15ರ ವಿದ್ಯಾರ್ಥಿ ಜತೆ 35ರ ಶಿಕ್ಷಕಿಯ ಸರಸ: ಇಬ್ಬರ ನಡುವಿನ ಸೆಕ್ಸ್​ ಚಾಟ್​ ಬಹಿರಂಗ!

Teacher
Published on

ಲಂಡನ್​: ಹದಿನೈದು ವರ್ಷದ ವಿದ್ಯಾರ್ಥಿಯೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದ ಆರೋಪದಲ್ಲಿ ವಿಚಾರಣೆ ಎದುರಿಸುತ್ತಿರುವ ವಿವಾಹಿತ ಶಿಕ್ಷಕಿ, ವಿದ್ಯಾರ್ಥಿ ಜತೆಗೆ ನಡೆಸಿದ ಫೋನ್​ ಸಂಭಾಷಣೆ ನ್ಯಾಯಾಲಯದ ಎದುರು ಬಹಿರಂಗೊಂಡಿದೆ.

ಕ್ಯಾಂಡೈಸ್​ ಬಾರ್ಬರ್​ (35), ತನ್ನ ಶಾಲಾ ವಿದ್ಯಾರ್ಥಿಯನ್ನು ಕಾರಿನಲ್ಲಿ ಕರೆದೊಯ್ದು ಮೈದಾನವೊಂದರಲ್ಲಿ ಲೈಂಗಿಕ ಕ್ರಿಯೆ ನಡೆಸಿರುವ ಆರೋಪದ ಮೇಲೆ ಸುದೀರ್ಘ ವಿಚಾರಣೆ ನಡೆಯುತ್ತಿದೆ. 2018ರಲ್ಲಿ ಘಟನೆ ನಡೆದಿದ್ದು, ಪ್ರಕರಣ ನ್ಯಾಯಾಲಯ ಮೆಟ್ಟಿಲೇರಿದೆ. ಈ ಸಂಬಂಧ ಎರಡನೇ ಹಂತ ವಿಚಾರಣೆ ನಡೆಯುತ್ತಿದೆ.

ತಮ್ಮ ತೀರ್ಪನ್ನು ಪರಿಗಣಿಸುವ ಮುನ್ನ ಅಮರ್‌ಶ್ಯಾಮ್ ಕಾನೂನು ನ್ಯಾಯಾಲಯದ ನ್ಯಾಯಾಧೀಶರು ಅನೇಕ ಪ್ರಶ್ನೆಗಳನ್ನು ಕ್ಯಾಂಡೈಸ್​ಗೆ ಕೇಳಿದ್ದಾರೆ. ಈಗ ಏನು ಮಾಡಲು ಬಯಸಿದ್ದೀಯ? ಎಂದು ಮೂರು ಮಕ್ಕಳ ತಾಯಿ ಒಬ್ಬಳು ಬಾಲಕನ ಕಿವಿಯಲ್ಲಿ ಪಿಸುಗುಡುವ ಮುನ್ನ ಆತನ ಕುತ್ತಿಗೆಯನ್ನು ಚುಂಬಿಸುವುದಂದೆರೆ ಹೇಗೆ? ಎಂದು ಕೋರ್ಟ್​ ಪ್ರಶ್ನಿಸಿದೆ.

