

Uttarkashi: ಉತ್ತರಾಖಂಡದ ಉತ್ತರಕಾಶಿಯ ಧರಾಲಿಯಲ್ಲಿ ಭಾರೀ ಮೇಘಸ್ಫೋಟ ಸಂಭವಿಸಿದ್ದು, ಪ್ರವಾಹದ ಭೀಕರತೆ ದೃಶ್ಯಗಳಲ್ಲಿ ಸೆರೆಯಾಗಿವೆ. ಮೇಘಸ್ಫೋಟಕ್ಕೆ ಐವರು ಬಲಿಯಾಗಿದ್ದು, 50ಕ್ಕೂ ಅಧಿಕ ಮಂದಿ ಕಾಣೆಯಾಗಿದ್ದಾರೆ. ಇದರ ನಡುವೆ ಹರ್ಷಿಲ್ ಪ್ರದೇಶದ ಕೆಳಭಾಗದಲ್ಲಿನ ಶಿಬಿರದಿಂದ 8 ರಿಂದ 10 ಯೋಧರು ಕೂಡ ನಾಪತ್ತೆಯಾಗಿದ್ದಾರೆ ಎಂದು ಮಂಗಳವಾರ ವರದಿಯಾಗಿದೆ.
ಇದರ ನಡುವೆ ಇತರ ಯೋಧರು ಎಸ್ಡಿಆರ್ಎಫ್, ಪೊಲೀಸರು ಮತ್ತು ರಕ್ಷಣಾ ಪಡೆಗಳು ಸ್ಥಳಕ್ಕೆ ಆಗಮಿಸಿ, ಅವಶೇಷಗಳ ಅಡಿ ಸಿಲುಕಿರುವವರನ್ನು ರಕ್ಷಿಸುವ ಕಾರ್ಯಾಚರಣೆಯಲ್ಲಿ ತೊಡಗಿವೆ.
ಉತ್ತರಾಖಂಡದಲ್ಲಿ ವಿಪತ್ತು ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳಿಗೆ ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ಗಳನ್ನು ಸಂಪೂರ್ಣವಾಗಿ ಸಿದ್ಧವಾಗಿಡಲಾಗಿದೆ. ಈ ಹೆಲಿಕಾಪ್ಟರ್ಗಳು ಚಂಡೀಗಢ, ಬರೇಲಿ ಮತ್ತು ಸರ್ಸಾವಾ ವಾಯುನೆಲೆಗಳಲ್ಲಿ ಸ್ಟ್ಯಾಂಡ್ಬೈ ಮೋಡ್ನಲ್ಲಿವೆ, ಇದರಿಂದಾಗಿ ಯಾವುದೇ ಅಪಾಯ ಅಥವಾ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ತಕ್ಷಣದ ಕ್ರಮ ಕೈಗೊಳ್ಳಬಹುದು. ಈ ಹೆಲಿಕಾಪ್ಟರ್ಗಳು ಉತ್ತರಾಖಂಡದ ಪೀಡಿತ ಪ್ರದೇಶಗಳಿಗೆ ತೆರಳುತ್ತವೆ ಮತ್ತು ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತವೆ ಎಂದು ವರದಿ ಉಲ್ಲೇಖಿಸಿದ್ದಾರೆ.