

ಮುಂಬೈ: ಟಾಲಿವುಡ್ನ ಹಿರಿಯ ನಟ, ಮೆಗಾಸ್ಟಾರ್ ಚಿರಂಜೀವಿ ತಮ್ಮ 68ರ ವಯಸ್ಸಿನಲ್ಲೂ ಚಿರ ಯುವಕನಂತೆ ಶಾರೂಖ್ ಅಭಿನಯದ 'ಜವಾನ್' ಚಿತ್ರದ ಹಾಡಿಗೆ ಡ್ಯಾನ್ಸ್ ಮಾಡಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡಿದ್ದು, ಅಭಿಮಾನಿಗಳಿಂದ ಭಾರೀ ಮೆಚ್ಚುಗೆ ಪಡೆದುಕೊಂಡಿದೆ.
ಇನ್ನೇನು ಕೆಲವೇ ದಿನಗಳಲ್ಲಿ ತಮ್ಮ 156ನೇ ಪ್ರಾಜೆಕ್ಟ್ 'ಮೆಗಾ 156' ಸಿನಿಮಾದ ಶೂಟಿಂಗ್ ಪ್ರಾರಂಭವಾಗಲಿದ್ದು, ಈ ಚಿತ್ರಕ್ಕೆ ಚಿರಂಜೀವಿ ಸಕಲ ತಯಾರಿಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಈ ಮಧ್ಯೆ ದೀಪಾವಳಿ ಹಬ್ಬದ ಹಿನ್ನೆಲೆ ಚಿರಂಜೀವಿ ಪುತ್ರ ರಾಮ್ಚರಣ್ ನಿವಾಸದಲ್ಲಿ ಹಬ್ಬದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ವೇಳೆ ಶಾರೂಖ್ ಖಾನ್ ನಟನೆಯ ಜವಾನ್ ಸಿನಿಮಾದ ಹಾಡೊಂದಕ್ಕೆ ಜಬರ್ದಸ್ತ್ ಆಗಿ ಕುಣಿದಿದ್ದಾರೆ.
ಜವಾನ್ ಹಾಡಿಗೆ ಚಿರು ಕುಣಿದು ಕುಪ್ಪಳಿಸಿದ ದೃಶ್ಯ ಸದ್ಯ ಅವರ ಫ್ಯಾನ್ಸ್ಗಳನ್ನು ಹುಚ್ಚೆಬ್ಬಿಸುತ್ತಿದೆ. ಈ ವಿಡಿಯೋ ಇದೀಗ ಹೆಚ್ಚಿನ ಸಂಖ್ಯೆಯಲ್ಲಿ ಶೇರ್ ಆಗುತ್ತಿದ್ದು, ನೆಟ್ಟಿಗರ ಗಮನವನ್ನು ಸೆಳೆಯುತ್ತಿದೆ. ವಿಡಿಯೋದಲ್ಲಿ ಚಿರಂಜೀವಿ ಅವರೊಟ್ಟಿಗೆ ಮೆಗಾಪವರ್ ಸ್ಟಾರ್ ರಾಮ್ ಚರಣ್ ಹಾಗೂ ಗಾಯಕಿ ರಾಜಕುಮಾರಿ ಕೂಡ ಕಾಣಿಸಿಕೊಂಡಿದ್ದಾರೆ,(ಏಜೆನ್ಸೀಸ್).
ಯುವ ಪ್ರತಿಭೆಗಳ ಸಂಗಮ: ಶೀಘ್ರವೇ ’ಬೆಂಬಿಡದ ನಾವಿಕ’ ತೆರೆಗೆ!