

ಕೋಲಾರ: ಓದುಗರಿಗಾಗಿ ವಿಜಯವಾಣಿ 2024ರ ಆಗಸ್ಟ್ 2ರಿಂದ ನವೆಂಬರ್ 14ರವರೆಗೆ ಆಯೋಜಿಸಿದ್ದ "ವಿಜಯವಾಣಿ ಓದಿ ಕಾರು ಗೆಲ್ಲಿ' ಸ್ಪರ್ಧೆಯ 34 ಅದೃಷ್ಟಶಾಲಿಗಳಿಗೆ ಮೆಗಾ ಕೊಡುಗೆಗಳನ್ನು ಮಂಗಳವಾರ ವಿತರಿಸಲಾಯಿತು.
ನಗರದ ಪತ್ರಕರ್ತ ಭವನದಲ್ಲಿ ಮಂಗಳವಾರ ಸ್ಪರ್ಧೆ ವಿಜೇತರಿಗೆ ವಿಜಯವಾಣಿ ಪ್ರಸರಣ ವಿಭಾಗದ ಮುಖ್ಯವ್ಯವಸ್ಥಾಪಕ ವಿದ್ಯಾಧರ ಪಿ.ಪೂಜಾರ್, ಪತ್ರಿಕೆಯ ಸಹಾಯಕ ಸಂಪಾದಕ ರಾಜಶೇಖರ ಜೋಗಿನ್ಮನೆ ಬಹುಮಾನ ವಿತರಿಸಿದರು.
ಬೆಂಗಳೂರಿನ ವಿಜಯವಾಣಿ ಕೇಂದ್ರ ಕಚೇರಿಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಲಕ್ಕಿ ಡ್ರಾ ಸಮಾರಂಭದಲ್ಲಿ ಕೆಎಂಎ್ ಎಂಡಿ ಬಿ.ಶಿವಸ್ವಾಮಿ ಹಾಗೂ ನಟ ಪ್ರಮೋದ್ ಪಂಜು ಅವರು ಒಟ್ಟು 374 ಅದೃಷ್ಟಶಾಲಿಗಳನ್ನು ಆಯ್ಕೆ ಮಾಡಿದ್ದರು. ಆ ಪೈಕಿ ಜಿಲ್ಲೆಯಿಂದ ಆಯ್ಕೆಯಾಗಿದ್ದ 34 ಮಂದಿಗೆ ಬಹುಮಾನ ವಿತರಿಸಿ ಶುಭಕೋರಲಾಯಿತು. ಜತೆಗೆ ಕೆಲ ಅದೃಷ್ಟಶಾಲಿಗಳು ವಿಜಯವಾಣಿಯ ಸಾಮಾಜಿಕ ಚಟುವಟಿಕೆಗಳ ಬಗ್ಗೆ ಅಭಿಪ್ರಾಯ ಹಂಚಿಕೊಂಡರು.
* ಅದೃಷ್ಟಶಾಲಿಗಳು
ಸ್ಪರ್ಧೆಗೆ ಒಟ್ಟು 43,000 ಅರ್ಜಿ ಸಲ್ಲಿಕೆಯಾಗಿದ್ದವು. ಆ ಪೈಕಿ ಕೋಲಾರದಿಂದ 34 ಮಂದಿ ಆಯ್ಕೆಯಾಗಿರುವವರು ನಿಜಕ್ಕೂ ಅದೃಷ್ಟವಂತರು ಎಂದು ವಿದ್ಯಾಧರ ಪಿ. ಪೂಜಾರ್ ತಿಳಿಸಿದರು. ಮಕ್ಕಳಿಗೆ ಪತ್ರಿಕೆ ಓದುವುದು ಅಭ್ಯಾಸವೇ ಇಲ್ಲವಾಗಿದೆ. ಪತ್ರಿಕೆಯಲ್ಲಿ ಪ್ರಕಟವಾಗಿರುವ ವಿಷಯದ ಬಗ್ಗೆ ಪ್ರಸ್ತಾಪಿಸಿದಾಗ ಮಕ್ಕಳು ಗೊತ್ತಿದೆ ಎಂದು ಹೇಳುತ್ತಾರೆ. ಆದರೆ ಅದರ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಂಡಿರುವುದಿಲ್ಲ. ಮಕ್ಕಳಿಗಾಗಿ ಅತಿ ಕಡಿಮೆ ದರದಲ್ಲಿ ವಿದ್ಯಾರ್ಥಿ ಉದ್ಯೋಗ ಮಿತ್ರ ಹೊರ ತರಲಾಗಿದೆ. ಮಕ್ಕಳ ಜ್ಞಾನ ವೃದ್ಧಿಗೆ ಪೂರಕ ವಿಚಾರಗಳು ಇರುತ್ತದೆ. ಎಸ್ಎಸ್ಎಲ್ಸಿ, ಪಿಯುಸಿ ಮಕ್ಕಳಿಗೆ ವಿಷಯವಾರು, ಜತೆಗೆ ಸ್ಪರ್ಧಾತ್ಮಕ ಪರೀೆಗಳ ಕುರಿತು ಪ್ರಕಟವಾಗುತ್ತಿದೆ. ಇದನ್ನು ಒಮ್ಮೆ ಓದಿ ನೋಡಿ ಎಂದು ಅವರು ಸಲಹೆ ನೀಡಿದರು.
* ಓದುಗರೊಂದಿಗೆ ಸಂವಾದ ನಡೆಸುವ ಪ್ರಯತ್ನ
ಪತ್ರಿಕೆ ಕೇವಲ ಓದುಗರಿಗೆ ಸುದ್ದಿಮುಟ್ಟಿಸಲು ಸಿಮೀತವಾಗಿಲ್ಲ. ವಿಜಯೋತ್ಸವ, ನಾರಿ ನಿಗೊಂದು ಸ್ಯಾರಿ, ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ ಇತ್ಯಾದಿ ಕಾರ್ಯಕ್ರಮದ ಮೂಲಕ ವಿಜಯವಾಣಿ ಓದುಗರ ಜತೆ ನಿರಂತರ ಸಂವಹನ ನಡೆಸುತ್ತಿದೆ. ವಿಜಯವಾಣಿ ಓದಿ ಕಾರ್ ಗೆಲ್ಲಿ ಕೂಡ ಅಂಥ ಒಂದು ಪ್ರಯತ್ನವಾಗಿದೆ ಎಂದು ರಾಜಶೇಖರ ಜೋಗಿನ್ಮನೆ ಅಭಿಪ್ರಾಯಪಟ್ಟರು.
* ಸಂಬಂಧ ಗಟ್ಟಿಗೊಳಿಸಲು ಪೂರಕ
ಪ್ರಸರಣ ವಿಭಾಗದ ವ್ಯವಸ್ಥಾಪಕ ಸಿ.ಎನ್.ಹರೀಶ್ ಮಾತನಾಡಿ, ವಿಜಯವಾಣಿ ಜನರೊಟ್ಟಿಗೆ ಸಂಪರ್ಕದಲ್ಲಿದ್ದು ಸಂಬಂಧಗಳನ್ನು ಗಟ್ಟಿಗೊಳಿಸಲು ಪೂರಕವಾದ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಚಿಂತನ ಪುಟದ ಅಂಕಣಗಳು, ಪದಬಂಧ, ಸುಡೊಕು, ವಾರಭವಿಷ್ಯ ಇತ್ಯಾದಿ ಜನಮನ ಗೆದ್ದಿವೆ. ಪಂಚಾಯಿತಿ ಕಟ್ಟೆಯಂಥ ಕಾರ್ಯಕ್ರಮಗಳಿಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ಈ ಕಾರ್ಯಕ್ರಮ ಮುಂದುವರಿಸಲಾಗುವುದು ಎಂದು ತಿಳಿಸಿದರು.
ಪತ್ರಿಕೆ ಎಂದರೆ ಜೀವನ
ವಿಜಯವಾಣಿ ಓದಿನಿಂದ ಅನುಕೂಲವಾಗುತ್ತಿದೆ. ಪ್ರಕಟವಾಗುವ ಸುದ್ದಿಗಳ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಲಾಗುತ್ತಿದೆ. ಪತ್ರಿಕೆ ಓದಿನಿಂದ ನೆಮ್ಮದಿ ಸಿಗುತ್ತದೆ
> ನಾಗನಾಳ ನಾರಾಯಣಸ್ವಾಮಿ
ಪತ್ರಿಕೆ ಓದಬೇಕು
ಬೆಳಿಗ್ಗೆ ಎದ್ದ ತಕ್ಷಣ ಪತ್ರಿಕೆ ಓದಬೇಕು ಎಂಬುದು ಮುಖ್ಯ. ಈ ಕಾಲದಲ್ಲಿ ಫೋನ್, ಟಿವಿ ನೋಡುತ್ತಾರೆ. ಪಾಲಕರೇ ಮಕ್ಕಳಿಗೆ ಓದುವ ಅಭ್ಯಾಸ ಮಾಡಿಸಬೇಕು. ಕೆಲವು ವಿಚಾರಗಳನ್ನು ಟಿವಿಯಲ್ಲಿ ನೋಡಬಹುದು. ಆದರೆ ಪತ್ರಿಕೆ ಓದಿನಿಂದ ಶಾಶ್ವತವಾಗಿ ಅದನ್ನು ನೆನಪಿಟ್ಟುಕೊಳ್ಳಬಹುದು. ಅಲ್ಲದೆ ಪತ್ರಿಕೆಯಲ್ಲಿ ಬಂದಿದ್ದನ್ನು ಸಾಕ್ಷಿಯಾಗಿಯೂ ಇಟ್ಟುಕೊಳ್ಳಬಹುದು. ಯಾವುದೇ ಇಲಾಖೆಯಲ್ಲಿ ಕೆಲಸ ಇದೆ ಎಂಬುದನ್ನು ಪತ್ರಿಕೆ ಓದಿ, ತಿಳಿದುಕೊಳ್ಳುತ್ತಿದ್ದೇನೆ.
