

ಬೆಂಗಳೂರು: ಶ್ರೀ ಬಾಲಾಜಿ ಯೋಗ ಕೇಂದ್ರದಲ್ಲಿ ಜುಲೈ.22 ಸೋಮವಾರದಂದು ಹಿರಿಯ ನಾಗರಿಕರು, ಮಹಿಳೆಯರು, ಹಾಗೂ ಯೋಗಾಸಕ್ತರು ಒಗ್ಗೂಡಿ ಗುರು ಪೂರ್ಣಿಮೆ ಆಚರಿಸಿದರು ಈ ವೇಳೆ ಯೋಗ ಗುರುಗಳನ್ನು ಗೌರವಿಸಲಾಯಿತು.
ಕಳೆದ 40 ವರ್ಷಗಳ ಹಿಂದೆ ಯೋಗಿ ಶ್ರೀನಿವಾಸ ಮೂರ್ತಿ ಗುರೂಜಿ ಪ್ರಾರಂಭಿಸಿದ ಶ್ರೀ ಬಾಲಾಜಿ ಯೋಗ ಕೇಂದ್ರ. ಈಗಲೂ ಯೋಗ ಕಲಿಕೆಯ ಪರಂಪರೆ ಮುಂದುವರೆಸುತ್ತಿದೆ. ಗುರೂಜಿ ಅವರ ಆಶಯಗಳನ್ನು ಪ್ರಸ್ತುತ ಶಂಕರ್ ಗುರೂಜಿ ಚಾಲ್ತಿಯಲ್ಲಿಟ್ಟಿದ್ದಾರೆ. ಸದ್ಯ ಇವರಿಗೆ 75 ವರ್ಷಗಳು ಪೂರ್ಣಗೊಂಡಿದ್ದು, 100 ಕ್ಕೂ ಅಧಿಕ ಮಂದಿ ಇಲ್ಲಿ ಯೋಗ ಕಲಿತ್ತಿದ್ದಾರೆ ಎಂದು ಯೋಗ ಕೇಂದ್ರದ ಅಧ್ಯಕ್ಷ ವಿಷ್ಣು ಭರತ್ ಆಲಂಪಳ್ಳಿ ತಿಳಿಸಿದರು.
ಗುರು ಎಂಬುದು ಸಂಸ್ಕೃತ ಪದ ಇದರ ಅರ್ಥ ಕತ್ತಲೆಯಿಂದ ಬೆಳಕಿಗೆ ತರುವುದು. ಹಿಗಾಗಿ ಗುರು ಪೂರ್ಣಿಮೆಯಂದು ಹಿರಿಯ ನಾಗರಿಕರು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಗುರು ಪೂರ್ಣಿಮೆ ದಿನವನ್ನು ಅರ್ಥ ಪೂರ್ಣವಾಗಿ ಆಚರಿಸಲಾಗಿದೆ. ಯೋಗ ಎಂದರೆ ಆಸನಗಳನ್ನು ಹಾಕುವ ಜೊತೆಗೆ ದಿನದ 24 ಗಂಟೆ, ವರ್ಷಪೂರ್ತಿ ಮನಸ್ಸನ್ನು ಹತೋಟಿಯಲ್ಲಿಟ್ಟುಕೊಂಡು ಸಂತಸದಿಂದಿರುವುದೇ ಸುಯೋಗ ಎಂದು ಹೇಳಿದರು.
ಸಂಸ್ಥೆಯು ಆಫ್ಲೈನ್ ಹಾಗೂ ಆನ್ ಲೈನ್ ತರಗತಿಗಳನ್ನು ನಡೆಸುತ್ತಿದೆ. ಯೋಗಭ್ಯಾಸ ಮಾಡಲು ಇಚ್ಚಿಸುವವರು ದೂ. 9342810861 ಸಂಪರ್ಕಿಸಿ ಎಂದು ಮನವಿ ಮಾಡಿದರು.