ಮಟ್ಕಾ ದಂಧೆ ಮಟ್ಟ ಹಾಕಲು ಕರವೇ ಒತ್ತಾಯ

15-RNR-04
filter: 0; fileterIntensity: 0.0; filterMask: 0; module: h; hw-remosaic: 0; touch: (-1.0, -1.0); modeInfo: ; sceneMode: Hdr; cct_value: 0; AI_Scene: (-1, -1); aec_lux: 171.2864; hist255: 0.0; hist252~255: 0.0; hist0~15: 0.0;
Published on

ರಾಣೆಬೆನ್ನೂರ: ತಾಲೂಕಿನ ಗ್ರಾಮೀಣ ಭಾಗದಲ್ಲಿ ನಡೆಯುತ್ತಿರುವ ಮಟ್ಕಾ ದಂಧೆಯನ್ನು ಸಂರ್ಪೂಣ ಮಟ್ಟ ಹಾಕಬೇಕು. ರಾಜ್ಯ ಸರ್ಕಾರ ಪೊಲೀಸ್​ ಇಲಾಖೆಗೆ ಸೂಚಿಸಿ ಮಟ್ಕಾ ಬರೆಯುವವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಕೋಡಿಯಾಲ ಹೊಸಪೇಟೆ ಗ್ರಾಪಂ ಕಾರ್ಯದಶಿರ್ ರಮೇಶ ನಲ್ಲೂರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಗ್ರಾಮೀಣ ಭಾಗದಲ್ಲಿ ನಡೆಯುತ್ತಿರುವ ಮಟ್ಕಾದಂಧೆ ಕೇವಲ ಬುಕ್ಕಿಗಳಿಗೆ ಮಾತ್ರ ಸೀಮಿತವಾಗಿಲ್ಲ. ಕೆಲ ಸ್ಥಳಿಯರು ತಾವೇ ಮುಂದು ನಿಂತುಕೊಂಡು ಮಟ್ಕಾ ಬರೆಯುತ್ತಿರುವುದು ಕಂಡು ಬಂದಿದೆ. ಇದು ಪೊಲೀಸರ ಗಮನಕ್ಕೆ ಇದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ.

ಆಪ್​ ಮೂಲಕ ಬರೆದುಕೊಳ್ಳುತ್ತಿರುವ ಕಾರಣ ಇದೀಗ ಮಟ್ಕಾದಂಧೆ ಕೂಡ ಹೈಟೆಕ್​ ಸ್ಪರ್ಷ ಪಡೆದುಕೊಂಡಿದೆ. ಹೀಗಾಗಿ ಗ್ರಾಮೀಣ ಭಾಗದಲ್ಲಿ ಕಾಮಿರ್ಕರು, ಯುವಕರು, ಕಾಲೇಜು ವಿದ್ಯಾಥಿರ್ಗಳು ಸಹ ಈ ದಂಧೆಗೆ ಬಲಿಯಾಗುತ್ತಿದ್ದಾರೆ. ಆದ್ದರಿಂದ ಪೊಲೀಸ್​ ಇಲಾಖೆ ಮಟ್ಕಾ ದಂಧೆಯನ್ನು ಸಂರ್ಪೂಣ ಕಿತ್ತುಹಾಕಬೇಕು. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಸಂಟನೆ ತಾಲೂಕು ಅಧ್ಯಕ್ಷ ಕೋಟ್ರೇಶ ಗುತ್ತೂರ, ಗ್ರಾಪಂ ಸದಸ್ಯರಾದ ಪ್ರಭು ಪೂಜಾರ, ಚೇತನ ಪೂಜಾರ, ಹಾಲೇಶಪ್ಪ ಸಾಲಕಟ್ಟಿ, ಪ್ರಮುಖರಾದ ರಂಜಾನ ಸಾಬ, ಹನುಮಂತಪ್ಪ ಮೇಡ್ಲೇರಿ, ಹಾಲೇಶ ಕರಡೆಪ್ಪನವರ, ಜಗದೀಶ ಪೂಜಾರ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net