

Cloudburst : ಸೋಮವಾರ ತಡರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಮಂಗಳವಾರ ಬೆಳಗ್ಗೆ ಉತ್ತರಾಖಂಡದ ಡೆಹ್ರಾಡೂನ್‌ನ ಹೊರವಲಯದಲ್ಲಿ ಭಾರಿ ಮೇಘಸ್ಫೋಟ ಸಂಭವಿಸಿದೆ.
ಹಲವು ಪ್ರದೇಶದಲ್ಲಿ ಏಕಾಏಕಿ ಭೂಕುಸಿತಗಳಾಗಿದ್ದು ಮನೆಗಳು ಮತ್ತು ರಸ್ತೆಗಳು ನಾಶವಾಗಿವೆ. ಅಲ್ಲದೆ,ಹತ್ತಾರು ಕಾರುಗಳು ಸೇರಿ ಅಂಗಡಿಗಳು ನೀರಿಗೆ ಕೊಚ್ಚಿಹೋಗಿವೆ. ಇನ್ನು ಇದರ ನಡುವೆ ಇಬ್ಬರು ನಾಗಕರಿರು ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ. ಎಸ್‌ಡಿಆರ್‌ಎಫ್ ಮತ್ತು ಎನ್‌ಡಿಆರ್‌ಎಫ್ ತಂಡಗಳು ರಕ್ಷಣಾ ಕಾರ್ಯಾಚರಣೆ ಮಾಡುತ್ತಿವೆ ಎಂದು ವರದಿ ಉಲ್ಲೇಖಿಸಿದೆ.
ತಮ್ಸಾ ನದಿ ಉಕ್ಕಿ ಹರಿಯುತ್ತಿದ್ದು, ನಗರದ ಪ್ರಮುಖ ದೇವಾಲಯಗಳಲ್ಲಿ ಒಂದಾದ ತಪಕೇಶ್ವರ ಮಹಾದೇವ ದೇವಾಲಯ ನೀರಿನಲ್ಲಿ ಮುಳುಗಿದೆ. ದೇವಾಲಯದ ಅಂಗಳಕ್ಕೆ ನೀರು ನುಗ್ಗಿ ಹನುಮಂತನ ಪ್ರತಿಮೆಗೆ ತಾಕಿವೆ ಆದರೂ ಗರ್ಭಗುಡಿ ಸುರಕ್ಷಿತವಾಗಿದೆ.
ಇನ್ನು ಸುದ್ದಿಸಂಸ್ಥೆಗಳ ಜೊತೆ ಮಾತನಾಡಿದ ದೇವಾಲಯದ ಅರ್ಚಕ ಆಚಾರ್ಯ ಬಿಪಿನ್ ಜೋಶಿ, "ಬೆಳಿಗ್ಗೆ 5 ಗಂಟೆಯಿಂದ ನದಿಯ ನೀರು ಜೋರಾಗಿ ಹರಿಯಲು ಪ್ರಾರಂಭಿಸಿತು, ಇಡೀ ದೇವಾಲಯದ ಆವರಣ ಮುಳುಗಿದೆ. ಈ ರೀತಿಯ ಪರಿಸ್ಥಿತಿ ಈ ಹಿಂದೆ ಸಂಭವಿಸಿರಲಿಲ್ಲ. ವಿವಿಧ ಸ್ಥಳಗಳಲ್ಲಿ ನಷ್ಟ ಸಂಭವಿಸಿದೆ. ಈ ಸಮಯದಲ್ಲಿ ಜನರು ನದಿಗಳ ಬಳಿ ಹೋಗುವುದನ್ನು ತಪ್ಪಿಸಬೇಕು. ದೇವಾಲಯದ ಗರ್ಭಗುಡಿ ಸುರಕ್ಷಿತವಾಗಿದೆ. ಇಲ್ಲಿಯವರೆಗೆ ಯಾವುದೇ ಮಾನವ ನಷ್ಟ ಸಂಭವಿಸಿಲ್ಲ" ಎಂದು ಅವರು ಹೇಳಿದರು.(ಏಜೆನ್ಸೀಸ್)