ಶಾಪಿಂಗ್ ಮಾಲ್‌ನಲ್ಲಿ ಭಾರಿ ಬೆಂಕಿ ಅವಘಡ: 50 ಮಂದಿ ಸಜೀವ ದಹನ, ಹಲವರಿಗೆ ಗಾಯ | Shopping Mall

Shopping Mall
Published on: 

Shopping Mall: ಪೂರ್ವ ಇರಾಕ್‌ನ ಅಲ್-ಕುಟ್ ನಗರದ ಹೈಪರ್‌ಮಾರ್ಕೆಟ್‌ನಲ್ಲಿ ಸಂಭವಿಸಿದ ಭಾರಿ ಬೆಂಕಿ ಅವಘಡದಲ್ಲಿ ಕನಿಷ್ಠ 50 ಜನರು ಸಾವನ್ನಪ್ಪಿದ್ದಾರೆ ಮತ್ತು ಹಲವಾರು ಜನರು ಗಾಯಗೊಂಡಿದ್ದಾರೆ ಎಂದು ಐಎನ್‌ಎ (ಜು.17) ಗುರುವಾರ ವರದಿ ಮಾಡಿದೆ.

ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ , ಅಲ್-ಕುಟ್‌ನಲ್ಲಿರುವ ಐದು ಅಂತಸ್ತಿನ ಕಟ್ಟಡದಲ್ಲಿ ರಾತ್ರಿಯಿಡೀ ಬೆಂಕಿ ಕಾಣಿಸಿಕೊಂಡಿದ್ದು, ಅಗ್ನಿಶಾಮಕ ದಳದವರು ಬೆಂಕಿಯನ್ನು ಆರಿಸಲು ಪ್ರಯತ್ನಿಸುತ್ತಿರುವುದನ್ನು ತೋರಿಸಿದೆ.

ಬೆಂಕಿಯ ಕಾರಣ ತಕ್ಷಣವೇ ತಿಳಿದುಬಂದಿಲ್ಲ, ಆದರೆ ತನಿಖೆಯ ಆರಂಭಿಕ ಫಲಿತಾಂಶಗಳನ್ನು 48 ಗಂಟೆಗಳ ಒಳಗೆ ಪ್ರಕಟಿಸಲಾಗುವುದು ಎಂದು ವಾಸಿಟ್‌ ಪ್ರಾಂತ್ಯದ ಗವರ್ನರ್ ಅಧಿಕೃತ  ಸುದ್ದಿ ಸಂಸ್ಥೆ  ಐಎನ್‌ಎಗೆ ತಿಳಿಸಿದ್ದಾರೆ.

"ನಾವು ಕಟ್ಟಡ ಮತ್ತು ಮಾಲ್‌ನ ಮಾಲೀಕರ ವಿರುದ್ಧ ಮೊಕದ್ದಮೆ ಹೂಡಿದ್ದೇವೆ" ಎಂದು ರಾಜ್ಯಪಾಲರು ಹೇಳಿದ್ದಾರೆ. (ಏಜೆನ್ಸೀಸ್​)