'ಭೋಲಾ ಶಂಕರ್‌' ಚಿತ್ರಕ್ಕೆ ಮೆಗಾ ಸ್ಟಾರ್​ ಪಡೆದ ಸಂಭಾವನೆ ಎಷ್ಟು?

Untitled design - 2023-07-28T094853.139
Published on

ಆಂಧ್ರಪ್ರದೇಶ: ಟಾಲಿವುಡ್​​ನ ಮೆಗಾ ಸ್ಟಾರ್​ ಚಿರಂಜೀವಿ ಮುಂಬರುವ ಚಿತ್ರ 'ಭೋಲಾ ಶಂಕರ್' ಬಗ್ಗೆ ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿದ್ದು, ಈ ಸಿನಿಮಾದಲ್ಲಿ ನಟಿಸಲು ಅವರು ಕೇಳಿದ ಸಂಭಾವನೆ ಬಗ್ಗೆ ಇದೀಗ ಹೊಸ ಮಾಹಿತಿಯೊಂದು ಲಭ್ಯವಾಗಿದೆ.

ಚಿರಂಜೀವಿ ಅವರ ಭೋಲಾ ಶಂಕರ್ ಚಿತ್ರವನ್ನು ಮೆಹರ್ ರಮೇಶ್ ನಿರ್ದೇಶಿಸಿದ್ದು, ಸುಮಾರು ಒಂದು ದಶಕದ ನಂತರ ನಿರ್ದೇಶನಕ್ಕೆ  ಮರಳುತ್ತಿದ್ದಾರೆ. ಅನಿಲ್ ಸುಂಕರ ನಿರ್ಮಾಣದ ಈ ಚಿತ್ರದಲ್ಲಿ ದೊಡ್ಡ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಈ ನಡುವೆ ಚಿರಂಜೀವಿ ಅವರು ಎಷ್ಟು ಸಂಭಾವನೆ ಪಡೆದುಕೊಂಡಿದ್ದಾರೆ ಎಂಬ ಪ್ರಶ್ನೆ ಅವರ ಅಭಿಮಾನಿಗಳಲ್ಲಿ ಕಾಡುತ್ತಿತ್ತು. ಇದೀಗ ಆ ಪ್ರಶ್ನೆಗೆ ಉತ್ತರ ಸಿಕ್ಕಿದ್ದು, ಚಿತ್ರಕ್ಕಾಗಿ ಮೆಗಾ ಸ್ಟಾರ್​ ಒಂದು ರೂಪಾಯಿ ಹಣವನ್ನೂ ಕೂಡ ಕೇಳಿಲ್ಲ ಎಂಬ ಸುದ್ದಿ ಟಾಲಿವುಡ್​ ಚಿತ್ರರಂಗದಲ್ಲಿ ವ್ಯಾಪಕವಾಗಿ ಹರಿದಾಡಿದೆ.

ಈಗಾಗಲೇ ನಿರ್ಮಾಪಕರು ಥಿಯೇಟ್ರಿಕಲ್ ಹಕ್ಕುಗಳನ್ನು ಭಾರೀ ಮೊತ್ತಕ್ಕೆ ಮಾರಾಟ ಮಾಡಿದ್ದು, ಇದರ ಲಾಭದಲ್ಲಿ ಚಿರಂಜೀವಿ ಅವರು ಪಾಲು ತೆಗೆದುಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ. ಮಹತಿ ಸ್ವರ ಸಾಗರ್ ಸಂಗೀತ ಸಂಯೋಜಿಸಿರುವ ಭೋಲಾ ಶಂಕರ್​ ಚಿತ್ರದಲ್ಲಿ ಕೀರ್ತಿ ಸುರೇಶ್ ಮತ್ತು ತಮನ್ನಾ ಭಾಟಿಯಾ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಚಿತ್ರ ಇದೇ ಆಗಸ್ಟ್ 11 ರಂದು ಬಿಡುಗಡೆಯಾಗಲಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net