ಉಕ್ರೇನಿನ ಮಕ್ಕಳ ಬಗ್ಗೆ ಕಳವಳ ವ್ಯಕ್ತಪಡಿಸಿ ಪುಟಿನ್​ಗೆ ಪತ್ರ ಬರೆದ ಮೆಲಾನಿಯಾ ಟ್ರಂಪ್​ |Melania Trump

untitled-design-2025-08-16t112505551-68a01d4840185
Published on

Melania Trump: ಅಮೇರಿಕದ ಅಧ್ಯಕ್ಷ ಡುನಾಲ್ಡ್​ ಟ್ರಂಪ್​​ ಅವರ ಪತ್ನಿ ಮೆಲಾನಿಯಾ ಟ್ರಂಪ್​ ಉಕ್ರೇನ್​ ಹಾಗೂ ರಷ್ಯಾದಲ್ಲಿರುವ ಮಕ್ಕಳ ದುಸ್ಥಿತಿ ಬಗ್ಗೆ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ಪತ್ರ ಬರೆದಿದ್ದಾರೆ ಎಂದು ಶ್ವೇತ ಭವನ ತಿಳಿಸಿದೆ.

ಅಲಸ್ಕಾದಲ್ಲಿ ನಡೆದ ಶೃಂಗ ಸಭೆಯಲ್ಲಿ ಟ್ರಂಪ್​ ಈ ಪತ್ರವನ್ನು ಪುಟಿನ್​ ಅವರಿಗೆ ಹಸ್ತಾಂತರಿಸಿದ್ದಾರೆ ಎಂದು ಅಧಿಕಾರಿಗಳು ರಾಯಿಟರ್ಸ್​ಗೆ ತಿಳಿಸಿದ್ದಾರೆ. ಈ ಸಭೆಯಲ್ಲಿ ಸ್ಲೊವೇನಿಯನ್ ಮೂಲದ ಮೆಲಾನಿಯಾ ಟ್ರಂಪ್ ಭಾಗವಹಿಸಿದ್ದಿಲ್ಲ.

ಈ ಪತ್ರದ ಬಗ್ಗೆ ಅಧಿಕಾರಿಗಳು ಬಹಿರಂಗಪಡಿಸಲಿಲ್ಲ, ಆದರೆ ಈ ಪತ್ರವು ಯಕ್ರೇನ್​ನಲ್ಲಿನ ಯುದ್ದದ ಪರಿಣಾಮವಾಗಿ ಮಕ್ಕಳ ಅಪಹರಣವಾಗುತ್ತಿದ್ದಾರೆ ಎಂದು ಉಲ್ಲೇಖಿಸಿದ್ದು, ಈ ಪತ್ರದ ಬಗ್ಗೆ ಇಲ್ಲಿಯವರೆಗೂ ಯಾವುದೇ ವರದಿಗಳು ಬಂದಿರುವುದಿಲ್ಲ. ಇನ್ನು ರಷ್ಯಾದ ಪಡೆಗಳು ಉಕ್ರೇನ್​ನ ಮಕ್ಕಳನ್ನು ಅಪಹರಿಸುತ್ತಿರುವುದು ಉಕ್ರೇನ್​ಗೆ ನುಂಗಲಾರದ ತುತ್ತಾಗಿದೆ.

ಹತ್ತಾರು ಸಾವಿರ ಮಕ್ಕಳನ್ನು ಕುಟುಂಬಗಳು ಹಾಗೂ ಪೋಷಕರ ಒಪ್ಪಿಗೆಯಿಲ್ಲದೆ, ರಷ್ಯಾ ಹಾಗೂ ರಷ್ಯಾ ಆಕ್ರಮಿತ ಪ್ರದೇಶಗಳಿಗೆ ಹಸ್ತಾಂತರಿಸುವುದು ಯುಎನ್ ಒಪ್ಪಂದದ ಅಡಿಯಲ್ಲಿ ನರಮೇಧವನ್ನು ರೂಪಿಸುತ್ತದೆ ಎಂದು ಉಕ್ರೇನ್​ ರಷ್ಯಾ ವಿರುದ್ಧ ಆರೋಪ ಮಾಡಿದೆ.

ಈ ಹಿಂದೆ ಯುದ್ಧಭೂಮಿಯಲ್ಲಿ ದುರ್ಬಲ ಮಕ್ಕಳನ್ನು ರಕ್ಷಿಸುವುದಾಗಿ ಮಾಸ್ಕೊ ತಿಳಿಸಿತ್ತು. ಉಕ್ರೇನ್​ ಮೇಲೆ ರಷ್ಯಾದ ಆಕ್ರಮಣ ಪ್ರಾರಂಭವಾದಾಗಿಂದಲೂ ಲಕ್ಷಾಂತರ ಉಕ್ರೇನಿನ ಮಕ್ಕಳು ಸಂಕಷ್ಟ ಎದುರಿಸುತ್ತಿದ್ದಾರೆ ಹಾಗೂ ಅವರ ಹಕ್ಕುಗಳನ್ನು ಉಲ್ಲಂಘಿಸಲಾಗಿದೆ ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಕಚೇರಿ ತಿಳಿಸಿದೆ.

ಅಲಸ್ಕಾದಲ್ಲಿ ಟ್ರಂಪ್​ ಮತ್ತು ಪುಟಿನ್​ ನಡುವೆ ಸುಮಾರು ಮೂರು ಗಂಟೆಗಳ ಕಾಲ ಸಭೆ ನಡೆದರೂ,ಕೂಡಾ ಉಕ್ರೇನ್​ ನಡುವಿನ ಕದನ ವಿರಾಮ ಒಪ್ಪಂದದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net