ದೂರುದಾರರ ಸಾಕ್ಷ್ಯವನ್ನು ಸಂಕ್ಷಿಪ್ತವಾಗಿ ಹೇಳುವ ನ್ಯಾಯಾಲಯದ ಮಿಸ್ ರೆಕಾರ್ಡರ್ ಬಾಲ್ ಧಲಿವಾಲ್, ಬಾಲಕ ಆಗಷ್ಟೇ ಶಾಲೆ ಮುಗಿಸಿದ್ದನು. ಆತನನ್ನು ಮರಳು ಮಾಡಿದ್ದ ಆಕೆ ಮೊದಲು ಆತನ ಕುತ್ತಿಗೆ ಮುತ್ತಿಟ್ಟಳು. ಬಾಲಕ ಆಕೆಯ ಬೆನ್ನನ್ನು ಚುಂಬಿಸಿದನು. ಬಳಿಕ ಈಗ ಏನು ಮಾಡಲು ಬಯಸಿದ್ದೀಯ? ಎಂದು ಪ್ರಶ್ನಿಸಿ, ಆತನ ಬಟ್ಟೆಯ ಮೇಲೆ ಹೊಟ್ಟೆಯ ಭಾಗವನ್ನು ಸ್ಪರ್ಶಿಸಿದಳು. ಇದಾದ ಬಳಿಕ ಸೆಕ್ಸ್​ ಮಾಡಲು ಬಯಸುತ್ತೀಯ? ಎಂದು ಕ್ಯಾಂಡೈಸ್ ಬಾಲಕನನ್ನು ಕೇಳಿದ್ದಾಳೆ. ಆರಂಭದಲ್ಲಿ ನನಗೆ ಮನಸ್ಸಿಲ್ಲ ಎಂದ ಬಾಲಕ ನಂತರ ಹೌದು ಎಂದಿದ್ದಾನೆ ಎಂದು ಮಿಸ್​ ರೆಕಾರ್ಡರ್ ದೂರುದಾರನ ಪರ​ ವಿವರಿಸಿದ್ದಾರೆ.

ಈ ವೇಳೆ ಮಧ್ಯಪ್ರವೇಶಿಸಿದ ನ್ಯಾಯಾಧೀಶರು, ಬಾಲಕನೊಬ್ಬ ಕ್ಯಾಂಡೈಸ್​ಗೆ ತನ್ನ ಅಶ್ಲೀಲ ಚಿತ್ರಗಳನ್ನು ಕಳುಹಿಸಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ಇತರೆ ಸಾಕ್ಷಿಗಳು ವಿವರಣೆ ನೀಡಿದ್ದಾರೆ. ಕ್ಯಾಂಡೈಸ್​, ಬಾಲಕನ ಐಫೋನ್​ಗೆ ಕಳುಹಿಸಿದ್ದ ಮಸೇಜ್​ ನೋಡಿದ್ದೇವೆ. ಅದರಲ್ಲಿ ನಿನಗೆ ನನ್ನ ದೇಹದಲ್ಲಿ ಯಾವುದನ್ನು ಆಯ್ಕೆ ಮಾಡಿಕೊಳ್ಳುತ್ತೀಯ ಎಂದು ಬಾಲಕನನ್ನು ಕ್ಯಾಂಡೈಸ್​ ಕೇಳಿದ್ದಾಳೆಂದು ತಿಳಿಸಿದ್ದಾರೆ.

ಬಳಿಕ ಕ್ಯಾಂಡೈಸ್​ ಪರ ವಕೀಲ ಮಧ್ಯಪ್ರವೇಶಿಸಿ ಆಕೆಯನ್ನು ಅಪರಾಧಿ ಎಂದು ಹೇಳಲು ಯಾವುದೇ ಸ್ವತಂತ್ರ ಸಾಕ್ಷ್ಯಾಧಾರಗಳಿಲ್ಲ. ಸೆಕ್ಸ್​ ನಡೆಸಿದ ಸಮಯದಲ್ಲಿ ಮೈದಾನದ ಬಳಿ ಆಕೆಯ ಕಾರು ನಿಂತಿತ್ತು ಎಂದು ಸಾಬೀತು ಮಾಡಲು ಪಕ್ಕದಲ್ಲಿದ್ದ ಯಾವುದೇ ಸಿಸಿಟಿವಿಯಲ್ಲೂ ಆಕೆಯ ಕಾರಿನ ಚಲನೆ ದಾಖಲಾಗಿಲ್ಲ ಎಂದಿದ್ದಾರೆ. ಆದರೆ, ದೂರುದಾರನ ಪರ ವಕೀಲ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಕೇವಲ ಸಿಸಿಟಿವಿ ಕ್ಯಾಮರಾ ಇಟ್ಟುಕೊಂಡು ಪ್ರಕರಣ ಅಂತ್ಯವನ್ನು ನಿರ್ಧರಿಸಲಾಗದು. ಏಕೆಂದರೆ ಆ ಸಮಯದಲ್ಲಿ ಸಿಸಿಟಿವಿ ಚಲನೆಯಲ್ಲಿ ಇರದೇ ಇರಬಹುದು ಅಥವಾ ಆಕೆಯೇ ಸಿಸಿಟಿವಿಯನ್ನು ತಪ್ಪಿಸಿರಬಹುದು ಎಂದಿದ್ದಾರೆ.

