

ಬೆಂಗಳೂರು: ಸರ್ಕಾರಿ ಶಾಲಾ ಮಕ್ಕಳಿಗೆ ಗಣಿತ ವಿಷಯದಲ್ಲಿ ಆಸಕ್ತಿ ಹಾಗೂ ಮೂಲ ಕ್ರಿಯೆಗಳ ಕೌಶಲವನ್ನು ಹೆಚ್ಚಿಲಸು ರಾಜ್ಯ ಸರ್ಕಾರವು 2024-25ನೇ ಸಾಲಿನ ಬಜೆಟ್‌ನಲ್ಲಿ ೋಷಿಸಿದ್ದ ‘ಗಣಿತ ಗಣಕ’ ಕಾರ್ಯಕ್ರಮ ಅನುಷ್ಠಾನ ಮಾಡಲು ಶಾಲಾ ಶಿಕ್ಷಣ ಇಲಾಖೆಯು ಆದೇಶ ಹೊರಡಿಸಿದೆ. ಇದು ಶಿಕ್ಷಕರಿಗೆ ಹೊಸ ಜವಾಬ್ದಾರಿ ನೀಡಲಾಗಿದೆ.
ರಾಜ್ಯದ 33,548 ಪ್ರಾಥಮಿಕ ಹಾಗೂ ಹಿರಿಯ ಪ್ರಾಥಮಿಕಸರ್ಕಾರಿ ಶಾಲೆಗಳಲ್ಲಿ 3ರಿಂದ 5ನೇ ತರಗತಿ ವ್ಯಾಸಂಗ ಮಾಡುತ್ತಿರುವ ಸುಮಾರು 13,51,642 ವಿದ್ಯಾರ್ಥಿಗಳಿಗೆ ಗಣಿತ ಕಲಿಸುವ ಕಾರ್ಯಕ್ರಮವಾಗಿದೆ. ಶಾಲಾ ಅವಧಿಯ ನಂತರ ಶಿಕ್ಷಕರು ೆನ್ ಕರೆಗಳ ಮೂಲಕ (ರಿಮೋಟ್ ಟ್ಯೂಟರಿಂಗ್) ಗಣಿತ ವೃದ್ಧಿಸುವ ಕೆಲಸ ಮಾಡಬೇಕಿದೆ.
ಸಮಗ್ರ ಶಿಕ್ಷಣ ಕರ್ನಾಟಕ, ಡಿಎಸ್‌ಇಆರ್‌ಟಿ, ಜೆ-ಪಾಲ್, ಅಲೋಕಿಟ್ ಮತ್ತು ಯೂತ್ ಇಂಪ್ಯಾಕ್ಟ್ ಸಂಸ್ಥೆಗಳ ಸಹಯೋಗದೊಂದಿಗೆ ಕಾರ್ಯಕ್ರಮ ಅನುಷ್ಠಾನ ಮಾಡಲಾಗುತ್ತಿದೆ. ಈ ಯೋಜನೆ ಅನುಷ್ಠಾನಕ್ಕಾಗಿ 75ಸಾವಿರ ಶಿಕ್ಷಕರಿಗೆ ೆನ್ ಕರೆ ಮಾಡಲು 800 ರೂ. ಸಹಾಯ ಧನವನ್ನು 6 ಕೋಟಿ ರೂ. ವೆಚ್ಚವನ್ನು ವಿನಿಯೋಗಿಸಲಾಗುತ್ತಿದೆ.
ಈ ಮೊತ್ತವನ್ನು ಸಮಗ್ರ ಶಿಕ್ಷಣ ಕರ್ನಾಟಕದ 2025-26ನೇ ಸಾಲಿನ ವಾರ್ಷಿಕ ಕ್ರಿಯಾ ಯೋಜನೆ ಮತ್ತು ಪಿಎಬಿ ಅನುಮೋದಿತ ಎಲಿಮೆಂಟರಿ ಟಿಎಲ್‌ಎಂ ಉಪಕ್ರಮದ ಅಡಿಯಲ್ಲಿ ಒದಗಿಸಲು ಸೂಚಿಸಲಾಗಿದೆ.
ಶಿಕ್ಷಕರ ಜವಾಬ್ದಾರಿಗಳೇನು?
- ಶಿಕ್ಷಕರು ಪಾಲಕರಿಗೆ ಕಾರ್ಯಕ್ರಮದ ವಿನ್ಯಾಸ ಹಾಗೂ ಪ್ರಾಮುಖ್ಯತೆಯ ಬಗ್ಗೆ ಅರಿವು ಮೂಡಿಸುವುದು. ಅವರ ಮಗುವನ್ನು ಏಕೆ ಈ ಕಾರ್ಯಕ್ರಮಕ್ಕೆ ಒಳಪಡಿಸಿದೆ ಹಾಗೂ ಹೇಗೆ ಅವರ ಸಹಾಯದೊಂದಿಗೆ ಮಗುವಿನ ಕಲಿಕಾ ಮಟ್ಟವನ್ನು ಸುಧಾರಿಸಬಹುದೆಂದು ಪಾಲಕರ ಸಭೆಯಲ್ಲಿ ತಿಳಿಸಬೇಕು.
- ವಿದ್ಯಾರ್ಥಿಗಳಿಗೆ ೆನ್ ಕರೆ ಮಾಡಿದಾಗ ಪಾಲಕರನ್ನು ತಮ್ಮ ಮಕ್ಕಳ ಕಲಿಕೆಯಲ್ಲಿ ಭಾಗವಹಿಸಲು ಪ್ರೋತ್ಸಾಹಿಸುವುದು.
- ವಿದ್ಯಾರ್ಥಿಗಳ ಕಲಿಕಾ ಮಟ್ಟವನ್ನು ಗುರುತಿಸಲು ತರಬೇತಿಯಲ್ಲಿ ನೀಡಿದ ಮಾಹಿತಿಯಂತೆ ಬೇಸ್‌ಲೈನ್ ಕರೆ ಮೌಲ್ಯಾಂಕನ ನಡೆಸಿ ಅದರ ಆಧಾರದಲ್ಲಿ ಗಣಿತದ ಮೂಲ ಪರಿಕಲ್ಪನೆಯನ್ನು ಕಲಿಸುವ ಕ್ರಮ ಕೈಗೊಳ್ಳಬೇಕು.