ಭೂಮಿಯ ಫಲವತ್ತತೆ ಕಾಪಾಡಲಿ

2
Published on

ಅರಟಾಳ: ರಾಸಾಯನಿಕ ಗೊಬ್ಬರಗಳ ಅವೈಜ್ಞಾನಿಕ ಬಳಕೆಯಿಂದ ಭೂಮಿ ಫಲವತ್ತತೆ ಹಾಳಾಗಿದ್ದು, ಅದನ್ನು ಪುನಶ್ಚೇತನಗೊಳಿಸುವುದೇ ರಿವಾರ್ಡ್ ಯೋಜನೆಯ ಮುಖ್ಯ ಉದ್ದೇಶ ಎಂದು ಅಥಣಿ ಆರ್‌ಡಿಎಸ್ ಸಂಸ್ಥೆಯ ಮುಖ್ಯಾಧಿಕಾರಿ ರಾಮಚಂದ್ರ ನಾಯಿಕ ಹೇಳಿದರು.

ಗ್ರಾಮದ ವಿಠ್ಠಲ-ರುಕ್ಮಿಣಿ ದೇವಸ್ಥಾನದ ಸಭಾಭವನದಲ್ಲಿ ವಿಶ್ವಬ್ಯಾಂಕ್ ನೆರವಿನ ರಿವಾರ್ಡ್ ಜಲಾನಯನ ಅಭಿವೃದ್ಧಿ ಯೋಜನೆ ರೈತರಿಗೆ ಮಂಗಳವಾರ ಹಮ್ಮಿಕೊಂಡಿದ್ದ 2ನೇ ಹಂತದ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿ, ಈ ಕುರಿತು ರೈತರು ಮಾಹಿತಿ ಪಡೆದು ಭೂಮಿಯ ಫಲವತ್ತತೆ ಕಾಪಾಡಿಕೊಳ್ಳಬೇಕು ಎಂದರು.

ಮಲಗೌಡ ಕಳಸಣ್ಣವರ, ಮಲ್ಲಿಕಾರ್ಜುನ ತೆಲಸಂಗ, ಮಾಳಪ್ಪ ಕಾಂಬಳೆ, ಕರೆಪ್ಪ ಹಿರೇಕುರಬರ, ಅಣ್ಣಪ್ಪ ಪೂಜಾರಿ, ಬಾಲಪ್ಪ ಜಂಬಗಿ, ಸೋಮಣ್ಣ ಹಟ್ಟಿ, ಸುರೇಶ ಪೂಜಾರಿ, ನಿಂಗಪ್ಪ ಕಾಂಬಳೆ, ಮಾಳಪ್ಪ ಅರ್ಜುಣಗಿ, ವಾಸನಗೌಡ ಜಂಬಗಿ, ಸೋಮು ಹಟ್ಟಿ, ಶ್ರೀಶೈಲ ಮಾದರ, ನಾಗಪ್ಪ ಬಿಜ್ಜರಗಿ, ಮಾಹಾದೇವ ಪೂಜಾರಿ, ಅಣ್ಣಪ್ಪ ಕಾಂಬಳೆ, ಕರೆಪ್ಪ ಹಟ್ಟಿ ಇತರರು ಇದ್ದರು.101

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net