ಇತರೆ ಅಪರಾಧ ಕುರಿತ ಹಿಂದಿನ ವಿಚಾರಣೆಯಲ್ಲಿ ನ್ಯಾಯಾಧೀಶರಿಗೆ ಉತ್ತರ ನೀಡಲು ವಿಫಲವಾಗಿರುವ ಕ್ಯಾಂಡೈಸ್​, ಈ ವಿಚಾರದಲ್ಲೂ ಪ್ರಕರಣದಿಂದ ನುಣುಚಿಕೊಳ್ಳಲು ಯತ್ನಿಸುತ್ತಿದ್ದಾರೆಂದು ಹೇಳಲಾಗಿದೆ. ಈ ಹಿಂದೆ ತಾನು ಎಂದಿಗೂ ಪೊಲೀಸ್ ವಿಚಾರಣೆ ಎದುರಿಸಿಲ್ಲ ಎಂದು ಕ್ಯಾಂಡೈಸ್​ ಹೇಳಿಕೊಂಡಿದ್ದಳು. ಅಲ್ಲದೆ, 201 ರ ಮಾರ್ಚ್ ಮತ್ತು ಆಗಸ್ಟ್‌ನಲ್ಲಿ ಬಾಲಕನೊಂದಿಗೆ ಲೈಂಗಿಕ ಸಂಬಂಧ ಹೊಂದಿರುವ ಸಂಬಂಧ ಪ್ರಶ್ನಿಸಿದಾಗ ತನ್ನ ವಕೀಲರ ಸಲಹೆಯ ಮೇರೆಗೆ 'ಯಾವುದೇ ಪ್ರತಿಕ್ರಿಯೆ ಇಲ್ಲ' ಎಂದಿದ್ದಳು.

ಈಗಾಗಲೇ ಪ್ರಕರಣದಲ್ಲಿ ಸಾಕಷ್ಟು ಸುಳ್ಳುಗಳನ್ನು ಕ್ಯಾಂಡೈಸ್​ ಹೇಳಿರುವುದು ರುಜುವಾಗಿದೆ. ಶ್ರೀಮತಿ ಕ್ಯಾಂಡೈಸ್​ ಸಾಮಾನ್ಯಳಲ್ಲ, ಆಕೆ ಸ್ಮಾರ್ಟ್, ಆಕೆ ಮೂರ್ಖಳಲ್ಲ, ಅವಳು ಬುದ್ಧಿವಂತಳು, ವಯಸ್ಕಳು, ಅವಳು ಶಿಕ್ಷಕಿ, ಶಾಲೆಯಲ್ಲಿ ಬೋಧನಾ ಪಾತ್ರದಲ್ಲಿದ್ದಳು. ಇದೀಗ ಈ ಹುಡುಗನಿಂದ ಅವಳು ಓಡಿಹೋಗುತ್ತಿದ್ದಾಳೆಯೇ? ಎಂದು ಅಮರ್‌ಶ್ಯಾಮ್ ಕಾನೂನು ನ್ಯಾಯಾಲಯದ ನ್ಯಾಯಾಧೀಶ ಶ್ರೀ ಮಿಲ್ನೆ ಅವರು ತಮ್ಮ ಸಮಾರೋಪ ಭಾಷಣದಲ್ಲಿ ಅಭಿಪ್ರಾಯಪಟ್ಟಿದ್ದಾರೆ.