> ಸುಕನ್ಯಾ ತೋರದೇವಂಡಹಳ್ಳಿ
* ಓದುಗರ ಮನಸ್ಸಿಗೆ ಉಲ್ಲಾಸ
ದಿನಪತ್ರಿಕೆ ಓದುವುದರಿಂದ ಎಷ್ಟು ಅನುಕೂಲ ಇದೆ ಎಂಬುದು ಅರಿವಾಯಿತು. ಹಿಂದೆ ದಿನ ಪತ್ರಿಕೆಗಾಗಿ ಪಟ್ಟಣಕ್ಕೆ ಹೋಗಬೇಕಾಗಿತ್ತು, ಈಗ ಓದುಗರ ಮನೆ ಬಾಗಿಲಲ್ಲೇ "ವಿಜಯವಾಣಿ' ಸಿಗುತ್ತಿದೆ. ಅಲ್ಲದೆ ಸ್ಪರ್ಧೆಗಳು ಓದುಗರ ಮನಸ್ಸಿಗೆ ಉಲ್ಲಾಸ ನೀಡುತ್ತವೆ.
> ರೇವಣ್ಣ, ಚೋಕಂಡಹಳ್ಳಿ
ಗೃಹಿಣಿಯರಿಗಾಗಿ ಲ್ೈ ಟಿಪ್ಸ್, ಲೈವ್ ಟಿಪ್ಸ್
ಗೃಹಿಣಿಯರಿಗಾಗಿಯೇ ವಿದ್ಯಾರ್ಥಿ ಮಿತ್ರ ಸಂಚಿಕೆಯಲ್ಲಿ ಲ್ೈ ಟಿಪ್ಸ್, ಲೈವ್ ಟಿಪ್ಸ್ ಕಾಲಂ ಪ್ರಕಟಿಸಲಾಗುತ್ತಿದೆ ಎಂದರೆ ತಪ್ಪಾಗಲಾರದು. ಇದರಿಂದ ಬಹಳಷ್ಟು ಅನುಕೂಲಗಳಿದ್ದು, ಮನುಷ್ಯನ ಜೀವನ ಶೈಲಿಯನ್ನೇ ಬದಲಾಯಿಸುತ್ತದೆ. ಇದನ್ನು ಪಾಲನೆ ಮಾಡುತ್ತಿರುವುದರಿಂದ ನಾವು ಆರೋಗ್ಯವಂತರಾಗಿದ್ದೆವೆ
> ಸುಮಲತಾ, ಸೀಸಂದ್ರ
* ಪದಬಂಧ ಬಿಡಿಸಲು ಪೈಪೋಟಿ
ಸ್ಪರ್ಧೆಯಲ್ಲಿ ಭಾಗವಹಿಸಿದಾಗ ಕೆಲವರು ನೋಡು, ಬಹುಮಾನ ಸಿಗುವುದು ಅನುಮಾನ ಎಂದು ಹೇಳಿದರು. ಆದರೆ ಹಠಕ್ಕೆ ಬಿದ್ದು ಪಾಲ್ಗೊಂಡಿದ್ದಕ್ಕೆ ಬಹುಮಾನ ಚಿಕ್ಕದಾದರೂ ಬಹಳ ಖುಷಿ ಸಿಕ್ಕಿದೆ. ಸತತವಾಗಿ ಪತ್ರಿಕೆ ಓದಿಕೊಂಡು ಬಂದಿದ್ದೇನೆ. ಪದ ಬಂಧ ಬಿಡಿಸಲು ಮನೆಯಲ್ಲಿ ಪೈಪೋಟಿಯಿಂದ ಕಾಯುತ್ತಿರುತ್ತೇವೆ. ಕಾನೂನು, ಸಾಮಾನ್ಯ, ಕ್ರೀಡೆ ಹೀಗೆ ಹಲವು ವಿಷಯಗಳ ಬಗ್ಗೆ ತಿಳಿದುಕೊಳ್ಳಲು ವಿಜಯವಾಣಿ ಬಹಳ ಅನುಕೂಲವಾಗಿದೆ
> ಭಾರ್ಗವಿ, ನಂಗಲಿ