ಮೆಡಿಕಲ್​ ನೆಗ್ಲಿಜೆನ್ಸಿ ಕಾಯ್ದೆ ಹಿಂತೆಗೆದುಕೊಳ್ಳಿ; ಡಾ. ಶ್ರೀನಿವಾಸ ಒತ್ತಾಯ

Published on

ರಾಣೆಬೆನ್ನೂರ: ಸರ್ಕಾರ ಮೆಡಿಕಲ್​ ನೆಗ್ಲಿಜೆನ್ಸಿ ಕಾಯ್ದೆ ಹಿಂತೆಗೆದುಕೊಳ್ಳುವಲ್ಲಿ ನಿರ್ಧಾರ ಪ್ರಕಟಿಸಬೇಕು. ಇಲ್ಲವೆ ಈ ಕಾಯ್ದೆಯಡಿ ಕೆಲವು ಮಾರ್ಪಾಡು ಮಾಡಬೇಕು ಎಂಬುದು ಐಎಂಎ ಒತ್ತಾಯವಾಗಿದ್ದು, ಈ ಬಗ್ಗೆ ಹಲವಾರು ವರ್ಷಗಳಿಂದ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ ಎಂದು ಐಎಂಎ ರಾಜ್ಯಾಧ್ಯ ಡಾ. ಎನ್​. ಶ್ರೀನಿವಾಸ ಆರೋಪಿಸಿದರು.
ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತುರ್ತು ಸಂದರ್ಭಗಳಲ್ಲಿ ರೋಗಿಗೆ ಚಿಕಿತ್ಸೆ ನೀಡುವಾಗ ಸಾವು ಸಂಭವಿಸುವ ಸಾಧ್ಯತೆಗಳಿರುತ್ತವೆ. ಹೀಗಾಗಿ ಅನೇಕ ಬಾರಿ ಗಲಾಟೆಗಳು ಉಂಟಾಗುತ್ತವೆ. ಆದ್ದರಿಂದ ಮೆಡಿಕಲ್​ ನೆಗ್ಲಿಜೆನ್ಸಿ ಕಾಯ್ದೆಯನ್ನು ಹಿಂದಕ್ಕೆ ಪಡೆಯಬೇಕಾಗಿದೆ ಎಂದರು.
ವೈದ್ಯರು ಸದಾ ರೋಗಿಯ ಹಿತವನ್ನು ಬಯಸುತ್ತಾರೆ. ಆದರೆ, ಮೆಡಿಕಲ್​ ನೆಗ್ಲಿಜೆನ್ಸಿ ಕಾಯ್ದೆಯಿಂದಾಗಿ ನೀರಾಳವಾಗಿ ರೋಗಿಯನ್ನು ನೋಡಲು ಸಾಧ್ಯವಾಗುತ್ತಿಲ್ಲ. ಮುಂದಿನ ದಿನಗಳಲ್ಲಿ ಭಯಬಿಟ್ಟು ಕೆಲಸ ಮಾಡುವ ವಾತಾವರಣದ ನಿರ್ಮಾಣ ಮಾಡಬೇಕು. ಕೋವಿಡ್​ ಸಂದರ್ಭದಲ್ಲಿ ನಮ್ಮ ವೈದ್ಯರು ಪ್ರಾಣದ ಹಂಗು ತೊರೆದು ಕಾರ್ಯ ನಿರ್ವಹಿಸಿದರು. ಚಿಕಿತ್ಸೆ ನೀಡುತ್ತಿದ್ದ 90 ವೈದ್ಯರು ಸಾವನ್ನಪ್ಪಿದರು. ಆ ಸಮಯದಲ್ಲಿ ವೈದ್ಯರ ಕುಟುಂಬ ವರ್ಗದ ಸದಸ್ಯರು ಬಹಳಷ್ಟು ತೊಂದರೆ ಎದುರಿಸಬೇಕಾಯಿತು. ಆದ್ದರಿಂದ ಸರ್ಕಾರ ವೈದ್ಯರಿಗೆ ಅನುಕೂಲ ಆಗುವ ರೀತಿಯಲ್ಲಿ ಕಾಯ್ದೆ ತಿದ್ದುಪಡಿ ಮಾಡಬೇಕಿದೆ ಎಂದರು.
ಐಎಂಎ ತಾಲೂಕು ಅಧ್ಯ ಡಾ. ಅಭಿನಂದನ ಸಾವಕಾರ, ಕಾರ್ಯದಶಿರ್ ಡಾ. ಪುಟ್ಟರಾಜ, ಡಾ. ಚಂದ್ರಶೇಖರ ಕೇಲಗಾರ, ಡಾ. ನಾಗರಾಜ ದೊಡ್ಮನಿ, ಡಾ. ವಿರುಪಾಪ್ಪ, ಡಾ. ವಿದ್ಯಾ ವಾಸುದೇವಮೂತಿರ್, ಡಾ. ಗಿರಿಜಾ ನೆಗಳೂರ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net