಳ್ಳಿಯಿಂದ ಮುಂದಿನ ನಿಲ್ದಾಣವಾಗಿ ಕೋಣನಕುಂಟೆ ಕ್ರಾಸ್ ನಿಲ್ದಾಣವಿದೆ. ಅದಾದ ನಂತರ ದೊಡ್ಡಕಲ್ಲಸಂದ್ರ, ವಜ್ರಹಳ್ಳಿ, ತಲಟ್ಟಪುರ ಮತ್ತು ಅಂಜನಾಪುರದಲ್ಲಿ ನಿಲ್ದಾಣಗಳಿವೆ.
5 ನಿಲ್ದಾಣಗಳು:
ಯಲಚೇನಹಳ್ಳಿಯಿಂದ ಅಂಜನಾಪುರ ಮಾರ್ಗವು ನಮ್ಮ ಮೆಟ್ರೋ 2ನೇ ಹಂತದ ಮೊದಲ ಮಾರ್ಗವಾಗಿರುವ ಕಾರಣ ಉದ್ಘಾಟನೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಕೇಂದ್ರ ಸಚಿವರನ್ನು ಆಹ್ವಾನಿಸಲಾಗುತ್ತಿದೆ. ಅದಕ್ಕೆ ಸಂಬಂಧಿಸಿದಂತೆ ಸಿಎಂ ಮತ್ತು ಕೇಂದ್ರ ಸಚಿವರಿಂದ ದಿನಾಂಕವನ್ನು ಕೇಳಲಾಗಿದೆ. ಅವರುಗಳ ದಿನಾಂಕ ನಿಗದಿಯಾದ ನಂತರ ಮಾರ್ಗದ ಉದ್ಘಾಟನೆಯ ದಿನಾಂಕವನ್ನು ಬಿಎಂಆರ್ಸಿಎಲ್ ಪ್ರಕಟಿಸಲಿದೆ.
ಉದ್ಘಾಟನೆಗೆ ಸಿಎಂ, ಕೇಂದ್ರ ಸಚಿವ:
ಯಲಚೇನಹಳ್ಳಿಯಿಂದ ಅಂಜನಾಪುರ ಮಾರ್ಗವು ಮೆಟ್ರೋ ಮೊದಲ ಹಂತದಲ್ಲಿ ನಿರ್ಮಾಣಗೊಂಡು ಕಾರ್ಯಾಚರಣೆಗೊಳ್ಳುತ್ತಿರುವ ನಾಗಸಂದ್ರದಿಂದ ಯಲಚೇನಹಳ್ಳಿ ಮಾರ್ಗದ ವಿಸ್ತರಣಾ ಮಾರ್ಗವಾಗಿದೆ. ಈ ಮಾರ್ಗವನ್ನು ಹಸಿರು ಮಾರ್ಗವೆಂದು ಕರೆಯಲಾಗುತ್ತಿದೆ. ಇದೀಗ ಯಲಚೇನಹಳ್ಳಿಯಿಂದ ಅಂಜನಾಪುರ ಮಾರ್ಗದ ಉದ್ಘಾಟನೆಯಿಂದಾಗಿ ಹಸಿರು ಮಾರ್ಗದ ಉದ್ದ ಮತ್ತಷ್ಟು ಹೆಚ್ಚಲಿದೆ. ಅದರಂತೆ ಸದ್ಯ 24 ಕಿ.ಮೀ. ಇರುವ ಹಸಿರು ಮಾರ್ಗವು, 30 ಕಿ.ಮೀ.ಗೆ ಹೆಚ್ಚಲಿದ್ದು, ನಿಲ್ದಾಣಗಳ ಸಂಖ್ಯೆ 24ರಿಂದ 29ಕ್ಕೆ ಏರಿಕೆಯಾಗಲಿದೆ.
ಹಿಗ್ಗಲಿರುವ ಹಸಿರು ಮಾರ್ಗ:
ಮಟ್ರೋ 2ನೇ ಹಂತದ ಯೋಜನೆ ಕಾಮಗಾರಿ ಆರಂಭವಾಗುವಾಗ ಯಲಚೇನಹಳ್ಳಿಯಿಂದ ಅಂಜನಾಪುರ ಟೌನ್ಶಿಪ್ವರೆಗಿನ ಮಾರ್ಗವು 2020ರ ಆಗಸ್ಟ್ನಲ್ಲಿ ರ್ಪೂಣಗೊಂಡು ಜನರ ಓಡಾಟಕ್ಕೆ ಸಿಗಲಿದೆ ಎಂದು ಗಡುವು ವಿಧಿಸಲಾಗಿತ್ತು. ಆದರೆ, ಲಾಕ್ಡೌನ್ ಮತ್ತು ಕರೊನಾ ಸೋಂಕಿನಿಂದಾಗಿ ಕಾಮಗಾರಿ ನಡೆಯದ ಕಾರಣ, ಗಡುವನ್ನು 2020ರ ನವೆಂಬರ್ವರೆಗೆ ವಿಸ್ತರಿಸಲಾಗಿತ್ತು. ಆದರೆ, ಮಾರ್ಗ ನಿರ್ಮಾಣ, ಪರೀಾರ್ಥ ಸಂಚಾರವೆಲ್ಲ ರ್ಪೂಣಗೊಂಡರೂ ರೈಲ್ವೆ ಸುರಕ್ಷತಾ ಆಯುಕ್ತರಿಂದ ಪರೀೆಗೊಳಪಡಿಸಿ, ಅನುಮತಿ ಪಡೆಯುವುದರಲ್ಲಿ ವಿಳಂಬವಾಗಿತ್ತು. ಹೀಗಾಗಿ ಎರಡನೇ ಗಡುವನ್ನು ಮೀರಿ, 1 ತಿಂಗಳ ವಿಳಂಬದ ನಂತರ ಮೆಟ್ರೋ ಮಾರ್ಗ ಉದ್ಘಾಟನೆಗೊಳ್ಳುತ್ತಿದೆ.