ಇನ್ನು ಕ್ಯಾಂಡೈಸ್​ ಪ್ರತಿ ವಿಚಾರಣೆಯಲ್ಲಿ ಏನು ಹೇಳಬೇಕೆಂದು ಮೊದಲೇ ತಯಾರಾಗಿ ಬಂದು ತನ್ನ ಮೇಲಿನ ಆರೋಪಗಳನ್ನು ಬಲವಾಗಿಯೇ ನಿರಾಕರಿಸುತ್ತಿದ್ದಾಳೆ. ಕೆಲವು ವಿಚಾರಗಳನ್ನು ಕೆದಕಿದಾಗಿ ಯಾವುದನ್ನು ಪ್ರತಿಕ್ರಿಯಿಸದೇ ನುಣುಚಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾಳೆ. 2018ರ ಸೆಪ್ಟೆಂಬರ್​ ಮತ್ತು ಅಕ್ಟೋಬರ್​ ನಡುವೆ ಸ್ನ್ಯಾಪ್​ಚಾಟ್​ ಮೂಲಕ ತನ್ನ ಟಾಪ್​ಲೆಸ್​ ಫೋಟೋಗಳನ್ನು ವಿದ್ಯಾರ್ಥಿಯೊಂದಿಗೆ ಹಂಚಿಕೊಂಡಿದ್ದ ಆರೋಪ ಮೇಲೆ ಕಳೆದ ಸೆಪ್ಟೆಂಬರ್​ನಲ್ಲಿ ಕ್ಯಾಂಡೈಸ್ ಶಿಕ್ಷೆಗೆ ಗುರಿಯಾಗಿದ್ದಳು. ಆದರೆ, ಶಿಕ್ಷಕಿಯೊಬ್ಬಳು ನಂಬಿಕೆಯ ಸ್ಥಾನದಲ್ಲಿರುವಾಗ ಮಗುವನ್ನು ಲೈಂಗಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಅಥವಾ ಪ್ರಚೋದಿಸಲು ಕಾರಣವಾಗುತ್ತದೆ ಎಂಬ ಉದ್ದೇಶದಿಂದ ಈ ಫೋಟೋ ಹಂಚಿಕೊಂಡ ಪ್ರಕರಣದಿಂದ ಆಕೆಯನ್ನು ಖುಲಾಸೆಗೊಳಿಸಲಾಗಿತ್ತು.

ಆದರೆ, 16 ವರ್ಷದೊಳಗಿನ ಮಗುವನ್ನು ಲೈಂಗಿಕ ಕ್ರಿಯೆಯಲ್ಲಿ ತೊಡಗಿಸಿಕೊಳ್ಳಲು ಅಥವಾ ಪ್ರಚೋದಿಸುವ ಮೂರು ಗಂಭೀರ ಆರೋಪಗಳ ಮೇಲೆ ತೀರ್ಪುಗಳನ್ನು ನೀಡಲು ಸಾಧ್ಯವಾಗಿರಲಿಲ್ಲ. ಈ ಬಗ್ಗೆ ಕಳೆದ ಸೋಮವಾರ ಮಾತನಾಡಿರುವ ಪ್ರಾಸಿಕ್ಯೂಟರ್ ರಿಚರ್ಡ್ ಮಿಲ್ನೆ, 16 ವರ್ಷದೊಳಗಿನ ಮಗುವನ್ನು ಲೈಂಗಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಅಥವಾ ಪ್ರಚೋದಿಸಿರುವ ಕ್ಯಾಂಡೈಸ್​, ಮೂರು ಪ್ರಕರಣಗಳಲ್ಲಿ ವಿಚಾರಣೆಯನ್ನು ಎದುರಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಘಟನೆ ಹಿನ್ನೆಲೆ ಏನು?

