ವಿವಾಹಿತ ಮಹಿಳೆಗೆ ಮಾರಣಾಂತಿಕ ಹಲ್ಲೆ, ಕೊಲೆ ಬೆದರಿಕೆ

ಮಾದನಾಯಕನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲು, ಐವರು ಆರೋಪಿಗಳನ್ನು ಬಂಧಿಸಿದ ಪೊಲೀಸರು, ಪ್ರಮುಖ ಆರೋಪಿಯೊಂದಿಗೆ ಸಂತ್ರಸ್ತೆ ಲಿವಿಂಗ್ ರಿಲೇಷನ್‌ಶಿಪ್, ಹಣಕಾಸಿನ ವಿಚಾರ ಸಂಬಂಧ ಇಬ್ಬರ ಮಧ್ಯೆ ನಿರಂತರ ಜಗಳ
kempahanumyya and anuradha
kempahanumyya and anuradha
Published on: 

ಬೆಂಗಳೂರು: ‘ಕಾರಿನ ಮಾಲೀಕ ನೀನೇ ಆಗಿದ್ದರೂ ಅದರ ಇಎಂಐ ನಾನೇ ಕಟ್ಟಿದ್ದೇನೆ’ ಎಂದು ಶುರುವಾದ ಜಗಳದಲ್ಲಿ ಯುವಕನೊಬ್ಬ ತನ್ನ ಸಂಬಂಧಿಕರ ಜತೆ ಸೇರಿ ವಿವಾಹಿತ ಮಹಿಳೆಗೆ ಮಾರಣಾಂತಿಕ ಹಲ್ಲೆ ಮಾಡಿರುವುದು ಮಾದನಾಯಕನಹಳ್ಳಿಯಲ್ಲಿ ನಡೆದಿದೆ.

ಕುದುರೆಗೆರೆ ನಿವಾಸಿ ಡಿ. ಅನುರಾಧ (38) ಹಲ್ಲೆಗೆ ಒಳಗಾದ ರಿಯಲ್ ಎಸ್ಟೇಟ್ ಉದ್ಯಮಿ. ಸದ್ಯ ಮಲ್ಲೇಶ್ವರ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಇವರು ನೀಡಿದ ದೂರಿನ ಮೇರೆಗೆ ಪ್ರಿಯಕರ ಕೆಂಪಹನುಮಯ್ಯ, ಈತನ ಸಂಬಂಧಿ ಹನುಮನರಸ, ಗಂಗನರಸಮ್ಮ, ಹರೀಶ್ ಹಾಗೂ ರಾಜೇಶ್‌ನನ್ನು ಪೊಲೀಸರು ಬಂಧಿಸಿದ್ದಾರೆ.

ದಾಸನಪುರದ ಮಮತಾ ಕನ್ವೇನ್‌ಷನ್ ಬಳಿಯ ಸಂತ್ರಸ್ತೆ ಮನೆ ಮುಂದೆ ಸೆ.22ರಂದು ಬೆಳಗ್ಗೆ 8ಗಂಟೆಗೆ ಕೃತ್ಯ ನಡೆದಿದ್ದು, ಆರೋಪಿ ಕೆಂಪಹನುಮಯ್ಯ ಕೈ ಖಡಗದಿಂದ ಆನುರಾಧ ಮುಖಕ್ಕೆ ಗುದ್ದಿದ್ದ. ಇದೇ ವೇಳೆ ಹನುಮನರಸ ಮತ್ತು ಈತನ ಪತ್ನಿ ಗಂಗನರಸಮ್ಮ ಆಯುಧವೊಂದರಿಂದ ತಲೆಗೆ ಬಲವಾಗಿ ಹೊಡೆದು. ರಕ್ತಗಾಯ ಮಾಡಿದ್ದರು ಎಂದು ದೂರಿನಲ್ಲಿ ಉಲ್ಲೇಖವಾಗಿದೆ.

