ಬೆಂಗಳೂರು:
ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷರನ್ನಾಗಿ ಹಿರಿಯ ಪತ್ರಕರ್ತೆ ಆಯೇಷಾ ಖಾನಂ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಸದಸ್ಯರಾಗಿ ಚಿತ್ರದುರ್ಗದ ಎಂ.ಎನ್.ಅಹೋಬಳಪತಿ, ಬೆಂಗಳೂರಿನ ಕೆ.ವೆಂಕಟೇಶ್, ಗಂಗಾವತಿಯ ಕೆ.ನಿಂಗಜ್ಜ ಅವರು ನೇಮಕಗೊಂಡಿದ್ದಾರೆ.
ಅಕಾಡೆಮಿ ಅಧ್ಯಕ್ಷ ಸ್ಥಾನಕ್ಕೆ ಇದೇ ಪ್ರಥಮಬಾರಿಗೆ ಅಲ್ಪಸಂಖ್ಯಾತರು ಮತ್ತು ಮಹಿಳೆಯೊಬ್ಬರನ್ನು ಸಿದ್ದರಾಮಯ್ಯ ಅವರ ಸರ್ಕಾರ ನೇಮಕ ಮಾಡಿದ್ದು, ಬಹಳ ವರ್ಷಗಳ ಕೊರತೆ ನೀಗಿದೆ.
ಡಿಡಿ1 ವರದಿಗಾರರಾಗಿದ್ದ ಆಯೇಷಾ ಖಾನಂ ಅವರನ್ನು ನೇಮಕ ಮಾಡುವಂತೆ ಸಿಎಂ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಅವರು ಶಿಾರಸ್ಸು ಮಾಡಿದ್ದಕ್ಕೆ ಸಿದ್ದರಾಮಯ್ಯ ಅವರು ಮನ್ನಣೆ ನೀಡಿದ್ದರಿಂದ ಮಹಿಳೆಯೊಬ್ಬರು ಆ ಹುದ್ದೆಗೆ ನೇಮಕಗೊಳ್ಳಲು ಸಾಧ್ಯವಾಗಿದೆ.
ಹಿರಿಯ ಪೋಟೋಗ್ರಾರ್ ವೆಂಕಟೇಶ್ ಅವರನ್ನು ನೇಮಕ ಮಾಡುವ ಮೂಲಕ ಮೊದಲ ಬಾರಿಗೆ ಪೋಟೋಗ್ರಾರ್ ಒಬ್ಬರಿಗೂ ಅಕಾಡೆಮಿ ಸದಸ್ಯತ್ವ ಸ್ಥಾನದಲ್ಲಿ ಅವಕಾಶ ಕಲ್ಪಿಸಿದಂತಾಗಿದೆ.