1 ತಿಂಗಳು ವಿಳಂಬ:
ಆದರೆ, ರೈಲ್ವೆ ಸುರಕ್ಷತಾ ಆಯುಕ್ತರು ಬರುವುದು ತಡವಾಗಿತ್ತು. ಅಂತಿಮವಾಗಿ, ನ. 18 ಮತ್ತು 19ರಂದು ರೈಲ್ವೆ ಸುರಕ್ಷತಾ ಆಯುಕ್ತರ ತಂಡ ಮಾರ್ಗದ ಪರೀೆ ನಡೆಸಿದ್ದರು. ಇದೀಗ ಮಾರ್ಗದಲ್ಲಿ ವಾಣಿಜ್ಯ ಸಂಚಾರ ಆರಂಭಿಸಲು ಯಾವುದೇ ಸಮಸ್ಯೆಯಿಲ್ಲ ಎಂದು ರೈಲ್ವೆ ಸುರಕ್ಷತಾ ಆಯುಕ್ತರು ಅನುಮತಿ ನೀಡಿದ್ದಾರೆ. ಹೀಗಾಗಿ ಮುಂದಿನ 15 ದಿನಗಳೊಳಗಾಗಿ ಚಿಕ್ಕಪುಟ್ಟ ಕಾರ್ಯಗಳನ್ನು ರ್ಪೂಣಗೊಳಿಸಿ, ವಾಣಿಜ್ಯ ಸೇವೆ ಆರಂಭಿಸಲಾಗುತ್ತಿದೆ.
ಕರೊನಾ ಸೋಂಕಿನ ನಡುವೆಯೂ ಕಾಮಗಾರಿಗೆ ವೇಗ ನೀಡಿ ಬಿಎಂಆರ್ಸಿಎಲ್ ಯಲಚೇನಹಳ್ಳಿ&ಅಂಜನಾಪುರ ಟೌನ್ಶಿಪ್ವರೆಗಿನ 6.52 ಕಿ.ಮೀ. ಉದ್ದದ ಮಾರ್ಗ ನಿರ್ಮಾಣ ಕಾರ್ಯ ರ್ಪೂಣಗೊಳಿಸಿತ್ತು. ಅಲ್ಲದೆ, ಆಗಸ್ಟ್ ಅಂತ್ಯದಿಂದ ಮಾರ್ಗದಲ್ಲಿ ಪ್ರಾಯೋಗಿಕ ರೈಲು ಸಂಚಾರವನ್ನು ಆರಂಭಿಸಲಾಗಿತ್ತು. ಥರ್ಡ್ ರೈಲ್ (ಹಳಿ)ಗೆ ವಿದ್ಯುತ್ ಪೂರೈಕೆ, ನಿಲ್ದಾಣ ಮತ್ತು ಮಾರ್ಗದಲ್ಲಿನ ಸಿಗ್ನಲಿಂಗ್, ತಿರುವುಗಳಲ್ಲಿ ರೈಲುಗಳ ಸಂಚಾರ ಹೀಗೆ ಎಲ್ಲ ರೀತಿಯ ಪರೀೆ ನಡೆಸಿ ಸೆಪ್ಟೆಂಬರ್ ಅಂತ್ಯದಲ್ಲಿ ರೈಲ್ವೆ ಸುರಕ್ಷತಾ ಆಯುಕ್ತರಿಂದ ಪರೀೆಗೊಳಪಡಿಸುವಂತೆ ಮನವಿ ಮಾಡಿಕೊಳ್ಳಲಾಗಿತ್ತು.
ಬೆಂಗಳೂರು: ಬಹುನಿರೀತ ನಮ್ಮ ಮೆಟ್ರೋ 2ನೇ ಹಂತದ ಯಲಚೇನಹಳ್ಳಿ-ಅಂಜನಾಪುರ ಟೌನ್ಶಿಪ್ ಮಾರ್ಗಕ್ಕೆ ರೈಲ್ವೆ ಸುರಕ್ಷತಾ ಆಯುಕ್ತರಿಂದ ಅನುಮತಿ ದೊರೆತಿದ್ದು, ಇನ್ನು 15 ದಿನಗಳೊಳಗೆ ವಾಣಿಜ್ಯ ಸೇವೆ ಆರಂಭಿಸಲು ಬಿಎಂಆರ್ಸಿಎಲ್ ನಿರ್ಧರಿಸಿದೆ.