ರೇಪ್ ಮಾಡಿ ಸಾಯಿಸಿ ಎಂದಿದ್ದ: ಆರೋಪಿಯು ಹಲ್ಲೆ ನಡೆಸಿ ಆಕೆಗೆ ನಿತ್ರಾಣಗೊಳಿಸಿ, ಕೈಯಿಂದ ಎಳೆದೊಯ್ದು ಕಾರಿನಲ್ಲಿ ತುಂಬಿದ್ದ. ಬಳಿಕ ತನ್ನ ಅಣ್ಣನ ಮಕ್ಕಳಾದ ಹರೀಶ್ ಮತ್ತು ರಾಜೇಶ್‌ಗೆ ರೇಪ್ ಮಾಡಿ ಸಾಯಿಸಿ ಎಂದು ಎಂದಿದ್ದ. ಅವರು ಆಕೆಗೆ ಬೆದರಿಕೆ ಹಾಕಿದ್ದರು. ಕಾರಿನಲ್ಲಿ ಆಕೆಯ ಖಾಸಗಿ ಅಂಗಗಳನ್ನು ಮುಟ್ಟಿ ಲೈಂಗಿಕ ಕಿರುಕುಳ ನೀಡಿದ್ದಲ್ಲದೆ, ಖಾಸಗಿ ಭಾಗಕ್ಕೆ ಕಾಲಿನಿಂದ ಒದ್ದಿದ್ದರು. ಬಳಿಕ ಸಿಡೇದಹಳ್ಳಿ ಮುಖ್ಯ ರಸ್ತೆಯ ಖಾಸಗಿ ಆಸ್ಪತ್ರೆ ಬಳಿ ಬಿಟ್ಟು ಹೋಗಿದ್ದರು ಎಂದು ಎ್ಐಆರ್‌ನಲ್ಲಿ ಸಂತ್ರಸ್ತೆ ತಿಳಿಸಿದ್ದಾರೆ.

ಪತಿ ತೊರೆದು 6 ವರ್ಷದಿಂದ ಯುವಕನೊಂದಿಗೆ ಸಹಜೀವನ..!

ಅನುರಾಧ ತನ್ನ ಪತಿಗೆ ತೊರೆದು ಕಳೆದ 6 ವರ್ಷಗಳಿಂದ ಆರೋಪಿ ಕೆಂಪಹನುಮಯ್ಯ ಜತೆಗೆ ಸಹಜೀವನ (ಲಿವಿಂಗ್ ರಿಲೇಷನ್) ನಡೆಸಿದ್ದಳು. ಈ ನಡುವೆ ಇಬ್ಬರು ಸೇರಿ ಮನೆಯೊಂದನ್ನು ಕಟ್ಟಿಸಿದ್ದರು. ಬಳಿಕ ಹಣ ಕಾಸಿನ ವಿಚಾರದಲ್ಲಿ ಇಬ್ಬರ ನಡುವೆ ಮನಸ್ಥಾಪ ಬಂದ ಹಿನ್ನೆಲೆ ಅದನ್ನು ಮಾರಿ ಹಣ ಹಂಚಿಕೊಂಡಿದ್ದರು. ಆಗ ವೇಳೆ ಗಲಾಟೆ ಆಗಿತ್ತು. ಆಗ ಇಬ್ಬರೂ ಠಾಣೆಗೆ ಬಂದಿದ್ದರು. ಈ ಘಟನೆ ಮುಗಿದು ಕೆಲ ದಿನಗಳ ‘ಇವರಿಬ್ಬರು ಕಾರೊಂದನ್ನು ಖರೀದಿಸಿದ್ದರು. ಅದು ಆರೋಪಿ ಹೆಸರಿನಲ್ಲಿ ಖರೀದಿಯಾಗಿತ್ತು. ಆದರೆ ಅದರ ಸಾಲವನ್ನು ಅನುರಾಧ ಪಾವತಿಸಿದ್ದಳು’. ಈ ಕಾರು ನನಗೆ ಸೇರಿದ್ದು ಎಂದು ಮತ್ತೇ ಜಗಳ ಶುರುವಾದಾಗ ಆರೋಪಿ ಕೃತ್ಯ ಎಸಗಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ನನಗೆ ಪ್ರಾಣ ಭಯವಿದೆ, ರಕ್ಷಣೆ ನೀಡಿ..!

ನಾನು ಕಟ್ಟಡವೊಂದನ್ನು 1.27 ಕೋಟಿ ರೂ.ಗೆ ಮಾರಾಟ ಮಾಡಿದ್ದೇನೆ. ಮಾರಾಟದ ಹಣ ಮತ್ತು ನನ್ನಲ್ಲಿರುವ ಚಿನ್ನಾಭರಣ ನೀಡುವಂತೆ ಆರೋಪಿಗಳು ಚಿತ್ರಹಿಂಸೆ ಮತ್ತು ದೌರ್ಜನ್ಯ ಮಾಡುತ್ತಿದ್ದಾರೆ. ಕೆಂಪಹನುಮಯ್ಯ ಹಾಗೂ ಆತನ ಸಂಬಂಧಿಕರಿಂದ ನನಗೆ ಜೀವ ಬೆದರಿಕೆಯಿದೆ. ಸೂಕ್ತ ರಕ್ಷಣೆ ನೀಡುವಂತೆ ಪೊಲೀಸರಿಗೆ ಅನುರಾಧ ಮನವಿ ಮಾಡಿಕೊಂಡಿದ್ದಾಳೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net