2018ರ ಸೆಪ್ಟೆಂಬರ್​ನಲ್ಲಿ ಕ್ರೀಡಾ ಪ್ರದರ್ಶನ ನೀಡುವಂತೆ ಬಾಲಕನನ್ನು ಕೇಳಿದ ಕ್ಯಾಂಡೈಸ್​, ವಿದ್ಯಾರ್ಥಿಯ ಫೋನ್​ ತೆಗೆದುಕೊಂಡು ಸ್ನ್ಯಾಪ್​ಚಾಟ್​ ಇನ್​ಸ್ಟಾಲ್​ ಮಾಡಿದ್ದಳು. ಇದನ್ನು ನೋಡಿದ್ದ ವಿದ್ಯಾರ್ಥಿ ಏನಿದು ವಿಚಿತ್ರ ಎಂದು ಭಾವಿಸಿದ್ದ. ಆರಂಭದಲ್ಲೇ ಸಾಮಾನ್ಯವಾಗಿಯೇ ಸಂದೇಶದ ಕಳುಹಿಸುತ್ತಿದ್ದ ಕ್ಯಾಂಡೈಸ್​, ವಾರ ಕಳೆದ ಬೆನ್ನಲ್ಲೇ ಕಾಮ ಪ್ರಚೋದನೆಯ ಸಂದೇಶ ಕಳುಹಿಸಲು ಆರಂಭಿಸಿದಳು. ಹೀಗೆ ಅನೇಕ ಬಾರಿ ಅಶ್ಲೀಲ ಚಿತ್ರಗಳನ್ನು ಕಳುಹಿಸಿದ್ದಾಳೆ. ಈ ಮೂಲಕ ಶಾಲೆಯಲ್ಲಿ ಶಿಕ್ಷಕಿ ಪಾಠ ಮಾಡುವಾಗಲೂ ವಿದ್ಯಾರ್ಥಿ ಮುಜುಗರಕ್ಕೀಡು ಮಾಡಿದ್ದಾಳೆ. ಅದೇ ವರ್ಷ ಅಕ್ಟೋಬರ್​ನಲ್ಲಿ ಒಂದು ದಿನ ಶಾಲೆ ಮುಗಿದ ಬಳಿಕ ವಿದ್ಯಾರ್ಥಿಗೆ ಮಸೇಜ್​ ಮಾಡಿದ ಕ್ಯಾಂಡೈಸ್​, ಆತನನ್ನು ತನ್ನ ಕಾರಿನಲ್ಲಿ ಪಿಕ್​ ಮಾಡಿಕೊಂಡು ಖಾಸಗಿ ಏರಿಯಾಗೆ ತೆರಳಿ ಆತನೊಂದಿಗೆ ಸೆಕ್ಸ್​ ಮಾಡಿದ್ದಾಳೆ. ಇದಾದ ಬಳಿಕ ಇಬ್ಬರ ಸಂಬಂಧ ಹೀಗೆ ಮುಂದುವರಿದಿದೆ. ಇತ್ತ ಶಾಲೆಯಲ್ಲಿ ವದಂತಿಗಳು ಸಹ ಹರಿದಾಡಲಾರಂಭಿಸಿತ್ತು. 2020ರ ಜನವರಿಯಲ್ಲಿ ತನ್ನ ಸಂಬಂಧದ ಬಗ್ಗೆ ವಿದ್ಯಾರ್ಥಿ ಮುಖ್ಯ ಶಿಕ್ಷಕನಿಗೆ ಸುಳ್ಳು ಹೇಳಿದ್ದ. ಇದರ ನಡುವೆ ನಿನ್ನ ಮಗುವಿಗೆ ಗರ್ಭಿಣಿಯಾಗಬಹುದೆಂದು ಕ್ಯಾಂಡೈಸ್​ ವಿದ್ಯಾರ್ಥಿಗೆ ಹೇಳುವ ಮೂಲಕ ಶಾಕ್​ ನೀಡಿದ್ದಳು. ಇದಾದ ಬಳಿಕ ಪ್ರಕರಣ ಕೋರ್ಟ್​ ಮೆಟ್ಟಿಲೇರಿದ್ದು, ವಿಚಾರಣೆ ನಡೆದುಕೊಂಡು ಬರುತ್ತಲೇ ಇದೆ. ಇನ್ನು ಅಂತಿಮ ನಿರ್ಧಾರಕ್ಕೆ ಬಂದಿಲ್ಲ. ಸದ್ಯ ವಿಚಾರಣೆ ಮುಂದುವರಿದಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net