

ಪ್ರತಿಯೊಬ್ಬ ಮನುಷ್ಯನಿಗೂ ಯಾವುದಾದರೂ ಒಂದು ಕಲೆ, ಕೌಶಲ ಇದ್ದೇ ಇರುತ್ತದೆ. ಅದು ನೃತ್ಯ, ಸಂಗೀತ, ಸಾಹಿತ್ಯ, ಕಲೆ ಯಾವುದೇ ಆಗಿರಬಹುದು. ಅದನ್ನು ದೈವದತ್ತ ವರವೆಂದೇ ಹೇಳಬಹುದು. ಒಂದೊಮ್ಮೆ ಅದನ್ನು ಅಭಿವೃದ್ಧಿಗೊಳಿಸಿಕೊಂಡರೆ ಅಥವಾ ಸಮಾಜ ಅವನ ಆ ಕೌಶಲ ಗುರುತಿಸುವಂತಾದರೆ ಆತ ವಿಶ್ವಪ್ರಸಿದ್ಧನೇ ಆಗುತ್ತಾನೆ ಎಂಬುದು ಸತ್ಯ.
ಲಾಕ್ಡೌನ್ ಜಾರಿಯಾಗಿರುವ ಈ ಸಂದರ್ಭ ನಿಜಕ್ಕೂ ಅಂಥ ಕೌಶಲಗಳನ್ನು ಸಾಬೀತುಪಡಿಸಲು ಸುಸಂದರ್ಭವೆಂದೇ ಹೇಳಬಹುದು. ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಇಂಥ ಸಂಗತಿಗಳೇ ತುಂಬಿ ಹೋಗಿವೆ. ಪ್ರತಿಯೊಬ್ಬರೂ ತಮ್ಮ ಕೌಶಲಗಳನ್ನು ಸಾಬೀತುಪಡಿಸಲು ಸಾಮಾಜಿಕ ಜಾಲತಾಣಗಳಿಗೆ ಕರೆದೊಯ್ಯುತ್ತಿದ್ದಾರೆ. ರಾಜಕೀಯ ಮುಖಂಡರು, ಸೆಲೆಬ್ರಿಟಿಗಳೂ ಇದಕ್ಕೆ ಹೊರತಾಗಿಲ್ಲ.
ಅಂತರ್ಗತ ಕೌಶಲಗಳ ಬಗ್ಗೆ ಹೇಳುವುದಾದರೆ ಮೇಘಾಲಯ ಸಿಎಂ ಕಾನ್ರಾಡ್ ಸಂಗ್ಮಾ ಅವರ ಸಂಗೀತ ಕೌಶಲ ಹಲವು ಜನರಿಗೆ ತಿಳಿದಿರಲಿಕ್ಕಿಲ್ಲ. ಸಂಗೀತ ಅವರಿಗೆ ದೈವದತ್ತ ವರವಾಗಿದೆ ಎಂಬುದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ.
ಕಳೆದ ರಾತ್ರಿ (ಮೇ 22) ಸಂಗ್ಮಾ ಅವರ ವಿಡಿಯೋ ಅಂತರ್ಜಾಲದಲ್ಲಿ ಹೊರಹೊಮ್ಮಿದ್ದು ಭಾರಿ ವೈರಲ್ ಆಗಿದೆ. ಅದರಲ್ಲಿ ಅವರು ನಿರಾಯಾಸವಾಗಿ ತಮ್ಮ ಮನೆಯಲ್ಲಿ ಪ್ರಸಿದ್ಧ ಐರನ್ ಮೇಡನ್ರ 'ವೇಸ್ಟ್ ಈಯರ್ಸ್' ಹಾಡಿಗೆ ಗಿಟಾರ್ ನುಡಿಸುತ್ತಿದ್ದಾರೆ. ಸ್ವರ ಮೇಳಗಳ ಮೇಲಿನ ಅವರ ಏಕಾಗ್ರತೆ ಇದರಲ್ಲಿ ಎದ್ದು ಕಾಣುತ್ತಿದೆ.
ಸಂಗ್ಮಾ ಅವರಿಗೆ ಗಿಟಾರ್ ವಾದನ ಹೊಸದೇನಲ್ಲ. ಕಾಲೇಜು ದಿನಗಳಲ್ಲಿ ಅವರು ಬ್ಯಾಂಡ್ ನುಡಿಸುತ್ತಿದ್ದರು.
ತುಸು ಒತ್ತಡದಿಂದ ಹೊರಬರಲು, ಬಹಳ ದಿನಗಳ ನಂತರ ಗಿಟಾರ್ ನುಡಿಸುತ್ತಿದ್ದೇನೆ. ಹೀಗಾಗಿ ಕೆಲವು ತಪ್ಪುಗಳನ್ನು ಊಹಿಸಿದ್ದೇನೆ ಎಂದು ಅವರು ತಮ್ಮ ಪೋಸ್ಟ್ನಲ್ಲಿ ಬರೆದಿದ್ದಾರೆ. ಈ ಪೋಸ್ಟ್ನ್ನು 32ಸಾವಿರ ಬಾರಿ ವೀಕ್ಷಿಸಲಾಗಿದೆ.