ತಿರುಗುವ ಫ್ಯಾನ್​ಗೆ ಕೈ ಹಾಕಿ ಮುರಿದ ಭೂಪ; 1 ಲಕ್ಷ ರೂ.ಗೂ ಅಧಿಕ ಮೌಲ್ಯದ ಉಪಕರಣ ಧ್ವಂಸ...

Mentally unstable Andhra man
Published on

ಆಂಧ್ರಪ್ರದೇಶ: ಕರ್ನೂಲ್​ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ಶನಿವಾರ ರೋಗಿಯೊಬ್ಬ ತಿರುಗುವ ಫ್ಯಾನ್​ಗೆ ಕೈ ಹಾಕಿ ಮುರಿದು ಹಾಕಿದ್ದು, ಸಿಬ್ಬಂದಿ ಜತೆ ಗಲಾಟೆ  ಮಾಡಿ  ಕೆಲಕಾಲ ಆತಂಕ ಸೃಷ್ಟಿಸಿದ್ದಾನೆ.

ಜಿಲ್ಲೆಯ ಆರೆಕಲ್ ಗ್ರಾಮದ ರಾಘವೇಂದ್ರ ಎಂಬುವ ವ್ಯಕ್ತಿ ಎಂದು ಗುರುತಿಸಲಾಗಿದ್ದು, ಕೆಲ ದಿನಗಳಿಂದ ಮಾನಸಿಕ ಆಸ್ವವಸ್ಥೆಯಿಂದ ಬಳಲುತ್ತಿದ್ದ ಎನ್ನಲಾಗಿದೆ. ಈ ಹಿನ್ನೆಲೆ ತಪಾಸಣೆಗೆ ಆಸ್ಪತ್ರೆಗೆ ಕರೆ ತಂದಾಗ ಈ ಘಟನೆ ನಡೆದಿದೆ.

ಆಸ್ಪತ್ರೆಯ ಬೆಡ್ ಒಂದರ ಮೇಲೆ ನಿಂತ ರಾಘವೇಂದ್ರ,  ವೈದ್ಯಕೀಯ ಉಪಕರಣದೊಂದಿಗೆ ಹಾಸಿಗೆಯ ಮೇಲೆ ನಿಂತು ಆಸ್ಪತ್ರೆಯ ಸಿಬ್ಬಂದಿಗೆ ಬೆದರಿಕೆ ಹಾಕುತ್ತಿರುವುದನ್ನು ಕಾಣಬಹುದು. ಫ್ಯಾನ್ ಮತ್ತು ಅಲ್ಲಿನ ಉಪಕರಣಗಳಿ ಹಾನಿ ಮಾಡಿರುವ ಘಟನೆ ಮೊಬೈಲ್​ನಲ್ಲಿ ಸೆರೆಯಾಗಿದೆ. ಬಳಿಕ ಆತನನ್ನು ಸಿಬ್ಬಂದಿ ನೆರವಿನಿಂದ ಕಂಬಕ್ಕೆ ಕಟ್ಟಿ ಹಾಕಿದ್ದಾರೆ. ನಂತರ ಚಿಕಿತ್ಸೆ ನೀಡಲಾಗಿದ್ದು, ಉತ್ತಮ ಚಿಕಿತ್ಸೆಗೆ ಶಿಫರಾಸ್ಸು ಮಾಡಲಾಗಿದೆ.

ರಾಘವೇಂದ್ರ ಮಾನಸಿಕ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದು, ಆಸ್ಪತ್ರೆಯಲ್ಲಿ ಅವರ ವಿಕೃತ ವರ್ತನೆಗೆ ಮೂಲ ಕಾರಣ ಎಂದು ರಾಘವೇಂದ್ರ ಕುಟುಂಬದವರು ತಿಳಿಸಿದ್ದಾರೆ.

ಆಸ್ಪತ್ರೆಯ ಮುಖ್ಯ ವೈದ್ಯಕೀಯ ಅಧೀಕ್ಷಕ ಶ್ರೀನಿವಾಸ್ ನಾಯಕ್ ಸುದ್ದಿಗಾರರ ಜತೆ ಮಾತನಾಡಿ, ಆಸ್ಪತ್ರೆಯಲ್ಲಿ 1 ಲಕ್ಷಕ್ಕೂ ಅಧಿಕ ಮೌಲ್ಯದ ಉಪಕರಣಗಳಿಗೆ ಹಾನಿ ಮಾಡಿದ್ದಾರೆ. ಈ ಕುರಿತು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net