ರಾಸಾಯನಿಕ ಸ್ಥಾವರದಲ್ಲಿ ಭಾರೀ ಸ್ಫೋಟ: 5 ಜನ ಸಾವು, 6 ಮಂದಿ ನಾಪತ್ತೆ! | Massive Explosion

dk - 2025-05-27T194928.815
Published on

Massive Explosion: ಚೀನಾದ ಅತಿದೊಡ್ಡ ರಾಸಾಯನಿಕ ಸ್ಥಾವರದಲ್ಲಿ ಮಂಗಳವಾರ ಭಾರೀ ಸ್ಫೋಟಗೊಂಡಿದ್ದು, ಐವರು ಮೃತ ಪಟ್ಟಿದ್ದಾರೆ. ಅಲ್ಲದೆ, 6 ಜನರು ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.

ವಿಶ್ವದ ಅತಿದೊಡ್ಡ ಕೀಟನಾಶಕ ಕ್ಲೋರ್‌ಪಿರಿಫೋಸ್ ಉತ್ಪಾದಕ ಶಾಂಡಂಗ್ ಯೂಡಾವೊ ಕೆಮಿಕಲ್‌ನಲ್ಲಿ ಈ ಸ್ಫೋಟ ಸಂಭವಿಸಿದೆ ಎಂದು ಸರ್ಕಾರಿ ಸ್ವಾಮ್ಯದ ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ ಎಂದು ಪಿಟಿಐ ವರದಿ ಮಾಡಿದೆ.

ಸ್ಫೋಟದ ನಂತರ ಐದು ಜನರು ಸಾವನ್ನಪ್ಪಿದ್ದಾರೆ ಮತ್ತು ಆರು ಜನರು ಕಾಣೆಯಾಗಿದ್ದಾರೆ ಎಂದು ಹೇಳಿದರು. 2019 ರಲ್ಲಿ ಗಾವೋಮಿ ಸ್ಥಾಪನೆಯಾದ ಈ ಸ್ಥಾವರವು ವರ್ಷಕ್ಕೆ ಸುಮಾರು 11,000 ಟನ್ ಕೀಟನಾಶಕವನ್ನು ಉತ್ಪದಿಸುತ್ತದೆ ಮತ್ತು 300 ಕ್ಕೂ ಹೆಚ್ಚು ಜನರು ಕಾರ್ಯಪಡೆಯನ್ನು ಹೊಂದಿದೆ ಎಂದು ಹಾಂಗ್ ಕಾಂಗ್ ಮೂಲದ ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net