ಮೌನೇಶ್ವರ ಸ್ವಾಮೀಜಿ ಮನುಕುಲದ ಉದ್ಧಾರಕ್ಕೆ ಶ್ರಮಿಸಿದವರು

4-RNR-04
Published on

ರಾಣೆಬೆನ್ನೂರ: ಕೇವಲ ವಿಶ್ವಕರ್ಮ ಸಮಾಜಕ್ಕೆ ಸೀಮಿತರಾಗದ ಮೌನೇಶ್ವರ ಸ್ವಾಮೀಜಿ ಇಡೀ ಮನುಕುಲದ ಉದ್ದಾರಕ್ಕೆ ಶ್ರಮಿಸಿದವರು ಎಂದು ವಡ್ಡನಹಾಳನ ವಿಶ್ವಕರ್ಮ ಸಂಸ್ಥಾನ ಸಾವಿತ್ರಿ ಪೀಠದ ಶಂಕರಾತ್ಮಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.

ನಗರದ ಮೌನೇಶ್ವರ ದೇವಸ್ಥಾನದ ಆವರಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಜಗದ್ಗುರು ಮೌನೇಶ್ವರರ ಜಯಂತಿ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಮೌನೇಶ್ವರರು ಪವಾಡ ಪುರುಷರು ಎಂಬುದಕ್ಕೆ ವರವಿ ಹಾಗೂ ಲಿಂಗನಬಂಡಿಯಲ್ಲಿ ಬಹಳಷ್ಟು ಪುರಾವೆಗಳಿವೆ. ಅವರು ನೀಡಿದ ಪ್ರಸಾದದಿಂದಲೇ ಹಾಲುಮತದವರು ಆಥಿರ್ಕವಾಗಿ ಸುಭಿಕ್ಷಿತರಾಗಿದ್ದಾರೆ. ಭಾರತ ದೇಶದಲ್ಲಿ ಜಕಣಾಚಾರ್ಯರಿಂದ ನಿಮಾರ್ಣವಾದ ಶಿಲ್ಪಕಲೆಗಳುಳ್ಳ ದೇವಾಲಯಗಳು ಇಂದು ಹಿಂದೂ ಪರಂಪರೆಯನ್ನು ಜೀವಂತವಾಗಿರಿಸಿವೆ. ಈಗಲೂ ಅಯೋಧ್ಯೆಯಲ್ಲಿ ನಿಮಾರ್ಣವಾದ ಬಾಲರಾಮನ ನಿಮಾರ್ತೃ ವಿಶ್ವಕರ್ಮರೇ ಎಂಬುದನ್ನು ಮರೆಯುವಂತಿಲ್ಲ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ, ದ್ವಾರಿಕೆಯಿಂದ ಪುರಿ ತನಕ ನಿಮಾರ್ಣವಾದ ದೇವಾಲಯಗಳು ವಿಶ್ವಕರ್ಮರು ಶಿಲ್ಪಕಲೆಗೆ ನೀಡಿದ ಕೊಡುಗೆಯನ್ನು ಮುಂದಿನ ಮನುಕುಲವೂ ಈ ಸಮಾಜಕ್ಕೆ ಚಿರಋಣಿಯಾಗಿಸಿದೆ. ಇಂತಹ ಪರಂಪರೆ ಇರುವ ನೀವುಗಳು ನಿಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಸಂಸ್ಕಾರವಂತರನ್ನಾಗಿ ಮಾಡಿ ಎಂದರು.

ಜೆಡಿಎಸ್​ ಜಿಲ್ಲಾಧ್ಯಕ್ಷ ಮಂಜುನಾಥ ಗೌಡಶಿವಣ್ಣನವರ ಮಾತನಾಡಿ, ನಮ್ಮ ದೇಶದ ಸಂಸತಿ, ಕಲೆ, ಸಂಪ್ರದಾಯವನ್ನು ಇಡೀ ವಿಶ್ವಕ್ಕೆ ಪರಿಚಯಿಸಿದವರು ವಿಶ್ವಕರ್ಮರು. ಮಕ್ಕಳಿಗೆ ಉಪನಯನ ಕಾರ್ಯ ಮಾಡಿದ್ದು ಸಂಸ್ಕಾರವಂತರಾಗಿಸಲು ಪ್ರೇರಣೆಯಾಗಿದೆ. ಮನುಷ್ಯನಿಗೆ ಆಸೆ ಎಂಬುದಕ್ಕೆ ಕೊನೆ ಇಲ್ಲ. ನಿಸ್ವಾರ್ಥ ಮನೋಭಾವನೆಯಿಂದ ಧರ್ಮವನ್ನು ಉಳಿಸುವ ಕಾಯಕವಾಗಲಿ ಅದು ಸಂಘಟನೆಯಿಂದ ಮಾತ್ರ ಸಾಧ್ಯ ಎಂದರು.

ಮೌನೇಶ್ವರ ಉತ್ಸವ ಸಮಿತಿ ಅಧ್ಯಕ್ಷ ಪರಮೇಶ್ವರಾಚಾರ್ಯ ಬಡಿಗೇರ ಅಧ್ಯಕ್ಷತೆ ವಹಿಸಿದ್ದರು.

ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸತ ವಿರುಪಾಕ್ಷ ಹಾವನೂರ, ಮೌನೇಶ್ವರ ಕಮಿಟಿ ಅಧ್ಯಕ್ಷ ಅಧ್ಯಕ್ಷ ಓಂಕಾರೆಪ್ಪ ಅರ್ಕಾಚಾರ, ಗೌರವಾಧ್ಯಕ್ಷ ಬಸವರಾಜ ಬಡಿಗೇರ, ವೀರಣ್ಣ ಅರ್ಕಾಚಾರ, ಚಿದಾನಂದ ಬಡಿಗೇರ, ರಾಘವೇಂದ್ರ ಕಮ್ಮಾರ, ದೇವೆಂದ್ರಪ್ಪ ಅರ್ಕಾಚಾರ, ಶಿಕ್ಷಕ ಕರಿಯಪ್ಪ ಕಾಟೇನಹಳ್ಳಿ, ಸಹನಾ ಬಡಿಗೇರ, ಶೋಭಾ ಪ್ರಕಾಶಾಚಾರ, ಹೇಮಾಚಾರ ಬಡಿಗೇರ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net