

ಅಶ್ರಾಂತಂ ಸಾನುರಾಗಂ ಯತ್ ಇಷ್ಟಲಿಂಗನಿರೀಕ್ಷಣಂ | ಏಕೋನವಿಂಶಕಂ ಶೀಲಂ ಉಕ್ತಂ ಭವಭಯಾಪಹಮ್ ||
ಇಲ್ಲಿ ಕಣ್ಣಿಗೆ ಸಂಬಂಧಿಸಿದ ಶೀಲಗಳ ಬಗ್ಗೆ ಹೇಳಲಾಗುತ್ತದೆ. ನಿರಂತರ ಅನುರಾಗಪೂರ್ವಕವಾಗಿ
ನೆಟ್ಟ ದೃಷ್ಟಿಯಿಂದ ಇಷ್ಟಲಿಂಗವನ್ನು ಬೇಸರಿಸಿಕೊಳ್ಳದೆ ನೋಡುವುದು ಹತ್ತೊಂಬತ್ತನೆಯ ಶೀಲವಾಗಿದೆ.
ಈ ಶೀಲದ ಆಚರಣೆಯಿಂದ ಭವಬಂಧನದ ಭಯ ದೂರಾಗುತ್ತದೆ. ಈ ತೆರನಾದ ಲಿಂಗ ನಿರೀಕ್ಷಣೆಗೆ
ತ್ರಾಟಕಯೋಗ ಎಂದೂ ಹೆಸರಿದೆ. ಕಣ್ಣಿನ ಗುಡ್ಡೆ ಮತ್ತು ಇಷ್ಟಲಿಂಗದ ಕಂತಿ ಎರಡೂ ಕಪ್ಪು ಇರುವುದರಿಂದ ಒಂದನ್ನೊಂದು ಆಕರ್ಷಿಸುತ್ತವೆ. ಈ ಕಾರಣದಿಂದಾಗಿ ಲಿಂಗನಿರೀಕ್ಷಣೆಯಿಂದ ಮನದ ಏಕಾಗ್ರತೆ ಸಹಜವಾಗಿ ಸಿದ್ಧಿಸುತ್ತದೆ.
| ಚಂದ್ರಜ್ಞಾನಾಗಮ (9.75) / ವ್ಯಾಖ್ಯಾನ: ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು