ಕ್ರೀಡೆಯಿಂದ ಮಾನಸಿಕ ಸ್ಥಿರತೆ

15Koppa02
ಹಿರೇಕೊಡಿಗೆ ಗ್ರಾಪಂನಲ್ಲಿ ಕ್ಲಸ್ಟರ್ ಮಟ್ಟದ ಕ್ರೀಡಾಕೂಟವನ್ನು ಗ್ರಾಪಂ ಅಧ್ಯಕ್ಷೆ ಜಯಂತಿ ಉದ್ಘಾಟಿಸಿದರು. ಜಯಂತಿ, ಸತೀಶ್, ರಾಜೇಶ್ ಇದ್ದರು.
Published on

ಕೊಪ್ಪ: ಮನುಷ್ಯ ಕ್ರೀಡಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗಿಯಾಗುವುದರಿಂದ ಬೌದ್ದಿಕ ಬೆಳವಣಿಗೆ ಸಹಕಾರಿಯಾಗಲಿದೆ ಎಂದು ಅಕ್ಷರ ಶಾಲೆ ಸಂಸ್ಥಾಪಕ ಎಚ್.ಎಂ.ರವಿಕಾಂತ್ ಹೇಳಿದರು.
ಹಿರೇಕೊಡಿಗೆ ಗ್ರಾಪಂ ವ್ಯಾಪ್ತಿಯ ಗಡಿಕಲ್ಲಿನ ಬಿಜಿಎಸ್, ಅಕ್ಷರ ಶಾಲೆ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಹರಿಹರಪುರ, ಕೊಪ್ಪ ಗ್ರಾಮಾಂತರ, ಕಮ್ಮರಡಿ, ನಿಲುವಾಗಿಲು ಕ್ಲಸ್ಟರ್ ಮಟ್ಟದ ಕ್ರೀಡಾಕೂಟ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕ್ರೀಡೆ ಮತ್ತು ಮನೋಲ್ಲಾಸಗಳು ಪರಸ್ಪರ ಪೂರಕವಾದ ಅಂಶಗಳು, ಕ್ರೀಡೆಯಿಂದ ಮಾನಸಿಕ ಸ್ಥಿರತೆ ಕಾಪಾಡಿಕೊಳ್ಳಲು ಸಾಧ್ಯ ಎಂದರು.
ಇಂದು ಯಾವುದೇ ದೇಶದ ಪ್ರಗತಿ ಅಳೆಯುವಾಗ ಆ ದೇಶದ ಕ್ರೀಡಾ ಕ್ಷೇತ್ರದ ಪ್ರಗತಿಯನ್ನ ಅಳತೆಗೊಲಾಗಿ ಬಳಸಲಾಗುತ್ತದೆ. ಹಾಗಾಗಿ ಸರ್ಕಾರ ಕ್ರೀಡೆಗೆ ಹೆಚ್ಚಿನ ಮಹತ್ವ ನೀಡುತ್ತಿದೆ. ಆದರೆ ದೈಹಿಕ ಶಿಕ್ಷಕರ ನೇಮಕಾತಿ ಕೊರತೆಯಿಂದ ಅನೇಕ ಪ್ರತಿಭೆಗಳಿಗೆ ಅವಕಾಶಗಳು ದೊರೆಯುತ್ತಿಲ್ಲ ಎಂದರು.
ಶಾಲಾ ಸಮಿತಿ ಕಾರ್ಯದರ್ಶಿ ಎಚ್.ಎಸ್. ರಮೇಶ್ ಮಾತನಾಡಿ, ವಿದ್ಯಾರ್ಥಿಗಳು ಸೋಲು ಮತ್ತು ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು. ತೀರ್ಪುಗಾರರು ಹಂಸಕ್ಷೀರ ನ್ಯಾಯದಂತೆ ತೀರ್ಪು ನೀಡಬೇಕು ಎಂದರು.
ಗ್ರಾಪಂ ಅಧ್ಯಕ್ಷೆ ಜಯಂತಿ, ಮುಖ್ಯಶಿಕ್ಷಕ ಸತೀಶ್, ದೈಹಿಕ ಶಿಕ್ಷಕರಾದ ಚಲುವಾದಿ, ರಾಜೇಶ್, ವೆಂಕಟೇಶ್ವರ ವಿದ್ಯಾಮಂದಿರದ ಶಿಕ್ಷಕ ಮಹಾಬಲೇಶ್, ಅಣ್ಣಯ್ಯ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net