ಹಿಂದಿ ಭಾಷೆಯಲ್ಲೇ ಮೆಡಿಕಲ್​ ಓದಿ ಅಂದ್ರೆ ಪರಿಣಾಮ ಸರಿ ಇರಲ್ಲ... ಉತ್ತರ ಪ್ರದೇಶ ಸರ್ಕಾರದ ವಿರುದ್ಧ ಸಿಡಿದೆದ್ದ ಕುಣಿಗಲ್​ ಶಾಸಕ!

kunigal mla ranganath
Published on

ತುಮಕೂರು: ಕನ್ನಡ ರಾಜ್ಯೋತ್ಸವ ಆಚರಣೆ ವೇಳೆ ಉತ್ತರ ಪ್ರದೇಶದ ಸರ್ಕಾರಕ್ಕೆ ಕುಣಿಗಲ್​ ಕ್ಷೇತ್ರದ ಶಾಸಕ ಡಾ. ಎಚ್​.ಡಿ.ರಂಗನಾಥ್​ ಖಡಕ್​ ಎಚ್ಚರಿಕೆ ಕೊಟ್ಟಿದ್ದಾರೆ.

ಮೆಡಿಕಲ್ ಶಿಕ್ಷಣವನ್ನ ಹಿಂದಿ ಭಾಷೆಯಲ್ಲಿ ತರಲು ಉತ್ತರ ಪ್ರದೇಶ ರಾಜ್ಯ ಮುಂದಾಗಿದೆ. ನಮ್ಮ‌ ಕುಣಿಗಲ್ ತಾಲೂಕಿನ ಮಕ್ಕಳು ಹಾಗೂ ಕರ್ನಾಟಕ ರಾಜ್ಯದ ಮಕ್ಕಳು ಮಾತೃಭಾಷೆ ಕನ್ನಡವನ್ನ ಕಲಿತಿದ್ದಾರೆ. ಇಂಗ್ಲಿಷ್ ಭಾಷೆ ಕಲಿಯೋಕೆ ಪ್ರಯತ್ನ ಪಡುತ್ತಾರೆ. ಕೆಲ ಸಂದರ್ಭದಲ್ಲಿ ಹಿಂದಿ ಭಾಷೆಯನ್ನ ಕಲಿತಿರಲ್ಲ. ಆ ಸಂದರ್ಭದಲ್ಲಿ ಆ ಮಕ್ಕಳಿಗೆ ವೈದ್ಯಕೀಯ ಶೀಟ್ ಸಿಕ್ಕಾಗ, ನೀವು ಹಿಂದಿಯನ್ನೇ ಏರಿಕೆ ಮಾಡಿ ಹಿಂದಿ ಭಾಷೆಯಲ್ಲೇ ಮೆಡಿಕಲ್​ ಓದಿ ಅಂದ್ರೆ ಇದು ಎಷ್ಟು ಮಟ್ಟಿಗೆ ಸರಿ? ನಾನೊಬ್ಬ ಶಾಸಕನಾಗಿ, ವಿದ್ಯಾವಂತನಾಗಿ, ಡಾಕ್ಟರ್ ಆಗಿ ಉತ್ತರ ಪ್ರದೇಶ ಸರ್ಕಾರಕ್ಕೆ ಎಚ್ಚರಿಕೆ ಕೊಡ್ತಿದ್ದೀನಿ. ಕರ್ನಾಟಕ ರಾಜ್ಯದಲ್ಲೇ ನಾವು ಕನ್ನಡ ಭಾಷೆಯಲ್ಲಿ ಮೆಡಿಕಲ್ ಕಾಲೇಜು ಮಾಡಿದ್ರೆ ನಿಮ್ಮ ರಾಜ್ಯದ ಮಕ್ಕಳಿಗೂ ಕಷ್ಟ ಆಗುತ್ತೆ ನೆನಪಿರಲಿ ಎಂದು ಗುಡುಗಿದರು.

ನಮ್ಮ ಯುನಿವರ್ಸೆಲ್ ಲಾಗ್ವೆಜ್ ಏನಿದೆ? ಅದರ ಪದ್ದತಿ ಏನಿದೆ? ಆ ಭಾಷೆಯಲ್ಲಿ ಓದೋದಿಕ್ಕೆ ಸಾಧ್ಯ ಆಗುತ್ತೆ. ಹಿಂದಿ ಭಾಷಾವಾರು ಮಾಡ್ತೇವೆ ಅಂತ ಹೊರಟಿರೋದು ಎಷ್ಟು ಸರಿ? ನಮ್ಮ ರಾಜ್ಯ ಸರ್ಕಾರಕ ಹಿಂದಿ ಏರಿಕೆಗೆ ಅವಕಾಶ ಕೊಡಬಾರದು. ಕೇಂದ್ರ ಸರ್ಕಾರದ ಉದ್ಯೋಗಕ್ಕೆ ನಮ್ಮ ಭಾಷೆಯಲ್ಲಿಯೇ ಪ್ರಶ್ನೆ ಪತ್ರಿಕೆಗಳನ್ನ ಕೊಡ್ಬೇಕು. ನಮ್ಮ‌ ಕನ್ನಡಿಗರಿಗಾಗಿಯೇ ಉದ್ಯಮದಲ್ಲಿ ಮತ್ತು ಉದ್ಯೋಗದಲ್ಲಿ ಮೀಸಲಾತಿ ಕೊಡ್ಬೇಕು ಎಂದು ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net