

ಇಸ್ರೇಲ್: ಹಮಾಸ್‌ನ ಹಠಾತ್ ದಾಳಿಯ ನಂತರ ಮೆಕ್‌ಡೊನಾಲ್ಡ್ಸ್ ಇಸ್ರೇಲ್ ರಕ್ಷಣಾ ಪಡೆಗಳು ಮತ್ತು ನಾಗರಿಕರಿಗೆ ಸಾವಿರಾರು ಉಚಿತ ಊಟವನ್ನು ನೀಡುವುದಾಗಿ ಘೋಷಿಸಿದೆ. ಜತೆಗೆ ರೆಸ್ಟೋರೆಂಟ್‌ಗಳಿಗೆ ಬರುವ ಸೈನಿಕರು ಮತ್ತು ಭದ್ರತಾ ಪಡೆಗಳಿಗೆ ಇದು 50% ರಿಯಾಯಿತಿಯನ್ನು ಸಹ ನೀಡುತ್ತಿದೆ.
ಹಮಾಸ್ ವಿರುದ್ಧ ಹೋರಾಡುತ್ತಿರುವ ಇಸ್ರೇಲಿ ಸೈನಿಕರಿಗೆ ಮೆಕ್‌ಡೊನಾಲ್ಡ್ಸ್ ಕಳೆದ ಕೆಲವು ದಿನಗಳಿಂದ ಇಸ್ರೇಲ್‌ನಾದ್ಯಂತ ಉಚಿತ ಊಟವನ್ನು ನೀಡುತ್ತಿದೆ. ಹಮಾಸ್ ವಿರುದ್ಧ ನಡೆಯುತ್ತಿರುವ ಯುದ್ಧದಲ್ಲಿ ಇಸ್ರೇಲಿ ಸೈನಿಕರಿಗೆ "ಹತ್ತಾರು ಸಾವಿರ ಊಟಗಳನ್ನು" ಉಚಿತ ನೀಡುವುದಾಗಿ ಫಾಸ್ಟ್ ಫುಡ್ ಘೋಷಿಸಿದ ನಂತರ ಸೋಶಿಯಲ್ ಮೀಡಿಯಾದಲ್ಲಿ ಮೆಕ್‌ಡೊನಾಲ್ಡ್ಸ್ ನ್ನು ಬಿಹಿಷ್ಕಾರ ಮಾಡಬೇಕು ಎನ್ನುವ ಕೂಗು ಕೇಳಿ ಬಂದಿದೆ.
ಇಸ್ರೇಲ್‌ನ ಮೆಕ್‌ಡೊನಾಲ್ಡ್ ತನ್ನ ಇನ್‌ಸ್ಟಾಗ್ರಾಮ್‌ನಲ್ಲಿ, ದೇಶದ ರಕ್ಷಣಾ ಪಡೆಗಳು, ಆಸ್ಪತ್ರೆಗಳಿಗೆ ಉಚಿತ ಊಟವನ್ನು ನೀಡುತ್ತಿರುವುದಾಗಿ ಘೋಷಿಸಿದೆ. "ನಾವು ಈಗಾಗಲೇ ಆಸ್ಪತ್ರೆಗಳು ಮತ್ತು ಮಿಲಿಟರಿ ಘಟಕಗಳಲ್ಲಿ 4,000 ಜನರಿಗೆ ಊಟವನ್ನು ನೀಡಿದ್ದೇವೆ. ನಾವು ಪ್ರತಿದಿನ ಸೈನಿಕರಿಗೆ ಆಹಾರವನ್ನು ನೀಡಲು ನಿರ್ಧರಿಸಿದ್ದೇವೆ. ಈ ಉದ್ದೇಶಕ್ಕಾಗಿ ನಿರ್ದಿಷ್ಟವಾಗಿ ಐದು ರೆಸ್ಟೋರೆಂಟ್ಗಳನ್ನು ತೆರೆದಿದ್ದೇವೆ" ಎಂದು ಮೆಕ್ಡೊನಾಲ್ಡ್ಸ್ ಹೇಳಿದೆ.
ಅನೇಕ ಗ್ರಾಹಕರು ಮೆಕ್‌ಡೊನಾಲ್ಡ್‌ನ ಕ್ರಮವನ್ನು ಟೀಕಿಸಿದ್ದಾರೆ. ಮತ್ತೊಂದೆಡೆ, ಕೆಲವು ನೆಟಿಜನ್‌ಗಳು ಇಸ್ರೇಲ್ ಅನ್ನು ಬೆಂಬಲಿಸಿದ್ದಕ್ಕಾಗಿ ಫಾಸ್ಟ್ ಫುಡ್ ಚೈನ್ ಮೆಕ್‌ಡೊನಾಲ್ಡ್ ಅನ್ನು ಶ್ಲಾಘಿಸಿದ್ದಾರೆ. ವೆಲ್ ಡನ್ ಮೆಕ್ ಡೊನಾಲ್ಡ್ಸ್ ಇಸ್ರೇಲ್ ಎಂದು ಮತ್ತೊಬ್ಬ ನೆಟಿಜನ್ ಕಾಮೆಂಟ್ ಮಾಡಿದ್ದಾರೆ.
