ಅಮೃತಬಿಂದು: ಶರೀರ, ಇಂದ್ರಿಯಗಳ ಎಲ್ಲ ವ್ಯವಹಾರಗಳಿಗೆ ಮನಸ್ಸೇ ಮೂಲ ಕಾರಣ- ಹಾಗಾದರೆ ಶೀಲಗಳೆಷ್ಟು!

Sudina-7-Amrutabindu
Published on

ನಿಷಿದ್ಧಭೋಗವಿಷಯೇ ಯತ್ ಸಂಕಲ್ಪವಿವರ್ಜನಂ | ಬ್ರಹ್ಮಚರ್ಯಂ ಹಿ ತಚ್ಛೀಲಂ ತ್ರಿಂಶಮೀಶ್ವರಚೋದಿತಮ್ ||

ಶರೀರಕ್ಕೆ ಸಂಬಂಧಿಸಿದ ಐದು ಪ್ರಕಾರದ ಶೀಲಗಳನ್ನು ಹೇಳಿದ ನಂತರ ಮನಸ್ಸಿಗೆ ಸಂಬಂಧಿಸಿದ ಮೂವತ್ತೈದು ಪ್ರಕಾರದ ಶೀಲಗಳನ್ನು ವಿವರಿಸಲಾಗುತ್ತದೆ. ಶರೀರ ಮತ್ತು ಇಂದ್ರಿಯಗಳ ಎಲ್ಲ ವ್ಯವಹಾರಗಳಿಗೆ ಮನಸ್ಸೇ ಮೂಲ ಕಾರಣವಾಗಿರುವುದರಿಂದ ಇದಕ್ಕೆ ಸಂಬಂಧಿಸಿದ ಶೀಲಗಳೇ ಬಹಳಷ್ಟಿವೆ. ಈಶ್ವರನೇ ಹೇಳಿದಂತೆ ಶಾಸ್ತ್ರನಿಷಿದ್ಧ ಭೋಗಗಳ ವಿಷಯಕವಾಗಿ ಸಂಕಲ್ಪ ಮಾಡದೆ ಇರುವುದು ಬ್ರಹ್ಮಚರ್ಯವೆಂದು ಕರೆಯಲ್ಪಡುವ ಮೂವತ್ತನೆಯ ಶೀಲವಾಗಿದೆ. ನಮ್ಮ ಎಲ್ಲ ವ್ಯವಹಾರಗಳು ಸಂಕಲ್ಪದಿಂದಲೇ ಆರಂಭವಾಗುವುದರಿಂದ ನಿಷಿದ್ಧ ಸಂಕಲ್ಪಗಳಿಗೆ ಮನದಲ್ಲಿ ಅವಕಾಶ ನೀಡಬಾರದು.

| ಚಂದ್ರಜ್ಞಾನಾಗಮ (9.88) / ವ್ಯಾಖ್ಯಾನ: ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net