

ಸೊರಬ: ಪ್ರತಿಯೊಂದು ಮಗುವಿನಲ್ಲೂ ವಿಶೇಷ ಶಕ್ತಿ ಇರುತ್ತದೆ. ಅದನ್ನು ಹೊರ ತೆಗೆಯುವ ಅವಕಾಶ ಅಧ್ಯಾಪಕರು ಹಾಗೂ ಪಾಲಕರಿಗೆ ಇರುತ್ತದೆ ಎಂದು ಎವರಾನ್ ಇಂಟರ್‌ನ್ಯಾಷನಲ್ ರೆಸಿಡೆನ್ಷಿಯಲ್ ಸ್ಕೂಲ್ ಅಧ್ಯಕ್ಷ ಕಾರ್ತಿಕ್ ಸಾಹುಕಾರ್ ಹೇಳಿದರು.
ಭಾನುವಾರ ಎವರಾನ್ ಇಂಟರ್‌ನ್ಯಾಷನಲ್ ರೆಸಿಡೆನ್ಷಿಯಲ್ ಸ್ಕೂಲ್ ಆವರಣದಲ್ಲಿ ಆಯೋಜಿಸಿದ್ದ ಸ್ಫೂರ್ತಿ ಶಿಬಿರದ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಯಾವ ಮಗುವೂ ಜನ್ಮತಃ ದಡ್ಡನಾಗಿರುವುದಿಲ್ಲ. ಅವರು ಬೆಳೆಯುವ ವಾತಾವರಣ, ಸಹವಾಸ, ಅವರಿಗೆ ಸಿಗುವ ಅವಕಾಶಗಳ ಮೇಲೆ ಅವರ ಬುದ್ಧಿವಂತಿಕೆ ನಿರ್ಧಾರವಾಗುತ್ತದೆ. ಮಕ್ಕಳಿಗೆ ಒಳ್ಳೆಯ ಗುಣವನ್ನು ನಾವು ಬೆಳೆಸಿದರೆ ಖಂಡಿತ ಅವರೂ ಒಳ್ಳೆಯ ನಾಗರಿಕರಾಗಿ ಗುರುತಿಸಿಕೊಳ್ಳುತ್ತಾರೆ. ಮಕ್ಕಳಲ್ಲಿರುವ ತಪ್ಪುಗಳನ್ನು ಕಂಡುಹಿಡಿಯುವ ಮೊದಲು ಒಳ್ಳೆಯ ಗುಣಗಳನ್ನು ಗುರುತಿಸಿ ಅವರಿಗೆ ಪ್ರೋತ್ಸಾಹ ನೀಡಿದರೆ ಹೆಚ್ಚಿನ ಕಲಿಕೆ ಮಾಡಲು ಆಸಕ್ತಿ ತೋರುತ್ತಾರೆ ಎಂದರು.
ಮಕ್ಕಳ ಒಳ್ಳೆಯ ಗುಣಗಳನ್ನು ಶಿಬಿರದಲ್ಲಿ ಕಂಡುಹಿಡಿದು, ಅವರು ಯಾವುದರಲ್ಲಿ ಆಸಕ್ತಿ ಹೊಂದಿದ್ದಾರೋ ಅದರಂತೆ ಅವರಿಗೆ ಪ್ರೋತ್ಸಾಹ ನೀಡುವ ಕೆಲಸ ಶಿಬಿರದಲ್ಲಿ ನಡೆದಿದೆ. ಭಾಗವಹಿಸಿದ್ದ ಎಲ್ಲ ಮಕ್ಕಳು ಅತ್ಯುತ್ಸಾಹದಿಂದ ತಮ್ಮ ಪ್ರತಿಭೆ ಅನಾವರಣಗೊಳಿಸಿದ್ದಾರೆ ಎಂದರು.
ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಕಾರ್ಯಕ್ರಮದ ವ್ಯವಸ್ಥಾಪಕಿ ಚರಿತಾ ಕಾರ್ತಿಕ್, ಎಲ್ಲಪ್ಪ ಕೆ., ಬಸವರಾಜ್, ಶಿಾನ್, ಕಾಂತಪ್ಪ, ದಿವ್ಯಾ, ಶ್ರುತಿ, ಕಿರಣ್, ಸ್ಪಂದನಾ, ಸೌಮ್ಯಾ, ಅಂಜಲಿ, ರೇವತಿ, ಛಾಯಾ, ಭೂಮಿಕಾ, ಜ್ಯೋತಿ, ರೇಖಾ, ಎಲ್ಲಮ್ಮ, ಮಧುರಾ, ವೀಣಾ, ನಾಹಿದಾ, ವಿದ್ಯಾ ಇತರರಿದ್ದರು.