

ಭಾರತದ ಉದ್ಯಮಿ ಮತ್ತು ಹೂಡಿಕೆದಾರರಲ್ಲಿ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಶ್ರೀಮಂತ ಸ್ವಯಂ ನಿರ್ಮಿತ ಮಹಿಳೆಯರ ಪಟ್ಟಿಯಲ್ಲಿ ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್-ಶಾ ಮತ್ತು ಬೈಜು ಸಹ-ಸಂಸ್ಥಾಪಕಿ ದಿವ್ಯಾ ಗೋಕುಲನಾಥ್ ನಂತರದ ಸ್ಥಾನದಲ್ಲಿ ಉದ್ಯಮಿ ಅಂಬಿಗಾ ಸುಬ್ರಮಣಿಯನ್ ಅವರನ್ನ ಗುರುತಿಸಲಾಗಿದೆ. ಶತಕೋಟಿ ಡಾಲರ್‌ಗೂ ಹೆಚ್ಚು ಮೌಲ್ಯದ ಸ್ಟಾರ್ಟ್‌ಅಪ್ ಅನ್ನು ಮುನ್ನಡೆಸಿದ ಮೊದಲ ಭಾರತೀಯ ಮಹಿಳೆ ಎಂಬ ದಾಖಲೆಯನ್ನೂ ಸುಬ್ರಮಣಿಯನ್ ಹೊಂದಿದ್ದಾರೆ.
ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಪದವೀಧರರಾಗಿರುವ ಅಂಬಿಗಾ ಸುಬ್ರಮಣಿಯನ್, ಯುಎಸ್‌ನ ಮಿಚಿಗನ್‌ನಿಂದ ಕಂಪ್ಯೂಟರ್ ಎಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 1998ರಲ್ಲಿ ಮೊಟೊರೊಲಾದೊಂದಿಗೆ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ್ದು, ಮೊಟೊರೊಲಾ ಸಂಸ್ಥೆಯನ್ನು ಅವರ ಮಾಜಿ ಪತಿ ಧೀರಜ್ ರಾಜಾರಾಂ ಅವರು ಸ್ಥಾಪಿಸಿದ್ದರು.
ನಂತರ ಪ್ರಮುಖ ಡೇಟಾ ಅನಾಲಿಟಿಕ್ಸ್ ಸಂಸ್ಥೆಯ CEO ಆಗಿದ್ದರು. 2017 ರಲ್ಲಿ, ಅವರು ಕೊಟಕ್ ಖಾಸಗಿ ಬ್ಯಾಂಕಿಂಗ್ ಹುರುನ್ ಶ್ರೀಮಂತರ ಪಟ್ಟಿಯಲ್ಲಿ ಭಾರತದ ಎಂಟು ಶ್ರೀಮಂತ ಸ್ವಯಂ-ನಿರ್ಮಿತ ಉದ್ಯಮಿಗಳಲ್ಲಿ ಕಿರಿಯವರಾಗಿದ್ದಾರೆ.
ಪತಿ ಧೀರಜ್ ರಾಜಾರಾಂ ಅವರಿಂದ ಅಂಬಿಗಾ ಬೇರ್ಪಟ್ಟರು ಮತ್ತು ಅಂತಿಮವಾಗಿ Mu ಸಿಗ್ಮಾದಲ್ಲಿ ತನ್ನ ಸ್ಥಾನವನ್ನು ತ್ಯಜಿಸಿದರು. ಕಂಪನಿಯ ನಿಯಂತ್ರಕ ಷೇರುದಾರರಾಗಲು ರಾಜಾರಾಂ ಅವರು ಕಂಪನಿಯಲ್ಲಿ ಅಂಬಿಗಾರ 24 ಪ್ರತಿಶತ ಪಾಲನ್ನು ಖರೀದಿಸಿದರು.
ತದನಂತರ ಅಂಬಿಗಾ ತನ್ನ ಮುಂದಿನ ಸಾಹಸವಾಗಿ hyphen.social ಅನ್ನು 2018 ರಲ್ಲಿ ಸಾಮಾಜಿಕ ನೆಟ್‌ವರ್ಕಿಂಗ್ ವೇದಿಕೆಯಾಗಿ ಪ್ರಾರಂಭಿಸಿದರು. Innov8, Piper Biosciences, Box8, ICE ಕ್ರಿಯೇಟಿವ್ ಎಕ್ಸಲೆನ್ಸ್ ಮತ್ತು ಕಾರ್ಟರ್‌ಎಕ್ಸ್‌ನಂತಹ ಮುಂಬರುವ ಸಂಸ್ಥೆಗಳನ್ನು ಬೆಂಬಲಿಸುವ ಮೂಲಕ ಅವರು ಯಶಸ್ವಿ ಹೂಡಿಕೆದಾರರಾಗಿ ಹೊರಹೊಮ್ಮಿದರು.