ಸುದ್ದಿವಾಹಿನಿಗಳಿಗೆ ನಿರ್ಬಂಧದ ಅರ್ಜಿ ಇತ್ಯರ್ಥ

Front 2 Vidhana Soudha
Published on

ಬೆಂಗಳೂರು: ವಿಧಾನಸಭೆ ಕಲಾಪದ ನೇರಪ್ರಸಾರಕ್ಕೆ ಸುದ್ದಿವಾಹಿನಿಗಳನ್ನು ನಿರ್ಬಂಧಿಸಿರುವ ಸ್ಪೀಕರ್ ಕ್ರಮ ಪ್ರಶ್ನಿಸಿ ಸಲ್ಲಿಸಿದ್ದ ಪಿಐಎಲ್ ಇತ್ಯರ್ಥಪಡಿಸಿರುವ ಹೈಕೋರ್ಟ್, ಈ ಸಂಬಂಧ ಸ್ಪೀಕರ್ ಅವರಿಗೇ ಮನವಿ ಸಲ್ಲಿಸುವಂತೆ ಸೂಚಿಸಿದೆ.

ವಾದ ಆಲಿಸಿದ ಸಿಜೆ ಎ.ಎಸ್. ಓಕ್ ನೇತೃತ್ವದ ವಿಭಾಗೀಯ ಪೀಠ, ಅರ್ಜಿದಾರರು ಸ್ಪೀಕರ್ ಅರೆ ನ್ಯಾಯಿಕ ಅಧಿಕಾರ ಬಳಸಿ ಆದೇಶ ನೀಡಿದ್ದಾರೆಂದು ಹೇಳಿದ್ದಾರೆ. ಆದರೆ, ಸ್ಪೀಕರ್ ಅರೆ ನ್ಯಾಯಿಕ ಅಧಿಕಾರ ಬಳಸಿಲ್ಲ. ಆದ್ದರಿಂದ ಅವರ ಆದೇಶದ ವಿರುದ್ಧ ಯಾವುದೇ ನಿರ್ದೇಶನ ನೀಡಲಾಗದು. ಅರ್ಜಿದಾರರು

ಮೊದಲು ಈ ಸಂಬಂಧ ಸ್ಪೀಕರ್​ಗೆ ಮನವಿ ಸಲ್ಲಿಸಬೇಕು. ಅವರು ಮನವಿ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕೆಂದು ತಿಳಿಸಿ ಅರ್ಜಿಯನ್ನು ಇತ್ಯರ್ಥಪಡಿಸಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net