ಮಾನಸಿಕ ಪರಿವರ್ತನೆಯಿಂದ ಸಾರ್ಥಕತೆ

centrol jail programme
ಕೇಂದ್ರ ಕಾರಾಗೃಹದಲ್ಲಿ ಮನಸ್ಸಿದ್ದರೆ ಮಾರ್ಗ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಕರ್ನಾಟಕ ಗೃಹ ಮಂಡಳಿ ಆಯುಕ್ತ ಕೆ.ಎ.ದಯಾನಂದ ಉದ್ಘಾಟಿಸಿದರು. ಡಾ. ಪಿ.ರಂಗನಾಥ, ಆರ್.ಪ್ರೀತಿ, ಸಮನ್ವಯ ಕಾಶಿ, ಜಗದೀಶ್, ಶ್ರೀಶೈಲ ಕಟ್ಟಿಮನಿ, ಸುಷ್ಮಾ ವಡಗೇರ ಇತರರಿದ್ದರು.
Published on

ಶಿವಮೊಗ್ಗ: ಮನಸ್ಸಿನ ಭಾವನೆಗಳಿಂದ ನಮ್ಮ ಬದುಕು ನಿಯಂತ್ರಣಕ್ಕೊಳಪಡುತ್ತದೆ. ಮಾನಸಿಕ ಪರಿವರ್ತನೆಯಿಂದ ಸಾರ್ಥಕತೆ ಕಂಡುಕೊಳ್ಳಲು ಸಾಧ್ಯ ಎಂದು ಕರ್ನಾಟಕ ಗೃಹ ಮಂಡಳಿ ಆಯುಕ್ತ ಕೆ.ಎ.ದಯಾನಂದ ಹೇಳಿದರು.

ಸೋಗಾನೆ ಕೇಂದ್ರ ಕಾರಾಗೃಹದಲ್ಲಿ ಶನಿವಾರ ಬಂಧಿನಿವಾಸಿಗಳ ಮನಪರಿವರ್ತನಾ ಆರಂಭ ಸರಣಿ-2ರ ಭಾಗವಾಗಿ ಮನಸ್ಸಿದ್ದರೆ ಮಾರ್ಗ ವಿಶೇಷ ಉಪನ್ಯಾಸ ಉದ್ಘಾಟಿಸಿ ಮಾತನಾಡಿ, ಧನಾತ್ಮಕ ಮತ್ತು ಋಣಾತ್ಮಕ ಆಲೋಚನೆಗಳೆರಡೂ ನಮ್ಮ ಮನಸ್ಸಿನಲ್ಲಿಯೇ ಹುಟ್ಟುತ್ತವೆ. ಸರಿತಪ್ಪುಗಳ ಸೂಕ್ಷ್ಮ ತಿಳಿವಳಿಕೆ ಮತ್ತು ವಿವೇಚನೆ ಹಾಗೂ ತಾಳ್ಮೆ, ಪ್ರೀತಿ, ನಂಬಿಕೆ, ಸರಳತೆಯಿಂದ ಬದುಕನ್ನು ಕಟ್ಟಬೇಕು ಎಂದು ತಿಳಿಸಿದರು.

ನೆಮ್ಮದಿ ಕೆಡಿಸುವ ವಿಚಾರಗಳಿಂದ ಮನಸ್ಸು ನಮ್ಮನ್ನು ತಪ್ಪುದಾರಿಯಲ್ಲಿ ಹೋಗುವಂತೆ ಪ್ರಚೋದಿಸುತ್ತದೆ. ಮನುಷ್ಯನಿಗೆ ಒಳ್ಳೆಯದರ ಕಡೆಗಿನ ಆಕರ್ಷಣೆಗಿಂತ ಕೆಟ್ಟದ್ದರ ಕಡೆ ಆಕರ್ಷಣೆ ಹೆಚ್ಚು. ಆದರೆ ಒಳ್ಳೆಯದರ ಕಡೆ ಮನಸ್ಸು ಹೆಚ್ಚು ಆಕರ್ಷಿತವಾಗುವಂತೆ ಅಭ್ಯಾಸ ಮಾಡಿಕೊಂಡಾಗ ನಮಗೆ ಒಳ್ಳೆಯ ರುಚಿ ಹತ್ತುತ್ತದೆ ಎಂದರು.

ಕಾರಾಗೃಹದ ಸಹಾಯಕ ಅಧೀಕ್ಷಕಿ ಆರ್.ಪ್ರೀತಿ, ಸಮನ್ವಯ ಟ್ರಸ್ಟ್ ನಿರ್ದೇಶಕ ಸಮನ್ವಯ ಕಾಶಿ, ಕೆಎಸ್‌ಐಎಸ್‌ಎಫ್ ಇನ್‌ಸ್ಪೆಕ್ಟರ್ ಜಗದೀಶ್, ಮುಖ್ಯ ಅಧೀಕ್ಷಕ ಡಾ. ಪಿ.ರಂಗನಾಥ, ಜೈಲರ್‌ಗಳಾದ ಶ್ರೀಶೈಲ ಕಟ್ಟಿಮನಿ, ಸುಷ್ಮಾ ವಡಗೇರ, ಶರಣಬಸವ, ವಿಜಯ ಕುಮಾರ್, ವೈದ್ಯಾಧಿಕಾರಿ ಡಾ. ಮಧು, ಸಹಾಯಕ ಜೈಲರ್‌ಗಳಾದ ಸಿದ್ದಪ್ಪ ಕುರಿ, ಪ್ರಭು ಗಾಣಿಗೇರ, ಕೆ.ಲಕ್ಷ್ಮಯ್ಯ, ಶಿಕ್ಷಕರಾದ ಗೋಪಾಲಕೃಷ್ಣ, ಎಸ್.ಎನ್.ಲೀಲಾ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net