ಎಂ.ಸಿ.ಹಳ್ಳಿ ಬ್ಲಾಕ್ ಕ್ಯಾಪ್ಸ್ ತಂಡ ಜಯಭೇರಿ

cricket
ಕುಡ್ಲೂರು ಗ್ರಾಮದಲ್ಲಿ ಆಯೋಜಿಸಿದ್ದ ಪ್ರೀಮಿಯರ್ ಲೀಗ್ ಸೀಸನ್-2 ಟೆನಿಸ್‌ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಚಾಪಿಯನ್ ಆದ ಎಂ.ಸಿ.ಹಳ್ಳಿ ಬ್ಲಾಕ್ ಕ್ಯಾಪ್ಸ್ ತಂಡ.
Published on

ತರೀಕೆರೆ: ತಾಲೂಕಿನ ಕುಡ್ಲೂರು ಗ್ರಾಮದಲ್ಲಿ ಆಯೋಜಿಸಿದ್ದ ಪ್ರೀಮಿಯರ್ ಲೀಗ್ ಸೀಸನ್-2 ಟೆನಿಸ್‌ಬಾಲ್ ಕ್ರಿಕೆಟ್ ಪಂದ್ಯಾವಳಿಯ ೈನಲ್‌ನಲ್ಲಿ ಎಂ.ಸಿ.ಹಳ್ಳಿ ಬ್ಲಾಕ್ ಕ್ಯಾಪ್ಸ್ ತಂಡ ಜಯಭೇರಿ ಬಾರಿಸಿದೆ.
ೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ನೇರಲಕೆರೆ ಮಲ್ಲೇಶ್ವರಂ ತಂಡ ನಿಗದಿತ 8 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 72 ರನ್‌ಗಳ ಸವಾಲಿನ ಮೊತ್ತ ಕಲೆ ಹಾಕಿತು. ಅತ್ಯುತ್ತಮ ಚೇಸಿಂಗ್ ನಡೆಸಿದ ಎಂ.ಸಿ.ಹಳ್ಳಿ ಬ್ಲಾಕ್ ಕ್ಯಾಪ್ಸ್ ತಂಡ 7.4 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 73 ರನ್‌ಗಳಿಸಿ ಗೆಲುವಿನ ನಗೆ ಬೀರಿದರು. ಈ ಮೂಲಕ ಆಕರ್ಷಕ ಟ್ರೋಫಿಯೊಂದಿಗೆ 30 ಸಾವಿರ ರೂ. ನಗದು ಬಹುಮಾನ ಪಡೆದರು.
ನೇರಲಕೆರೆಯ ಮಲ್ಲೇಶ್ವರಂ ತಂಡ ದ್ವಿತೀಯ ಬಹುಮಾನ 20 ಸಾವಿರ ರೂ. ನಗದು ಹಾಗೂ ಟ್ರೋಫಿ ಪಡೆದುಕೊಂಡಿತು. ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಎಂ.ಸಿ.ಹಳ್ಳಿ ಬ್ಲಾಕ್ ಕ್ಯಾಪ್ ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಅನುದೀಪ್, ಸರಣಿ ಶ್ರೇಷ್ಠ ಪ್ರಶಸ್ತಿಗೆ ನೇರಲಕೆರೆಯ ಮಲ್ಲೇಶ್ವರ ಕ್ರಿಕೆಟರ್ಸ್‌ ತಂಡದ ಆಲ್ರೌಂಡರ್ ಆಟಗಾರ ತಿಮ್ಮಾನಾಯ್ಕ ಭಾಜನರಾದರೆ, ಉತ್ತಮ ಬ್ಯಾಟ್ಸ್‌ಮನ್ ಪ್ರಶಸ್ತಿ ಕುಡ್ಲೂರು ಡೈನಾಮಿಕ್ ಬುಲ್ಸ್‌ನ ಓಪನಿಂಗ್ ಬ್ಯಾಟ್ಸ್‌ಮನ್ ಆಕಾಶ್‌ಗೆ, ಉತ್ತಮ ಬೌಲರ್ ಪ್ರಶಸ್ತಿ ನೇರಲಕೆರೆ ಮಲ್ಲೇಶ್ವರ ಕ್ರಿಕೆಟರ್ಸ್‌ ತಂಡದ ಆಲ್ರೌಂಡರ್ ಆಟಗಾರ ತಿಮ್ಮಾನಾಯ್ಕಗೆ ಲಭಿಸಿತು.
ಸೋಮವಾರ ಸಂಜೆ ತೆರೆಬಿದ್ದ ಕುಡ್ಲೂರು ಪ್ರೀಮಿಯರ್ ಲೀಗ್ ಸೀಸನ್-2 ಕ್ರಿಕೆಟ್ ಪಂದ್ಯಾವಳಿಯಲ್ಲಿ ತಾಲೂಕಿನ ಕುಡ್ಲೂರು, ನೇರಲಕೆರೆ, ಅಮೃತಾಪುರ, ಕುಂಟಿನಮಡು ಇನ್ನಿತರ ಗ್ರಾಮಗಳ 8 ತಂಡಗಳು ಭಾಗವಹಿಸಿ ಪ್ರಶಸ್ತಿಯ ಸುತ್ತಿಗೇರಲು ತೀವ್ರ ಸೆಣೆಸಾಟ ನಡೆಸಿದವು. ಅಂತಿಮವಾಗಿ ತಲಾ 8 ಓವರ್ ನಡೆದ ಪಂದ್ಯಾವಳಿಯಲ್ಲಿ ಎಂ.ಸಿ.ಹಳ್ಳಿ ಬ್ಲಾಕ್ ಕ್ಯಾಪ್ಸ್ ತಂಡ ಒಂದೊಂದೇ ಮೆಟ್ಟಿಲೇರಿ ಚಾಂಪಿಯನ್ ಪಟ್ಟ ಅಲಂಕರಿಸಿತು.
ಶ್ರೀ ಮಹೇಶ್ವರ ಕ್ರೀಡಾ ಸಂಘದ ಸಮಿತಿ ಅಧ್ಯಕ್ಷ ಎನ್.ಜೆ.ಶಿವಕುಮಾರ್, ಪ್ರಮುಖರಾದ ಕೆ.ಬಿ.ಮಲ್ಲಪ್ಪ, ಮಹೇಂದ್ರ, ಪ್ರಶಾಂತ್, ಭರತ್, ಹೇಮಚಂದ್ರ, ನೀಲಕಂಠಪ್ಪ, ಗಿರೀಶ್, ಮನುಕುಮಾರ್, ಕೆ.ಜಿ.ನಾಗರಾಜಪ್ಪ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net