ಮಾಸ್ತಮರ್ಡಿ ಗ್ರಾಮಕ್ಕೆ ಹೆಬ್ಬಾಳ್ಕರ್ ಭೇಟಿ

8Jaggu9
ಮಾಸ್ತಮರ್ಡಿ ಗ್ರಾಮಕ್ಕೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭೇಟಿ ನೀಡಿ ಅಭಿವೃದ್ಧಿ ಬಗ್ಗೆ ಗ್ರಾಮಸ್ಥರೊಂದಿಗೆ ಚರ್ಚಿಸಿದರು. ಯಲ್ಲಪ್ಪ ತೊರ್ಲೆ, ಬಸಲಿಂಗ ಮರಕಟ್ಟಿ ಇದ್ದರು
Published on

ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಗ್ರಾಮೀಣ ಕ್ಷೇತ್ರದ ಮಾಸ್ತಮರ್ಡಿ ಗ್ರಾಮಕ್ಕೆ ಶುಕ್ರವಾರ ಭೇಟಿ ನೀಡಿ ಅಭಿವೃದ್ಧಿ ಕುರಿತಂತೆ ಚರ್ಚಿಸಿದರು. ಗ್ರಾಮದ ಬಸವೇಶ್ವರ ದೇವಸ್ಥಾನ ಹಾಗೂ ನೂತನವಾಗಿ ನಿರ್ಮಾಣಗೊಂಡ ಕೃಷ್ಣ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದರು. ಸಮುದಾಯ ಭವನ ನಿರ್ಮಾಣದ ಸಲುವಾಗಿ ಗ್ರಾಮಸ್ಥರ ಜತೆ ಚರ್ಚಿಸಿದರು. ಯಲ್ಲಪ್ಪ ತೊರ್ಲೆ, ಬಸಲಿಂಗ ಮರಕಟ್ಟಿ, ಚಂದ್ರು ಜಾಂಗಳಿ, ವಿಕ್ರಂ ಜಾಂಗಳಿ, ಪ್ರಕಾಶ ಪಾಟೀಲ, ಸುರೇಶಗೌಡ ಪಾಟೀಲ, ಮಂಜುನಾಥ ಕೋಲಕಾರ, ರಾಘವೇಂದ್ರ ಮಾವಿನಕಟ್ಟಿ, ಶ್ರೀಶೈಲಗೌಡ ಪಾಟೀಲ, ನಾಗನಗೌಡ ಪಾಟೀಲ, ಬಾಳು ಕುರಂಗಿ, ವಿಠ್ಠಲ ತೋರ್ಲೆ, ಬಸವರಾಜ ತೋರ್ಲೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net