

ಬೆಂಗಳೂರು: ಮಾದರಿ ನೀತಿ ಸಂಹಿತೆ ಉಲ್ಲಂಘನೆಯ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ಚುನಾವಣಾ ಆಯೋಗ ಚುನಾವಣಾ ಅಕ್ರಮಗಳ ಪತ್ತೆಗೆ ಬಲೆ ಬೀಸಿದೆ.
ನೀತಿ ಸಂಹಿತೆ ಜಾರಿಯಾದಂದಿನಿಂದ ಭಾನುವಾರದವರೆಗೆ 98.89 ಕೋಟಿ ರೂ. ನಗದು ಸೇರಿದಂತೆ 452.98 ಕೋಟಿ ರೂ. ಮೌಲ್ಯದ ವಸ್ತುಗಳನ್ನು ಮುಟ್ಟುಗೋಲು ಹಾಕಿಕೊಂಡಿದೆ.
179.39 ಕೋಟಿ ರೂ. ಬೆಲೆ ಬಾಳುವ ಮದ್ಯ, 11.96 ಕೋಟಿ ರೂ. ಮೌಲ್ಯದ ಡ್ರಗ್ಸ್, 78.33 ಕೋಟಿ ರೂ. ಬೆಲೆಯ ಚಿನ್ನ, 1.18 ಕೋಟಿ ರೂ. ಮೊತ್ತದ ಬೆಳ್ಳಿ, 1.22 ಕೋಟಿ ರೂ. ಬೆಲೆ ಬಾಳುವ ವಜ್ರ, 9.53 ಕೋಟಿ ರೂ. ಬೆಲೆಯ ಉಚಿತ ಉಡುಗೊರೆ ಹಾಗೂ 72.48 ಕೋಟಿ ರೂ. ಮೊತ್ತದ ಇತರೆ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
ಕ್ಷಿಪ್ರ ಪಡೆಗಳು, ಸ್ಥಿರ ಕಣ್ಗಾವಲು ತಂಡಗಳು, ಪೊಲೀಸ್, ಅಬಕಾರಿ, ಆದಾಯ ತೆರಿಗೆ, ವಾಣಿಜ್ಯ ತೆರಿಗೆ ಇಲಾಖೆ ತಂಡಗಳು ಕಾರ್ಯಾಚರಣೆ ನಡೆಸಿ ಒಟ್ಟು 2,325 ಎ್ಐಆರ್ ದಾಖಲಿಸಿವೆ.