ಮಸೀದಿಯಲ್ಲಿ ಬೇಡ ಎಂದಿದ್ದಕ್ಕೆ ಮನೆಯಲ್ಲೇ ಸಾಮೂಹಿಕ ಪ್ರಾರ್ಥನೆ!: 25 ಜನರ ಬಂಧನ

pryar may
Published on

ಎನ್.ಆರ್. ಪುರ: ‘ಈಗ ಕರೊನಾ ಹಾವಳಿ ಇದೆ; ಮಸೀದಿಯಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡಬೇಡಿ’ ಎಂದು ಸರ್ಕಾರ ಹೇಳಿದ್ದನ್ನು ಇವರೆಲ್ಲ ತಪ್ಪಾಗಿ ಅರ್ಥ ಮಾಡಿಕೊಂಡಿದ್ದಾರೋ ಏನೋ!

ಮಸೀದಿಯಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡಬೇಡಿ ಎಂದಿದ್ದಕ್ಕೆ ಮನೆಯಲ್ಲೇ ಇಪ್ಪತ್ತೈದು ಜನ ಸೇರಿ ಪ್ರಾರ್ಥನೆ ಮಾಡುತ್ತಿದ್ದ ಘಟನೆ ಪಟ್ಟಣದ ಬೆಟಗೇರಿ ಬಡಾವಣೆಯಲ್ಲಿ ನಡೆದಿದೆ.

ಮನೆಯೊಂದರಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸುತ್ತಿದ್ದ 25 ಜನರನ್ನು ಪೊಲೀಸರು ಭಾನುವಾರ ಸಂಜೆ ಬಂಧಿಸಿ ಲಾಕ್‌ಡೌನ್ ಉಲ್ಲಂಘನೆ ಕೇಸ್ ದಾಖಲಿಸಿಕೊಂಡಿದ್ದಾರೆ.

ಮನೆ ಮಾಲೀಕ ಮುಷ್ತಾಕ್ ಖಾನ್, ಪ್ರಾರ್ಥನೆ ಹೇಳಿಕೊಡುತ್ತಿದ್ದ ಮೈಪಾಸ್ತಾ ಖಾನ್ ಅವರನ್ನು ಅಳಲಗೆರೆ ಮುರಾರ್ಜಿ ದೇಸಾಯಿ ವಸತಿ ಶಾಲೆಯ ಕ್ವಾರಂಟೈನ್ ಕೇಂದ್ರದಲ್ಲಿ ಇಡಲಾಗಿದೆ. ಉಳಿದ 23 ಜನರಿಗೆ ಅವರ ಮನೆಗಳಲ್ಲೇ 14 ದಿನ ಕ್ವಾರಂಟೈನ್‌ನಲ್ಲಿ ಇರುವಂತೆ ಸೂಚಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net