ಫೆ.1ರಿಂದ ಮಾರುತಿ ಸುಜುಕಿ ವಾಹನಗಳ ಬೆಲೆ ಹೆಚ್ಚಳ

ವಿಜಯವಾಣಿ (3)
Published on

ನವದೆಹಲಿ: ಮಾರುತಿ ಸುಜುಕಿ ಇಂಡಿಯಾ ಕಂಪನಿ ವಿವಿಧ ಮಾಡೆಲ್​ನ ಕಾರುಗಳ ಬೆಲೆಯನ್ನು ಫೆ. 1ರಿಂದ ಸುಮಾರು 32,500 ರೂ.ವರೆಗೆ ಏರಿಸಲಿದೆ. ಕಾರ್ಯಾಚರಣೆ ವೆಚ್ಚ ಮತ್ತು ತಯಾರಿಕೆ ವೆಚ್ಚ ಹೆಚ್ಚಾಗಿರುವುದರಿಂದ ಈ ಕ್ರಮಕ್ಕೆ ಮುಂದಾಗಿರುವುದಾಗಿ ಕಂಪನಿ ಗುರುವಾರ ತಿಳಿಸಿದೆ.

ಸೆಲೆರಿಯೊ 32,500 ರೂ., ಇನ್​ವಿಕ್ಟೊ 30 ಸಾವಿರ ರೂ., ವ್ಯಾಗನ್ ಆರ್ 15 ಸಾವಿರ ರೂ., ಸ್ವಿಫ್ಟ್ 5 ಸಾವಿರ ರೂ., ಬ್ರೆಜಾ ಮತ್ತು ಗ್ರ್ಯಾಂಡ್ ವಿತಾರಾ ಕ್ರಮವಾಗಿ 20 ಸಾವಿರ ಮತ್ತು 25 ಸಾವಿರ ರೂ., ಆಲ್ಟೊ ಕೆ10 ಸುಮಾರು 19,500 ರೂ., ಎಸ್-ಪ್ರೆಸ್ಸೊ 5 ಸಾವಿರ ರೂ., ಬಲೆನೊ 9 ಸಾವಿರ ರೂ., ಫ್ರಾಂಕ್ಸ್ 5,500 ರೂ., ಡಿಜೈರ್ 10 ಸಾವಿರ ರೂ. ಹೆಚ್ಚಾಗಲಿದೆ ಎಂದು ಕಂಪನಿ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net