

ನವದೆಹಲಿ: ಮೆಕ್‌ಡೊನಾಲ್ಡ್ಸ್ ಫಾಸ್ಟ್ಫುಡ್ ಸಂಸ್ಥೆ ಇದೀಗ ತಮ್ಮ ಬರ್ಗರ್‌ಗಳಲ್ಲಿ ಟೊಮ್ಯಾಟೊಗಳನ್ನು ಬಳಸುವುದಿಲ್ಲ ಎಂದು ಮಾಹಿತಿ ನೀಡಿದೆ.
ಫಾಸ್ಟ್ಫುಡ್ ಸಂಸ್ಥೆ ಮೆಕ್‌ಡೊನಾಲ್ಡ್ ತಮ್ಮ ಗ್ರಾಹಕರಿಗೆ ಎಂದಿನಂತೆ ಬರ್ಗರ್ಗಳನ್ನು ಉತ್ತಮ ಗುಣಮಟ್ಟದಲ್ಲಿ ನೀಡಲಿದ್ದು, ಟೊಮ್ಯಾಟೊ ಬಳಕೆಯನ್ನು ಮಾತ್ರ ಕಡಿತಗೊಳಿಸುತ್ತಿದ್ದೇವೆ ಎಂದು ಹೇಳಿದೆ. ದೇಶಾದ್ಯಂತ ಹಲವೆಡೆ ಟೊಮ್ಯಾಟೊ ಪೂರೈಕೆಯಲ್ಲಿ ಕೊರತೆಯನ್ನು ಅನುಭವಿಸುತ್ತಿರುವ ಹಿನ್ನೆಲೆ ಮತ್ತು ಬೆಲೆಯಲ್ಲಿ ದಿಢೀರ್ ಏರಿಕೆ ಕಂಡುಬಂದಿರುವುದೇ ಟೊಮ್ಯಾಟೊ ಕೈಬಿಡಲು ಪ್ರಮುಖ ಕಾರಣ ಎಂದು ಸಂಸ್ಥೆ ಹೇಳಿದೆ.
ಟೊಮ್ಯಾಟೊ ದರ ಏರಿಕೆ ಮತ್ತು ಗುಣಮಟ್ಟದ ಬಗ್ಗೆ ಕಳವಳ ವ್ಯಕ್ತಪಡಿಸಿದ ಕಾರಣ ಈ ಕ್ರಮವು ಮುನ್ನೆಲೆಗೆ ಬಂದಿದೆ. ಕೆಲವು ಪ್ರದೇಶಗಳಲ್ಲಿ, ಟೊಮ್ಯಾಟೊಗಳ ಸಗಟು ಬೆಲೆಗಳು ಒಂದು ತಿಂಗಳೊಳಗೆ 300% ರಷ್ಟು ಏರಿಕೆಯಾಗಿದ್ದು, ಹಲವು ನಗರಗಳಲ್ಲಿ ಈ ವಾರ ಕೆಜಿಗೆ 160 ರೂ. ಇದೆ. ಇನ್ನು ಉತ್ತರಾಖಂಡದ ಕೆಲವು ಭಾಗಗಳಲ್ಲಿ ಟೊಮ್ಯಾಟೊ ಕೆಜಿಗೆ 250 ರೂ. ಗಡಿ ತುಲುಪಿದೆ,(ಏಜೆನ್ಸೀಸ್).