ಬಿಎಸ್‌ವೈ ಸಂಪುಟದಲ್ಲಿ ಪ್ರತಾಪಗೌಡ ಮಂತ್ರಿಯಾಗೋದು ಖಚಿತ; ವಸತಿ ಸಚಿವ ವಿ.ಸೋಮಣ್ಣ

18112020 Maski BJP Party Meeting Minister V Somanna
Published on

ಮಸ್ಕಿ: ಉಪಚುನಾವಣೆ ಮುಗಿದ ತಕ್ಷಣ ಪ್ರತಾಪಗೌಡ ಪಾಟೀಲ್ ಸಿಎಂ ಯಡಿಯೂರಪ್ಪ ಸಂಪುಟದಲ್ಲಿ ಮಂತ್ರಿಯಾಗುವುದು ಖಚಿತ, ಕ್ಷೇತ್ರವೂ ರಾಜ್ಯದ ಮಾದರಿ ಕ್ಷೇತ್ರವಾಗುತ್ತದೆ ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದರು.

ಪಟ್ಟಣದ ಭ್ರಮರಾಂಬ ದೇವಸ್ಥಾನದ ಸಮುದಾಯ ಭವನದಲ್ಲಿ ಬುಧವಾರ ಬಿಜೆಪಿ ಕಾರ್ಯಕರ್ತರ ಚುನಾವಣೆ ಪೂರ್ವಬಾವಿ ಸಭೆ ಉದ್ಘಾಟಿಸಿ ಮಾತನಾಡಿದರು. ತಾಲೂಕಿನ ವಿವಿಧ ಯೋಜನೆಗಳಲ್ಲಿ ಅರ್ಧಕ್ಕೆ ನಿಂತ ಮನೆಗಳು ಪೂರ್ಣಗೊಳಿಸಲು ಬಾಕಿ ಇರುವ 9 ಕೋಟಿ ರೂ. ಕೂಡಲೇ ಬಿಡುಗಡೆ ಮಾಡುವುದಲ್ಲದೆ ಹೆಚ್ಚುವರಿಯಾಗಿ 6 ಸಾವಿರ ಮನೆಗಳನ್ನು ನಿರ್ಮಿಸಿ ಗುಡಿಸಲು ಮುಕ್ತ ಕ್ಷೇತ್ರ ಮಾಡುವುದಾಗಿ ವಸತಿ ಸಚಿವ ವಿ.ಸೋಮಣ್ಣ ಭರವಸೆ ನೀಡಿದರು. ಬಹುದಿನಗಳ ಬೇಡಿಕೆಯಾದ ಕೃಷ್ಣಾ ಮೇಲ್ದಂಡೆ ಯೋಜನೆಯ 5 ಎ ಕಾಲುವೆ ನಿರ್ಮಾಣಕ್ಕೆ ಸರ್ಕಾರ ಈಗಾಗಲೇ ಸರ್ವೇ ಕೆಲಸ ಆರಂಭಿಸಿದ್ದು, ವರದಿ ಬಂದ ತಕ್ಷಣ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಿ ಜಾರಿಗೊಳಿಸುವುದಾಗಿ ಭರಸವೆ ನಿಡಿದರು.

ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಮಾತನಾಡಿ, ಸಮಿಶ್ರ ಸರ್ಕಾರದಲ್ಲಿ ಶಾಸಕರಿಗೆ ಗೌರವ ಇರಲಿಲ್ಲ. ಸ್ವಾಭಿಮಾನದಿಂದ ಕ್ಷೇತ್ರದ ಅಭಿವೃದ್ಧಿಗಾಗಿ ಸಿಎಂ ಯಡಿಯೂರಪ್ಪ ಮೇಲಿನ ಪ್ರೀತಿಯಿಂದ ಕಾಂಗ್ರೆಸ್ ತೊರೆದು ಬಿಜೆಪಿಗೆ ಬಂದಿರುವೆ ಎಂದರು.

ಸಂಸದ ಸಂಗಣ್ಣ ಕರಡಿ, ಶಾಸಕರಾದ ರಾಜುಗೌಡ, ಬಸವರಾಜ ದಢೇಸುಗೂರು, ಹಾಲಪ್ಪ ಆಚಾರ್, ಮಾಜಿ ಶಾಸಕರಾದ ಮಾನಪ್ಪ ವಜ್ಜಲ್, ಬಸನಗೌಡ ಬ್ಯಾಗವಾಟ, ಗಂಗಾಧರ ನಾಯಕ, ಎನ್.ಶಂಕ್ರಪ್ಪ ಮಾತನಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net