ಮದುವೆ, ಸಭೆ- ಸಮಾರಂಭಕ್ಕೆ ಸಜ್ಜಾಗಿದ್ದೀರಾ? ಹಾಗಿದ್ದರೆ ಸರ್ಕಾರದ ಮಾರ್ಗಸೂಚಿಯನ್ನೊಮ್ಮೆ ಓದಿಕೊಳ್ಳಿ...

marriageweb
Published on

* ಯಾವುದೇ ಕಾರಣಕ್ಕೂ ಕಂಟೈನ್​ಮೆಂಟ್​ ಝೋನ್​ಗಳಲ್ಲಿ ವಾಸಿಸುತ್ತಿರುವವರನ್ನು ಕಾರ್ಯಕ್ರಮಗಳಿಗೆ ಆಹ್ವಾನಿಸುವಂತಿಲ್ಲ.

* ಎ.ಸಿ.ಬಳಕೆ ಮಾಡುವಂತಿಲ್ಲ. ಆದರೆ ನೈಸರ್ಗಿಕ ಗಾಳಿಗೆ ಅವಕಾಶ ಕಲ್ಪಿಸಬೇಕು.

* ಮದುವೆ ಅಥವಾ ಯಾವುದೇ ಸಮಾರಂಭದಲ್ಲಿ 50ಕ್ಕಿಂತ ಹೆಚ್ಚು ಜನರು ಸೇರುವಂತಿಲ್ಲ.

* ಕಡ್ಡಾಯವಾಗಿ ಸಂಸ್ಥೆ ಸಂಸ್ಥೆಗಳಿಂದ ಅನುಮತಿ ಪಡೆಯಬೇಕು.

ಮಾರ್ಗಸೂಚಿಯಲ್ಲಿ ಇರುವುದೇನು?

ಆದರೆ ಕೆಲವೊಂದು ಮಾರ್ಗಸೂಚಿ ಹಾಗೂ ಷರತ್ತುಗಳನ್ನು ವಿಧಿಸಿ ಆರೋಗ್ಯ ಇಲಾಖೆ ಮಾರ್ಗಸೂಚಿ ಪ್ರಕಟಿಸಿದ್ದು, ಇದನ್ನು ಕಡ್ಡಾಯವಾಗಿ ಅನುಸರಿಸುವಂತೆ ಹೇಳಿದೆ.

ಬೆಂಗಳೂರು: ಲಾಕ್​ಡೌನ್​ ಹಿನ್ನೆಲೆಯಲ್ಲಿ ಸಹಸ್ರಾರು ಮದುವೆಗಳು, ಇತರ ಸಭೆ ಸಮಾರಂಭಗಳು ಮುಂದೂಲ್ಪಟ್ಟದ್ದರಿಂದ ಈಗ ಸರ್ಕಾರ ಇವುಗಳಿಗೆ ಅನುಮತಿ ನೀಡಿದೆ.

* ಆರೋಗ್ಯ ಸೇತು ಆ್ಯಪ್ ಡೌನ್​ಲೋಡ್​ ಮಾಡಿಕೊಳ್ಳುವುದು ಕಡ್ಡಾಯ.

* ಕಾರ್ಯಕ್ರಮಕ್ಕೆ ಹಾಜರಾಗುವವರ ಹೆಸರು, ವಿಳಾಸ ಮತ್ತು ದೂರವಾಣಿ ಸಂಖ್ಯೆ ಮಾಹಿತಿ ಪಡೆಯಬೇಕು.

* ಕಾರ್ಯಕ್ರಮಕ್ಕೆ ನೋಡಲ್ ವ್ಯಕ್ತಿಯನ್ನು ನೇಮಿಸಿರಬೇಕು.

* ಸಾರ್ವಜನಿಕ ಸ್ಥಳದಲ್ಲಿ ಉಗುಳುವುದನ್ನು ನಿಷೇಧಿಸಲಾಗಿದೆ.

* ಕಾರ್ಯಕ್ರಮ ನಡೆಯುವ ಸ್ಥಳವು ಸ್ವಚ್ಛ ಹಾಗೂ ಶುಭ್ರವಾಗಿರಬೇಕು.

* ಗುಟ್ಕಾ, ಪಾನ್ ಮಸಾಲಾ, ಮದ್ಯ, ತಂಬಾಕು ಬಳಸುವಂತೆ ಇಲ್ಲ.

* ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದ ಕಡ್ಡಾಯ.

* ಕಾರ್ಯಕ್ರಮಕ್ಕೆ ಬರುವವರು 37.5 ಡಿಗ್ರಿ ಸೆಲ್ಸಿಯಸ್ ಅಥವಾ 99.5 ಫ್ಯಾರನ್ ಹೀಟ್ ತಾಪಮಾನ ಹೊಂದಿದ್ದರೆ ಅಂಥವರನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಬೇಕು.

* ಸಮಾರಂಭದ ಪ್ರವೇಶ ದ್ವಾರದಲ್ಲಿ ಥರ್ಮಲ್‌ ಸ್ಕ್ರೀನಿಂಗ್ ಕಡ್ಡಾಯ.

* ಸ್ಯಾನಿಟೈಸರ್, ಕೈತೊಳೆಯಲು ಸೋಪು ಸೇರಿದಂತೆ ಶುಚಿತ್ವದ ಕುರಿತಾದ ಇತರ ವ್ಯವಸ್ಥೆಗಳನ್ನು ಮಾಡಬೇಕು.

* ಗರ್ಭಿಣಿ, 65 ವರ್ಷದ ಮೇಲ್ಪಟ್ಟ ಹಾಗೂ 10 ವರ್ಷದ ಒಳಗಿನ ಮಕ್ಕಳಿಗೆ ಅವಕಾಶವಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net