X Men - ಹೊಸ ಎಕ್ಸ್​ ಮೆನ್​ನಲ್ಲಿ ಹೊಸ ಸೂಪರ್​ಹೀರೋಗಳ ಎಂಟ್ರಿ

New X Men
New X Men
Published on
X Men -
ಹಾಲಿವುಡ್​ ಸೂಪರ್​ಹೀರೋಗಳಿಗೆ ಸುವರ್ಣಕಾಲವಿದು. ಕಳೆದ ತಿಂಗಳು ರಿಲೀಸ್​ ಆದ "ಸ್ಪೈಡರ್​ಮ್ಯಾನ್​: ಬ್ರ್ಯಾಂಡ್​​ ನ್ಯೂಡೇ' ಬಾಕ್ಸಾಫಿಸಿನಲ್ಲಿ ಭರ್ಜರಿ ಗಳಿಕೆ ಮಾಡುತ್ತಿದೆ. ಅದರ ಬೆನ್ನಲ್ಲೇ ಹಿಟ್​ ಸೂಪರ್​ಹೀರೋ ಸಿನಿಮಾ ಫ್ರಾಂಚೈಸಿಯಾದ "ಎಕ್ಸ್​ ಮೆನ್​' ತಂಡದ ಹೊಸ ಸದಸ್ಯರನ್ನು ಮಾರ್ವಲ್​ ಪರಿಚಯಿಸಿದೆ. "ಎಕ್ಸ್​ ಮೆನ್​' ಪಾತ್ರಗಳನ್ನು ಜನ ಸ್ವೀಕರಿಸಿದ್ದನ್ನು ನೋಡಿ ಹ್ಯೂ ಜಾಕ್​ಮನ್​ ನಟಿಸಿದ್ದ "ವೂಲ್ವರಿನ್​' ಮತ್ತು ರ್ಯಾನ್​ ರೆನಾಲ್ಡ್ಸ್​ನ "ಡೆಡ್​ಪೂಲ್​' ಕುರಿತ ಐದು ಸಿನಿಮಾಗಳು ಬಂದಿವೆ. ಅದನ್ನೂ ಸೇರಿ 2000ರಿಂದ 2020ರವರೆಗೆ ಒಟ್ಟು 13 "ಎಕ್ಸ್​ ಮೆನ್​' ಚಿತ್ರಗಳು ಬಂದಿದ್ದು, ಬಹುತೇಕ ಎಲ್ಲವೂ ಸೂಪರ್​ಹಿಟ್​ ಆಗಿವೆ. ಇದೀಗ ಸೂಪರ್​ಹೀರೋ ಸಿನಿಮಾಗಳ ಕ್ರೇಜ್​ ಹಿಂದೆಂದಿಗಿಂತಲೂ ಹೆಚ್ಚಾಗಿರುವುದನ್ನು ಮನಗಂಡು ಮಾರ್ವಲ್​ ಸ್ಟುಡಿಯೋಸ್​ ಹೊಸ "ಎಕ್ಸ್​ ಮೆನ್​' ಘೋಷಿಸಿದೆ. ಕಳೆದ ವರ್ಷ ತೆರೆಕಂಡ "ಥಂಡರ್​ಬೋಲ್ಟ್ಸ್​' ಖ್ಯಾತಿಯ ಜೇಕ್​ ಶ್ರೀಯರ್​ ಈ ಹೊಸ ಸೂಪರ್​ಹೀರೋ ಚಿತ್ರಕ್ಕೆ ಆ್ಯಕ್ಷನ್​&ಕಟ್​ ಹೇಳಲಿದ್ದಾರೆ. ಸ್ಯಾಡಿ ಸಿಂಕ್​ (ಜೀನ್​ ಗ್ರೇ), ಕಿಟ್​ ಕಾನರ್​ (ಸ್ಕಾಟ್​ ಸಮ್ಮರ್ಸ್​), ಸಮಾರಾ ವೀವಿಂಗ್​ (ಎಮ್ಮಾ ಫ್ರಾಸ್ಟ್​), ಕ್ರಿಸ್ಟೋರ್​ ಎಬೋಟ್​ (ಪ್ರೊಫೆಸರ್​ ಎಕ್ಸ್​), ಮಾಯಾ ಬಾಯ್ಡ್​ (ಸ್ಟಾಮ್​ರ್), ಅಡಮ್​ ಡೆವರ್​ (ಮಿಸ್ಟರ್​ ಸಿನಿಸ್ಟರ್​), ಇಂಡೀ ನವರೆಟ್ಟೆ (ರೋಗ್​) ಪಾತ್ರಗಳಿಗೆ ಆಯ್ಕೆಯಾಗಿದ್ದಾರೆ. ಹೊಸ ಮುಖಗಳ ಹೊಚ್ಚ ಹೊಸ "ಎಕ್ಸ್​ ಮೆನ್​' ಮೇ 2028ರಲ್ಲಿ ರಿಲೀಸ್​ ಆಗಲಿದೆ.

ಯಶಸ್ವಿ ಸಿನಿಮಾ ಸರಣಿ

2000ರಿಂದ 2020ರವರೆಗೆ "ಎಕ್ಸ್​ ಮೆನ್​' ಸರಣಿಯ ಒಟ್ಟು 13 ಚಿತ್ರಗಳು ರಿಲೀಸ್​ ಆಗಿವೆ. ಒಟ್ಟು ₹16,500 ಕೋಟಿಗೂ ಅಧಿಕ ಬಜೆಟ್​ನಲ್ಲಿ ಈ ಸಿನಿಮಾಗಳು ನಿರ್ಮಾಣವಾಗಿದ್ದು, ವಿಶ್ವಾದ್ಯಂತ ಬಾಕ್ಸಾಫಿಸಿನಲ್ಲಿ ಬರೋಬ್ಬರಿ ₹58 ಸಾವಿರ ಕೋಟಿಗೂ ಹೆಚ್ಚು ಕಲೆಕ್ಷನ್​ ಮಾಡಿಕೊಂಡಿವೆ. ಆ ಮೂಲಕ ಹಾಲಿವುಡ್​ನ ಅತ್ಯಂತ ಯಶಸ್ವಿ ಸೂಪರ್​ಹೀರೋ ಸಿನಿಮಾ ಸರಣಿಗಳ ಪೈಕಿ "ಎಕ್ಸ್​ ಮೆನ್​' ಮೊದಲ ಸಾಲಿನಲ್ಲಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net