ಇಸ್ರೇಲ್ ಪಡೆಗಳಿಗೆ ಉಚಿತ ಆಹಾರವನ್ನು ಒದಗಿಸುವ ಆಹಾರ ದೈತ್ಯ ಮೆಕ್‌ಡೊನಾಲ್ಡ್‌ನ ಕ್ರಮದ ವಿರುದ್ಧ ಅಕ್ಟೋಬರ್ 13 ರಂದು ಲೆಬನಾನ್‌ನಲ್ಲಿ ಪ್ರತಿಭಟನೆಗಳು ಭುಗಿಲೆದ್ದವು. ಸ್ಪಿನ್ನೀಸ್‌ನಲ್ಲಿರುವ ಮೆಕ್‌ಡೊನಾಲ್ಡ್ಸ್ ಪ್ಯಾಲೇಸ್ಟಿನಿಯನ್ ಗುಂಪುಗಳಿಂದ ದಾಳಿ ಮಾಡಿತು. ಈ ಹಿನ್ನಲೆಯಲ್ಲಿ ಮೆಕ್‌ಡೊನಾಲ್ಡ್ ಒಮಾನ್ X ನಲ್ಲಿ ಗಾಜಾವನ್ನು ಬೆಂಬಲಿಸುವ ಪೋಸ್ಟ್ ಅನ್ನು ಪೋಸ್ಟ್ ಮಾಡಿದೆ. ಗಾಜಾದಲ್ಲಿನ ಪ್ರಯತ್ನಗಳಿಗೆ ಸಹಾಯ ಮಾಡಲು ಕಂಪನಿಯು $ 100,000 ದೇಣಿಗೆ ನೀಡಿದೆ ಎಂದು ಮೆಕ್ಡೊನಾಲ್ಡ್ಸ್ ಹೇಳಿದೆ.
"ಈ ಕಷ್ಟದ ಸಮಯದಲ್ಲಿ ನಾವು ಗಾಜಾದ ಪರವಾಗಿ ನಿಲ್ಲುತ್ತೇವೆ. ನಾವೆಲ್ಲರೂ ಗಾಜಾದ ಜನರಿಗೆ ಸಹಾಯ ಮಾಡೋಣ. ಅರಬ್ ಮತ್ತು ಮುಸ್ಲಿಂ ದೇಶಗಳನ್ನು ಎಲ್ಲಾ ದುಷ್ಟರಿಂದ ರಕ್ಷಿಸಲು ನಾವು ಸರ್ವಶಕ್ತ ದೇವರನ್ನು ಕೇಳುತ್ತೇವೆ, ”ಎಂದು ಮೆಕ್‌ಡೊನಾಲ್ಡ್ ಒಮಾನ್ ಹೇಳಿದರು. ಮತ್ತೊಂದೆಡೆ, ಮೆಕ್‌ಡೊನಾಲ್ಡ್ಸ್ ಕುವೈತ್, ಗಾಜಾದಲ್ಲಿ ಪರಿಹಾರ ಪ್ರಯತ್ನಗಳಿಗಾಗಿ ಕುವೈತ್ ರೆಡ್ ಕ್ರೆಸೆಂಟ್ ಸೊಸೈಟಿಗೆ $250,000 ದೇಣಿಗೆ ನೀಡುತ್ತಿದೆ ಎಂದು ಹೇಳಿದರು.
ಅಕ್ಟೋಬರ್ 7 ರಂದು ಹೋರಾಟ ಪ್ರಾರಂಭವಾದಾಗಿನಿಂದ ಗಾಜಾದಲ್ಲಿ 724 ಮಕ್ಕಳು ಸೇರಿದಂತೆ ಒಟ್ಟು 2,215 ಪ್ಯಾಲೆಸ್ತೀನಿಯರು ಕೊಲ್ಲಲ್ಪಟ್ಟಿದ್ದಾರೆ ಎಂದು ಹಮಾಸ್ ಅಧಿಕಾರಿಗಳು ತಿಳಿಸಿದ್ದಾರೆ. ಇದೇ ಅವಧಿಯಲ್ಲಿ ಇಸ್ರೇಲ್‌ನಲ್ಲಿ 1,300 ಜನರು ಸಾವನ್ನಪ್ಪಿದ್ದಾರೆ.