INSTAGRAMಗೂ ಬರಲಿದೆ ಕೃತಕ ಬುದ್ಧಿಮತ್ತೆ ಇರೋ ಚಾಟ್‌ಬಾಟ್‌!

instagram
Published on

ನವದೆಹಲಿ: ಮೆಟಾ ಮಾಲೀಕತ್ವದ ಇನ್‌ಸ್ಟಾಗ್ರಾಮ್ ಬಳಕೆದಾರರಿಗೆ ಇನ್ನು ಕೃತಕ ಬುದ್ಧಿಮತ್ತೆಯೊಂದಿಗೆ ಚಾಟ್ ಮಾಡುವ ಅವಕಾಶ ಬರಲಿದೆ. ಇದಕ್ಕಾಗಿ ಇನ್‌ಸ್ಟಾಗ್ರಾಮ್ ಕೆಲ ಅಪ್ಡೇಟ್‌ಗಳನ್ನು ಪರೀಕ್ಷಿಸುತ್ತಿದೆ ಎಂದು ವರದಿಯಾಗಿದೆ. ಲೀಕರ್ ಅಲೆಸ್ಸಾಂಡ್ರೊ ಪಲುಝಿ ಟ್ವೀಟ್ ಮಾಡಿದ್ದು ಅದರಲ್ಲಿ ಈ ಬೆಳವಣಿಗೆಯನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಚಾಟ್‌ಬಾಟ್‌ಗಳನ್ನು ಬಳಸುವ ಬಗ್ಗೆ ಯೋಜನೆಗಳಿವೆ ಎಂದು ಹೇಳಿದ್ದಾರೆ.

ಅವರು ಹಂಚಿಕೊಂಡ ಸ್ಕ್ರೀನ್ಶಾಟ್ ಪ್ರಕಾರ, ಚಾಟ್‌ಬಾಟ್‌ಅನ್ನು ಪ್ರಶ್ನೆಗಳಿಗೆ ಉತ್ತರಿಸಲು ಮತ್ತು ಸಲಹೆ ನೀಡಲು ಬಳಸಲಾಗುತ್ತದೆ. ಬಳಕೆದಾರು ಚಾಟ್ ಮಾಡಲು 30 ರೀತಿಯ ವ್ಯಕ್ತಿತ್ವಗಳನ್ನು ಆಯ್ಕೆ ಮಾಡಬಹುದಾಗಿದೆ.

ಪಲುಝಿ ಟ್ವೀಟ್ ಹೀಗಿದೆ:

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net