ಭಾರತದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆಯುವ ಜಿಮ್ ತರಬೇತುದಾರ ಬಾಲಿವುಡ್​​ ನಟ ಹೃತಿಕ್​ ರೋಷನ್​​ ಟ್ರೈನರ್​!

hrithik roshan
Published on

ಮುಂಬೈ: ಕೆಲವು ನಟರು ತಮ್ಮ ಚಿತ್ರಕ್ಕೆ ತಕ್ಕಂತೆ ದೇಹ ದಾಡ್ಯತೆ ಬದಲಿಸುತ್ತಾರೆ.  ಸಿಕ್ಸ್​ ಪ್ಯಾಕ್​ ಪ್ರದರ್ಶನ ಹೀಗೆ ದೇಹದ ಮೇಲೆ ಆಗಾಗ್ಗೆ ಪ್ರಯೋಗ ಮಾಡುತ್ತಲೇ ಇರುತ್ತಾರೆ. ಸಿನಿಮಾದಲ್ಲಿ ಸಿಕ್ಸ್​ ಪ್ಯಾಕ್​ ತೋರಿಸುತ್ತಲೇ ಇರುತ್ತಾರೆ. ಇವರು ಈ ರೀತಿ ದೇಹ ಬಲಪಡಿಸಿಕೊಳ್ಳಲು ಸಾಕಷ್ಟು ಶ್ರಮ ವಹಿಸಿ ದುಡಿಯುತ್ತರಾದರೂ, ಅದರ ಹಿಂದೆ ಇರುವುದು ಅವರ ಫಿಟ್​ನೆಸ್​ ತರಬೇತುದಾರನ ಕೈ ಚಳಕ ಇರುತ್ತದೆ.

ನಟರು ಏನು ಮಾಡಬೇಕು, ಹೇಗೆ ದೇಹ ಕಾಪಾಡಿಕೊಳ್ಳಬೇಕು, ಏನು ಡಯೆಟ್​ ಮಾಡಬೇಕು ಇತ್ಯಾದಿಗಳನ್ನು ಈ ಜಿಮ್​ ತರಬೇತುದಾರರು ನೋಡಿಕೊಳ್ಳುತ್ತಾರೆ.ನಟ ಹೃತಿಕ್ ರೋಷನ್ ಎಂದಾಕ್ಷಣ ಅವರ ಸಿಕ್ಸ್​ ಪ್ಯಾಕ್​ ಎಲ್ಲರ ಕಣ್ಣಮುಂದೆ ಬರುತ್ತದೆ. ಅವರ ಈ ಫಿಟ್‌ನೆಸ್ ಹಿಂದೆ ಇರುವುದು ಅವರ ಫಿಟ್​ನೆಸ್​ ತರಬೇತುದಾರ ಕ್ರಿಸ್ ಗೆಥಿನ್. ಸದ್ಯ ಇವರು ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಜಿಮ್ ತರಬೇತುದಾರ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಕ್ರಿಸ್ ಗೆಥಿನ್ ಅವರೊಂದಿಗೆ ಹೃತಿಕ್ ಅವರ ಫಿಟ್​ನೆಸ್​ ಪ್ರಯಾಣ 2010 ರಲ್ಲಿ ಪ್ರಾರಂಭವಾಯಿತು ಮತ್ತು ಇಬ್ಬರು ನಟನ ದೇಹವನ್ನು ಕೇವಲ 10 ವಾರಗಳಲ್ಲಿ ಪರಿವರ್ತಿಸಲು ಶ್ರಮಿಸಿದರು. ಹೃತಿಕ್ ರೋಷನ್ ಮಾತ್ರವಲ್ಲದೆ, ಕ್ರಿಸ್ ಭಾರತೀಯ ಚಲನಚಿತ್ರೋದ್ಯಮದ ಇತರ ಉನ್ನತ ನಟರಾದ ರಣವೀರ್ ಸಿಂಗ್, ಜಾನ್ ಅಬ್ರಹಾಂ, ಮಹೇಶ್ ಬಾಬು ಮತ್ತು ಇತರರೊಂದಿಗೆ ಕೆಲಸ ಮಾಡಿದ್ದಾರೆ.

ಫಿಟ್​ನೆಸ್​ ತರಬೇತುದಾರ ಕ್ರಿಸ್ ಗೆಥಿನ್ ಯಾರು?: ಕ್ರಿಸ್ ಗೆಥಿನ್ ಮೂಲತಃ ವೇಲ್ಸ್‌ನಿಂದ ಬಂದವರು ಮತ್ತು ಫಿಟ್‌ನೆಸ್ ತರಬೇತುದಾರರಾಗುವುದು ಯಾವಾಗಲೂ ಅವರ ಕನಸಾಗಿರಲಿಲ್ಲ. ಚಿಕ್ಕ ವಯಸ್ಸಿನಲ್ಲಿ, ಕ್ರಿಸ್ ಮೋಟಾರ್​ಸೈಕಲ್​ ಅಪಘಾತವಕ್ಕೆ ಈಡಾದರು. ನಂತರ ವೈದ್ಯರು ಅವರ ದೇಹವು ಎಂದಿಗೂ ಚೇತರಿಸಿಕೊಳ್ಳುವುದಿಲ್ಲ ಎಂದು ಹೇಳಿದರು. ಆದಾಗ್ಯೂ, ಅವರು ಜಿಮ್‌ಗೆ ಹೋಗಲು ಪ್ರಾರಂಭಿಸಿದರು ಮತ್ತು ಶೀಘ್ರದಲ್ಲೇ ಫಿಟ್‌ನೆಸ್ ಮತ್ತು ಉತ್ತಮ ತರಬೇತಿ ಪಡೆದ ದೇಹಕ್ಕಾಗಿ ಒಲವು ಬೆಳೆಸಿಕೊಂಡರು.

ವರದಿಗಳ ಪ್ರಕಾರ, ಹೃತಿಕ್ ರೋಷನ್ ಕ್ರಿಸ್ ಗೆಥಿನ್ ಅವರ ಪರಿಣತಿ ಮತ್ತು ತರಬೇತಿ ತಂತ್ರಗಳಿಗಾಗಿ ತಿಂಗಳಿಗೆ ಸುಮಾರು 20 ಲಕ್ಷ ರೂಪಾಯಿಗಳನ್ನು ಪಾವತಿಸುತ್ತಾರೆ. ಕ್ರಿಸ್ ತಮ್ಮ ಸೆಲೆಬ್ರಿಟಿ ಮತ್ತು ಹೈ-ಪ್ರೊಫೈಲ್ ಕ್ಲೈಂಟ್‌ಗಳಿಂದ ತಿಂಗಳಿಗೆ ಪ್ರತಿಯೊಬ್ಬರಿಂದ 7 ಲಕ್ಷ ರೂಪಾಯಿಗಳಿಂದ 30 ಲಕ್ಷ ರೂ. ಪಡೆಯುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net